ಕಾರಾಗೃಹಗಳಲ್ಲಿ ಕೈದಿಗಳ ವಿಶೇಷ ಸಂದರ್ಶನಕ್ಕೆ ಹೊಸ ಮಾರ್ಗಸೂಚಿ ಪ್ರಕಟ
ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳನ್ನು ಭೇಟಿ ಮಾಡುವ ವಿಶೇಷ ಸಂದರ್ಶನಕ್ಕೆ ಹೊಸ ಮಾರ್ಗಸೂಚಿಗಳನ್ನು Karnataka Prisons and Correctional Services Department ಹೊರಡಿಸಿದೆ. ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಈ ಸಂದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಕೈದಿಗೆ ಗಂಭೀರ ಅನಾರೋಗ್ಯ ಅಥವಾ ಗಾಯದಿಂದ ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತಿಂಗಳಿಗೆ ಒಮ್ಮೆ ವಿಶೇಷ ಸಂದರ್ಶನಕ್ಕೆ ಅವಕಾಶ ಇರುತ್ತದೆ. ಕುಟುಂಬದಲ್ಲಿ ಸಾವು ಸಂಭವಿಸಿದಾಗ ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದ ಸಂದರ್ಭದಲ್ಲೂ ಭೇಟಿಗೆ ಅವಕಾಶ ನೀಡಲಾಗುತ್ತದೆ.
ಇದಲ್ಲದೆ, ಕೈದಿಯ ಬಿಡುಗಡೆಯ ದಿನಾಂಕಕ್ಕೆ ಎರಡು ತಿಂಗಳು ಬಾಕಿ ಇರುವಾಗ ಉದ್ಯೋಗ, ವಾಸಸ್ಥಳ ಮತ್ತು ಸಲಹೆ ವ್ಯವಸ್ಥೆಗಾಗಿ ವಿಶೇಷ ಸಂದರ್ಶನ ಮಾಡಬಹುದು. ಕೈದಿಯನ್ನು ಭೇಟಿ ಮಾಡುವವರು ವಿಕಲಚೇತನರು ಅಥವಾ ಗರ್ಭಿಣಿಯರಾಗಿದ್ದರೆ ಕೂಡ ಈ ವ್ಯವಸ್ಥೆ ಅನ್ವಯವಾಗುತ್ತದೆ.
ವಿಶೇಷ ಸಂದರ್ಶನಕ್ಕೆ ಮೊದಲು ಸಂಬಂಧಿಸಿದ ಜೈಲು ಮುಖ್ಯಸ್ಥರಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜೈಲು ಭದ್ರತಾ ಕಾರಣಕ್ಕಾಗಿ ಸಿಬ್ಬಂದಿ ನಡೆಸುವ ತಪಾಸಣೆಗೆ ಸಹಕರಿಸಬೇಕು. ನಿಗದಿತ ಸಂದರ್ಶನ ಕೊಠಡಿಯಲ್ಲಿ ಮಾತ್ರ ಭೇಟಿಗೆ ಅವಕಾಶವಿದ್ದು, ಗರಿಷ್ಠ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಒಮ್ಮೆ ಭೇಟಿಗೆ ಐದು ಮಂದಿಗಿಂತ ಹೆಚ್ಚು ಜನರಿಗೆ ಅವಕಾಶ ಇರುವುದಿಲ್ಲ ಹಾಗೂ ಜೈಲು ಅಧಿಕಾರಿಯ ಮೇಲ್ವಿಚಾರಣೆ ಕಡ್ಡಾಯವಾಗಿದೆ. ಕನಿಷ್ಠ ಎರಡು ಕೆಲಸದ ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಅತ್ಯವಶ್ಯಕ ಸಂದರ್ಭಗಳಲ್ಲಿ ಕಾರಾಗೃಹ ಡಿಜಿಪಿಯ ಅನುಮತಿ ಅಗತ್ಯವಿರುತ್ತದೆ ಎಂದು ಇಲಾಖೆ ತಿಳಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
6 ಸಾವಿರ ರೂ. ಲಂಚ ಸ್ವೀಕರಿಸುವಾಗ ನೇತ್ರ ವೈದ್ಯೆ ಲೋಕಾಯುಕ್ತ ಬಲೆಗೆ
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ನೇತ್ರ ಚಿಕಿತ್ಸಕಿಯಾಗಿ ಕಾರ್ಯನಿ... ಓದನ್ನು ಮುಂದುವರಿಸಿ
ಸ್ಕೂಟರ್ ವಿಚಾರಕ್ಕೆ ಜಗಳ – ಯುವತಿ ಹಾಗೂ ಪೋಷಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆರೋಪಿ ಬಂಧನ
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ತಾರಕಕ್ಕೇರಿ, ಯುವ... ಓದನ್ನು ಮುಂದುವರಿಸಿ
ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ ಪ್ರಕರಣ: ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನು ವಜಾ
ಯಾದಗಿರಿ: ಯಾದಗಿರಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಲಯವು ಮಲ್ಲಿಕಾರ್... ಓದನ್ನು ಮುಂದುವರಿಸಿ
ಅಂತಾರಾಷ್ಟ್ರೀಯ ಕಳ್ಳರ ಗ್ಯಾಂಗ್ ಹೈ-ಪ್ರೊಫೈಲ್ ಕಾರ್ಯಾಚರಣೆ – 21 ವಾಹನಗಳು ಜಪ್ತಿ
ಬೆಳಗಾವಿ: ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಅಂತಾರಾಷ್... ಓದನ್ನು ಮುಂದುವರಿಸಿ
ಫೋನ್ ಕರೆ ಹಿನ್ನೆಲೆ ಗಂಡ-ಹೆಂಡತಿ ಜಗಳ ದುರಂತ ಅಂತ್ಯ – 25 ವರ್ಷದ ವರಲಕ್ಷ್ಮಿ ಸಾವು
ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರ ಮಾಡಿದ ಫೋನ್ ಕರೆ ಹಿನ್ನೆಲ... ಓದನ್ನು ಮುಂದುವರಿಸಿ
ಕೌಟುಂಬಿಕ ಕಲಹಕ್ಕೆ ದಂಪತಿ ಆತ್ಮಹತ್ಯೆ – ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ಮಗು ಪಾರು
ಮಂಡ್ಯ: ಕೌಟುಂಬಿಕ ಕಲಹದಿಂದ ಮನನೊಂದ ದಂಪತಿ ತಮ್ಮ ಎರಡು ವರ್ಷದ ಮಗ... ಓದನ್ನು ಮುಂದುವರಿಸಿ
ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ – ಪೊಲೀಸ್ ತನಿಖೆ
ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪ... ಓದನ್ನು ಮುಂದುವರಿಸಿ
“ನನಗೆ ಜೀವನ ಸಾಕಾಗಿದೆ”: ಚನ್ನಗಿರಿ ಶಾಸಕರ ಪಿಎ ಆತ್ಮಹತ್ಯೆ
ಬೆಂಗಳೂರು: ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗಾ ಅವರ ವೈ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ – ಮೂವರು ವಶಕ್ಕೆ, 7 ವಿಶೇಷ ತಂಡಗಳಿಂದ ಶೋಧ
ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಕರ್ಪೂರು ಗೇ... ಓದನ್ನು ಮುಂದುವರಿಸಿ
ಬಳ್ಳಾರಿ ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ: ವಿದ್ಯಾರ್ಥಿ ಕೊಲೆ, ಆರೋಪಿ ನಾಪತ್ತೆ
.ಬಳ್ಳಾರಿ : ನಗರದಖಾಸ್ತಿ ಶಾಲೆಯ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ ಸ... ಓದನ್ನು ಮುಂದುವರಿಸಿ