ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ನಕಲಿ ವೈದ್ಯರಿಂದ ಸಾರ್ವಜನಿಕರಿಗೆ ಅಪಾಯ
ಚಿಕ್ಕೋಡಿ: ದಿನೇ ದಿನೇ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದ್ದು, ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ನಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿರುವ ಘಟನೆ ಇದಾಗಿದೆ. ಅಜಿತ ಚೌಗುಲೆ ಎಂಬ ವ್ಯಕ್ತಿ ತಾನು ವೈದ್ಯನೆಂದು ಹೇಳಿಕೊಂಡು ಸ್ವಂತ ಔಷಧಿ ಅಂಗಡಿಯನ್ನು ನಡೆಸುತ್ತಿದ್ದಾನೆ ಎನ್ನಲಾಗುತ್ತಿದೆ. ಆ ಅಂಗಡಿಯಲ್ಲಿ ಯಾವುದೇ ಅಧಿಕೃತ ವೈದ್ಯರು ಅಥವಾ ಅರ್ಹ ಸಿಬ್ಬಂದಿ ಇಲ್ಲದೆ, ಅನಧಿಕೃತವಾಗಿ ರೋಗಿಗಳಿಗೆ ಔಷಧಿ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಇನ್ನೂ ಆತಂಕಕಾರಿ ವಿಷಯವೆಂದರೆ, ಆ ಔಷಧಿ ಅಂಗಡಿಯಲ್ಲಿ ಅವಧಿ ಮೀರಿದ (ಎಕ್ಸ್‌ಪೈರಿ) ಔಷಧಿಗಳನ್ನು ಇಟ್ಟುಕೊಂಡು ರೋಗಿಗಳಿಗೆ ನೀಡಲಾಗುತ್ತಿದೆ ಎನ್ನುವ ಆರೋಪಗಳು ಸ್ಥಳೀಯರಿಂದ ವ್ಯಕ್ತವಾಗಿವೆ. ಇದರಿಂದ ಬಡ ರೋಗಿಗಳ ಆರೋಗ್ಯಕ್ಕೆ ಭಾರಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಅಜಿತ ಚೌಗುಲೆ ನೀಡುವ ಔಷಧಿಗಳಿಂದ ರೋಗಿಗಳ ಆರೋಗ್ಯದಲ್ಲಿ ಏರುಪೇರು ಆದರೆ ಇದರ ಜವಾಬ್ದಾರಿ ಯಾರು ಹೊರುವರು? ನಕಲಿ ವೈದ್ಯಕೀಯ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಯಾವಾಗ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ. ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ನಕಲಿ ವೈದ್ಯಕೀಯ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಬೀದರ್ ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆ
ಬೀದರ್ : ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ನೀಡಿದ ಮಧ್ಯಾಹ್ನದ ಬಿಸಿ... ಓದನ್ನು ಮುಂದುವರಿಸಿ
ಕಂಟೇನರ್ ನಲ್ಲಿ ಗೋವುಗಳ ಅಕ್ರಮ ಸಾಗಾಟ - ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ಕಳ್ಳರು
ಕೋಲಾರ : ಕಂಟೇನರ್‌ನಲ್ಲಿ (Container) ಅಕ್ರಮವಾಗಿ ಸಾಗಿಸುತ್ತಿದ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಟೀ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ - ವೃದ್ಧನಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ : ರಸ್ತೆ ಬದಿಯ ಅಂಗಡಿ ಬಳಿ ಕುಳಿತಿದ್ದ ವೃದ್ದನ... ಓದನ್ನು ಮುಂದುವರಿಸಿ
ರನ್ ವೇಗೆ ನುಗ್ಗಿದ ಬೀದಿ ನಾಯಿ - ಸುಸ್ತಾದ ಸಿಬ್ಬಂದಿ.!
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ... ಓದನ್ನು ಮುಂದುವರಿಸಿ
ಸರ್ಕಾರಿ ಶಾಲೆಗೆ 1 ಎಕರೆ ಭೂಮಿ ದಾನ ಮಾಡಿದ ಸಚಿವ ತಂಗಡಗಿ ತಾಯಿ ಹುಲಿಗೆಮ್ಮ
ಕೊಪ್ಪಳ : ಸಚಿವ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ ತನ್ನ ಸಮಾಜಮುಖ... ಓದನ್ನು ಮುಂದುವರಿಸಿ
ಆಸ್ತಿ ಮಾಲೀಕರೇ ಎಚ್ಚರ..! ನಕಲಿ ದಾಖಲೆ ಸೃಷ್ಟಿಸಿ 158 ಎಕರೆ ಭೂಮಿ, 9 ನಿವೇಶನ ಮಾರಾಟ - ಖತರ್ನಾಕ್ ಭೂಗಳ್ಳರ ಬಂಧನ
ವಿಜಯಪುರ : ಇತ್ತೀಚೆಗೆ ನಕಲಿ ದಾಖಲೆಗಳ ಮೂಲಕ ಮೂಲ ವಾರಸುದಾರರ ಬದಲ... ಓದನ್ನು ಮುಂದುವರಿಸಿ
ಗುಡಿಬಂಡಾ
ಆದಿನಾರಾಯಣರೆಡ್ಡಿಗೆ ಭರ್ಜರಿ ಜಯ; ಕಾಂಗ್ರೆಸ್ ಮುಖಂಡರಿಂದ ಪಟಾಕಿ, ಸಿಹಿ ಹಂಚಿಕೆ
ಗುಡಿಬಂಡೆ: ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ... ಓದನ್ನು ಮುಂದುವರಿಸಿ
ಗುಡಿಬಂಡಾ
ಕೆ.ಜಿ.ಎಫ್–ಕದಿರಿ ಬೆನ್ನಲ್ಲೇ ಗುಡಿಬಂಡೆಗೂ ಚಿನ್ನದ ಹುಡುಕಾಟ...ಬಂಗಾರಕ್ಕಾಗಿ ಹೆಲಿ ಸರ್ವೆ: ಗುಡಿಬಂಡೆ ಸುತ್ತಮುತ್ತ ಜಮೀನು ಧರ ಏರಿಕೆ ನಿರೀಕ್ಷೆ
ಗುಡಿಬಂಡೆ: ಕೆ.ಜಿ.ಎಫ್ ಮತ್ತು ಅಂಧ್ರಪ್ರದೇಶದ ಕದಿರಿ ಯ ಸುತ್ತ ಮು... ಓದನ್ನು ಮುಂದುವರಿಸಿ
ವಿರಾಜಪೇಟೆ
ಮಣ್ಣು ಗುಡ್ಡೆ ಕುಸಿದು ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವು..!!!
ಕೊಡಗು : ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕದನೂರಿನಲ್ಲಿ ಮಣ್ಣು ಗು... ಓದನ್ನು ಮುಂದುವರಿಸಿ
74.80 ಕೋಟಿ ಮೌಲ್ಯದ ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವು
ಬೆಂಗಳೂರು : ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 74.... ಓದನ್ನು ಮುಂದುವರಿಸಿ