ಆನೇಕಲ್‌ನಲ್ಲಿ ಅಪಹರಣಗೊಂಡ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಬರ್ಬರ ಹತ್ಯೆ – ತಮಿಳುನಾಡಿನಲ್ಲಿ ಶವ ಪತ್ತೆ
ಆನೇಕಲ್: ಆನೇಕಲ್‌ನಲ್ಲಿ ಅಪಹರಣಗೊಂಡಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉದ್ಘಾಟನಗೊಂಡಿದೆ. ಮಾರ್ಚ್ 08 ಸಂಜೆ 7.30 ರ ಸುಮಾರಿಗೆ ಹೊನ್ನಕಳಸಾಪುರ ನಿವಾಸಿ ಗೋಪಾಲ್ ಕಾರಿನಲ್ಲಿ ಹೋಗುತ್ತಿದ್ದಾಗ, ಇನ್ನೊಂದು ವಾಹನದಿಂದ ಡಿಕ್ಕಿ ಹೊಡೆದು ಅವನ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಲಾಗಿದೆ. ನಂತರ ಅವನನ್ನು ಕಾರಿನಲ್ಲಿ ಅಪಹರಿಸಿ ತಮಿಳುನಾಡಿಗೆ ಕರೆದೊಯ್ದು ಕೊಲೆಗೈದಿದ್ದಾರೆ.
ಗೋಪಾಲ್ ಜೊತೆಗಿದ್ದ ಸ್ನೇಹಿತ ಸತೀಶ್ ಈ ಘಟನೆ ಕುರಿತು ಪೊಲೀಸ್‌ರಿಗೆ ದೂರು ನೀಡಿದ್ದಾರೆ. ಕುಟುಂಬಸ್ಥರು ಮೋಹನ್ ಬಾಬು ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಂಚೆ ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರೂ, ವೈಯಕ್ತಿಕ ದ್ವೇಷ ಮತ್ತು ವ್ಯವಹಾರ ಸಂಬಂಧಿತ ಸಮಸ್ಯೆಗಳಿಂದ ಅವರ ನಡುವೆ ತೀವ್ರ ಗೊಂದಲ ಉಂಟಾಗಿತ್ತು.
ಮಾರ್ಚ್ 09 ರಂದು ತಮಿಳುನಾಡಿನ ಡೆಂಕಣೀಕೋಟೆ ಬಳಿ ಗೋಪಾಲ್ ಶವ ಪತ್ತೆಯಾಗಿದ್ದು, ಕುಟುಂಬಸ್ಥರು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಸ್ಥಳೀಯ ಪೊಲೀಸ್ ಇಲಾಖೆ ಪ್ರಕರಣದ ತೀವ್ರ ತನಿಖೆ ನಡೆಸುತ್ತಿದ್ದು, ಆರೋಪಿ ಬಂಧನದ ಪ್ರಕ್ರಿಯೆ ಮುಂದುವರೆದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಟ್ಟೆ ಖರೀದಿಗೆ ಹೋದ ಬಾಲಕಿಗೆ ವಿದ್ಯುತ್ ಶಾಕ್: : ಭಯದಿಂದ ಶವವನ್ನು ಕೆರೆಗೆ ಎಸೆದ ಸ್ನೇಹಿತರು
ರಾಯಚೂರು: ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭದ ಹಿನ್ನಲೆಯಲ್ಲಿ, ಗುಂ... ಓದನ್ನು ಮುಂದುವರಿಸಿ
ಚಿನ್ನಾಭರಣ ದೋಚಿದ ಕ್ಯಾಬ್ ಚಾಲಕ ಹೆಬ್ಬಾಳದಲ್ಲಿ ಬಂಧಿತ
ಬೆಂಗಳೂರು: ಹೆಬ್ಬಾಳ ಪೊಲೀಸರು ತಮ್ಮ ಮನೆಗೆ ನುಗ್ಗಿ ಚಿನ್ನಾಭರಣ ಕ... ಓದನ್ನು ಮುಂದುವರಿಸಿ
6 ಸಾವಿರ ರೂ. ಲಂಚ ಸ್ವೀಕರಿಸುವಾಗ ನೇತ್ರ ವೈದ್ಯೆ ಲೋಕಾಯುಕ್ತ ಬಲೆಗೆ
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಕಿಯಾಗಿ ಕಾರ್ಯನಿ... ಓದನ್ನು ಮುಂದುವರಿಸಿ
ಸ್ಕೂಟರ್ ವಿಚಾರಕ್ಕೆ ಜಗಳ – ಯುವತಿ ಹಾಗೂ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿ ಬಂಧನ
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ತಾರಕಕ್ಕೇರಿ, ಯುವ... ಓದನ್ನು ಮುಂದುವರಿಸಿ
ಕಾರಾಗೃಹಗಳಲ್ಲಿ ಕೈದಿಗಳ ವಿಶೇಷ ಸಂದರ್ಶನಕ್ಕೆ ಹೊಸ ಮಾರ್ಗಸೂಚಿ ಪ್ರಕಟ
ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳನ್ನು ಭೇಟಿ ಮಾಡುವ ವಿ... ಓದನ್ನು ಮುಂದುವರಿಸಿ
ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಪ್ರಕರಣ: ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ವಜಾ
ಯಾದಗಿರಿ: ಯಾದಗಿರಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯವು ಮಲ್ಲಿಕಾರ್... ಓದನ್ನು ಮುಂದುವರಿಸಿ
ಅಂತಾರಾಷ್ಟ್ರೀಯ ಕಳ್ಳರ ಗ್ಯಾಂಗ್ ಹೈ-ಪ್ರೊಫೈಲ್ ಕಾರ್ಯಾಚರಣೆ – 21 ವಾಹನಗಳು ಜಪ್ತಿ
ಬೆಳಗಾವಿ: ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಅಂತಾರಾಷ್... ಓದನ್ನು ಮುಂದುವರಿಸಿ
ಫೋನ್ ಕರೆ ಹಿನ್ನೆಲೆ ಗಂಡ-ಹೆಂಡತಿ ಜಗಳ ದುರಂತ ಅಂತ್ಯ – 25 ವರ್ಷದ ವರಲಕ್ಷ್ಮಿ ಸಾವು
ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರ ಮಾಡಿದ ಫೋನ್ ಕರೆ ಹಿನ್ನೆಲ... ಓದನ್ನು ಮುಂದುವರಿಸಿ
ಕೌಟುಂಬಿಕ ಕಲಹಕ್ಕೆ ದಂಪತಿ ಆತ್ಮಹತ್ಯೆ – ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ಮಗು ಪಾರು
ಮಂಡ್ಯ: ಕೌಟುಂಬಿಕ ಕಲಹದಿಂದ ಮನನೊಂದ ದಂಪತಿ ತಮ್ಮ ಎರಡು ವರ್ಷದ ಮಗ... ಓದನ್ನು ಮುಂದುವರಿಸಿ
ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ – ಪೊಲೀಸ್ ತನಿಖೆ
ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪ... ಓದನ್ನು ಮುಂದುವರಿಸಿ