ಆಸ್ತಿ ವಿವಾದ : ತಂದೆ-ಚಿಕ್ಕಪ್ಪನ ಜಗಳ ಬಿಡಿಸಲು ಹೋದ ಮಗಳ ದಾರುಣ ಹತ್ಯೆ
ಮಂಗಳೂರು : ಆಸ್ತಿ ವಿವಾದವೊಂದು ಹೆತ್ತ ಮಗಳ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಮಂಗಳೂರಿನ ಗಡಿಭಾಗದ ಮಂಜೇಶ್ವರದ ಕುಂಜತ್ತೂರು ತೂಮಿನಾಡಿನಲ್ಲಿ ನಡೆದಿದೆ. ತನ್ನ ತಂದೆ ಮತ್ತು ಚಿಕ್ಕಪ್ಪನ ನಡುವೆ ನಡೆಯುತ್ತಿದ್ದ ಜಗಳ ತಡೆಯಲು ಹೋದ 18 ವರ್ಷದ ಯುವತಿ ಜುಮೈಲಾ, ತಂದೆಯ ಬೀಸಿದ ಕತ್ತಿಯೇಟಿಗೆ ಬಲಿಯಾಗಿದ್ದಾಳೆ.
ಆರೋಪಿ ಉಮ್ಮಾರ್ ಫಾರೂಕ್ ಎಂಬಾತನಿಗೆ ತನ್ನ ಪತ್ನಿಯ ಸಹೋದರಿಯ ಕುಟುಂಬದೊಂದಿಗೆ ಆಸ್ತಿ ವಿಚಾರವಾಗಿ ದೀರ್ಘಕಾಲದ ವಿವಾದವಿತ್ತು. ಈ ಸಂಬಂಧ ಮಾತುಕತೆ ನಡೆಸಲು ಬಂದ ಪತ್ನಿಯ ಸಹೋದರಿಯ ಪತಿ ಶೇಕುಂಞ ಅವರೊಂದಿಗೆ ಉಮ್ಮಾರ್ ಗಲಾಟೆ ಆರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಉಮ್ಮಾರ್ ಕತ್ತಿಯಿಂದ ಶೇಕುಂಞ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮಧ್ಯಪ್ರವೇಶಿಸಿದ ಮಗಳು ಜುಮೈಲಾ, ದಾಳಿಯನ್ನು ತಡೆಯಲು ಯತ್ನಿಸಿದಾಗ ಕತ್ತಿಯೇಟು ಆಕೆಯ ಕುತ್ತಿಗೆಗೆ ಬಿದ್ದಿದೆ. ತೀವ್ರ ರಕ್ತಸ್ರಾವಕ್ಕೊಳಗಾದ ಜುಮೈಲಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನಾ ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ತಂದೆ ಉಮ್ಮಾರ್ ಫಾರೂಕ್‌ನನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿ ವ್ಯಾಮೋಹಕ್ಕೆ ಸ್ವಂತ ಮಗಳೇ ಬಲಿಯಾದ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಿಂಧನೂರು
ಸಿಂಧನೂರು ರೈಲ್ವೇ ನಿಲ್ದಾಣದ ಬಳಿ ಯುವತಿಯ ಶವ ಪತ್ತೆ!
ಸಿಂಧನೂರು : ಸಿಂಧನೂರು ರೈಲ್ವೇ ನಿಲ್ದಾಣದ ಬಳಿ 21 ವರ್ಷದ... ಓದನ್ನು ಮುಂದುವರಿಸಿ
ಪರಸಂಘ ಮಾಡಿದ್ದ ಜ್ಯೋತಿಷಿ ಜೊತೆ ಚಕ್ಕಂದ! ಅಕ್ರಮ ಸಂಬಂಧ ಮುಚ್ಚಲು ಕೊಲೆ : ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಏಳು ಜನರ ಬಂಧನ
ದಿನ ಬೆಳಗಾದ್ರೆ ಈ ಜ್ಯೋತಿಷಿ ಕಮಲಾಕರ್ ಭಟ್ ಖಾಸಗಿ ವಾಹಿನಿಯಲ್ಲಿ ಕುಳಿತು, ನಿಮ್ಮ ಗ್ರ... ಓದನ್ನು ಮುಂದುವರಿಸಿ
ಬೆಚ್ಚಿಬಿತ್ತು ಸಿಲಿಕಾನ್ ಸಿಟಿ : ಅನುಮಾನಾಸ್ಪದ ಸ್ಫೋಟಕ ವಸ್ತು ಪತ್ತೆ!
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸ್ಫೋ... ಓದನ್ನು ಮುಂದುವರಿಸಿ
ಸವದತ್ತಿ
10 ವರ್ಷ ಹಿಂದೆ ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಪೊಲೀಸರಿಗೆ ಕರೆ
ಸವದತ್ತಿ : ಹೆತ್ತ ತಾಯಿಯ ಮೇಲಿನ ಪ್ರೀತಿ ಮತ್ತು ಗೌರವಕ್ಕೆ ಧಕ್ಕೆ... ಓದನ್ನು ಮುಂದುವರಿಸಿ
ಸೆಂಟ್ರಲ್ ಕಮಾಂಡ್ ಸೆಂಟರ್ ಉದ್ಘಾಟಿಸಿದ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ
ಬೆಂಗಳೂರು : ಕಾರಾಗೃಹಗಳಲ್ಲಿ ಕಾನೂನು ಬಾಹಿರ ಚಟುವ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಿಮ್ಸ್ ಆಸ್ಪತ್ರೆಯ ಚಾಕು ಇರಿತ ಏಳು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು
ಹುಬ್ಬಳ್ಳಿ: ಗಾಂಜಾ ವಿಚಾರಕ್ಕಾಗಿ ಕಿಮ್ಸ್ ಆಸ್ಪತ್ರೆಯಲ್ಲೇ ಚಾಕು... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಪತಿಯಿಂದ ಪತ್ನಿಯ ಬರ್ಬರ ಹತ್ಯೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ
ಹುಬ್ಬಳ್ಳಿ : ಪತಿಯಿಂದ ಪತ್ನಿಯ ಬರ್ಬರ ಹತ್ಯೆ ಚಾಕುವಿನಿಂದ ಇರಿದು... ಓದನ್ನು ಮುಂದುವರಿಸಿ
ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ತನಿಖೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ 'SIT' ರಚನೆ
ಬೆಂಗಳೂರು : ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ ರಾಯ್ ಅವರ ಆತ್ಮಹತ್ಯ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಸ್ನೇಹಿತನಿಗೆ ಸ್ಕೆಚ್ ಹಾಕಿ ಹಣ ಸುಲಿಗೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ ಗೆಳೆಯರು..!
ಆನೇಕಲ್ : ಗೂಡ್ಸ್ ವಾಹನ ಮಾರಾಟ ಮಾಡಿ ಕ್ಯಾಬ್ ತೆಗೆದುಕೊಳ್ಳಲು ಪ... ಓದನ್ನು ಮುಂದುವರಿಸಿ
ಆನೇಕಲ್ ತಾಲ್ಲೂಕು
ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್ ದರೋಡೆ; ಯುವಕನಿಗೆ ಲಾಂಗ್ ತೋರಿಸಿ 31 ಲಕ್ಷ ಲೂಟಿ..!
ಆನೇಕಲ್ : ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಹಾಡಹಗಲೇ ಭಯಾನಕ... ಓದನ್ನು ಮುಂದುವರಿಸಿ