ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಬೀದರ್ ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆ
ಬೀದರ್ : ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ನೀಡಿದ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಆಘಾತಕಾರಿ ಘಟನೆ ಬೀದರ್ ನಲ್ಲಿ ನಡೆದಿದೆ. ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಬೀದರ್ ನ ಜಮಲಪೂರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಆ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಇದನ್ನು ಗಮನಿಸಿದ ಶಿಕ್ಷಕರು ಕೂಡಲೇ ಮಕ್ಕಳನ್ನು ಔರಾದ್ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದ್ರಿಂದ ಪೋಷಕರು ಗಾಬರಿಗೊಂಡು ಆಹಾರ ಪರಿಶೀಲಿಸಿದಾಗ ಬಿಸಿಯೂಟದ ಅನ್ನದಲ್ಲಿ ಹುಳುಗಳು ಪತ್ತೆಯಾಗಿದ್ದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನೆಯ ಮಾಹಿತಿ ತಿಳಿದು ತಹಶೀಲ್ದಾರ್ ಬಿಇಒ ಆಸ್ಪತ್ರೆಗೆ ಭೇಟಿ ನೀಡಿದ ಮಕ್ಕಳ ಆರೋಗ್ಯ ವಿಚಾರಿಸಿದರು. ವೈದ್ಯರ ಮಾಹಿತಿಯ ಪ್ರಕಾರ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಹೆಚ್ಚು ಕಮ್ಮಿಯಾಗಿದ್ರೆ ಮಕ್ಕಳ ಜೀವವೇ ಹೋಗುತ್ತಿತ್ತು. ಹೀಗಾಗಿ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಂಟೇನರ್ ನಲ್ಲಿ ಗೋವುಗಳ ಅಕ್ರಮ ಸಾಗಾಟ - ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ಕಳ್ಳರು
ಕೋಲಾರ : ಕಂಟೇನರ್‌ನಲ್ಲಿ (Container) ಅಕ್ರಮವಾಗಿ ಸಾಗಿಸುತ್ತಿದ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಟೀ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ - ವೃದ್ಧನಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ : ರಸ್ತೆ ಬದಿಯ ಅಂಗಡಿ ಬಳಿ ಕುಳಿತಿದ್ದ ವೃದ್ದನ... ಓದನ್ನು ಮುಂದುವರಿಸಿ
ರನ್ ವೇಗೆ ನುಗ್ಗಿದ ಬೀದಿ ನಾಯಿ - ಸುಸ್ತಾದ ಸಿಬ್ಬಂದಿ.!
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ... ಓದನ್ನು ಮುಂದುವರಿಸಿ
ಸರ್ಕಾರಿ ಶಾಲೆಗೆ 1 ಎಕರೆ ಭೂಮಿ ದಾನ ಮಾಡಿದ ಸಚಿವ ತಂಗಡಗಿ ತಾಯಿ ಹುಲಿಗೆಮ್ಮ
ಕೊಪ್ಪಳ : ಸಚಿವ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ ತನ್ನ ಸಮಾಜಮುಖ... ಓದನ್ನು ಮುಂದುವರಿಸಿ
ಆಸ್ತಿ ಮಾಲೀಕರೇ ಎಚ್ಚರ..! ನಕಲಿ ದಾಖಲೆ ಸೃಷ್ಟಿಸಿ 158 ಎಕರೆ ಭೂಮಿ, 9 ನಿವೇಶನ ಮಾರಾಟ - ಖತರ್ನಾಕ್ ಭೂಗಳ್ಳರ ಬಂಧನ
ವಿಜಯಪುರ : ಇತ್ತೀಚೆಗೆ ನಕಲಿ ದಾಖಲೆಗಳ ಮೂಲಕ ಮೂಲ ವಾರಸುದಾರರ ಬದಲ... ಓದನ್ನು ಮುಂದುವರಿಸಿ
ಗುಡಿಬಂಡಾ
ಆದಿನಾರಾಯಣರೆಡ್ಡಿಗೆ ಭರ್ಜರಿ ಜಯ; ಕಾಂಗ್ರೆಸ್ ಮುಖಂಡರಿಂದ ಪಟಾಕಿ, ಸಿಹಿ ಹಂಚಿಕೆ
ಗುಡಿಬಂಡೆ: ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ... ಓದನ್ನು ಮುಂದುವರಿಸಿ
ಗುಡಿಬಂಡಾ
ಕೆ.ಜಿ.ಎಫ್–ಕದಿರಿ ಬೆನ್ನಲ್ಲೇ ಗುಡಿಬಂಡೆಗೂ ಚಿನ್ನದ ಹುಡುಕಾಟ...ಬಂಗಾರಕ್ಕಾಗಿ ಹೆಲಿ ಸರ್ವೆ: ಗುಡಿಬಂಡೆ ಸುತ್ತಮುತ್ತ ಜಮೀನು ಧರ ಏರಿಕೆ ನಿರೀಕ್ಷೆ
ಗುಡಿಬಂಡೆ: ಕೆ.ಜಿ.ಎಫ್ ಮತ್ತು ಅಂಧ್ರಪ್ರದೇಶದ ಕದಿರಿ ಯ ಸುತ್ತ ಮು... ಓದನ್ನು ಮುಂದುವರಿಸಿ
ವಿರಾಜಪೇಟೆ
ಮಣ್ಣು ಗುಡ್ಡೆ ಕುಸಿದು ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವು..!!!
ಕೊಡಗು : ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕದನೂರಿನಲ್ಲಿ ಮಣ್ಣು ಗು... ಓದನ್ನು ಮುಂದುವರಿಸಿ
74.80 ಕೋಟಿ ಮೌಲ್ಯದ ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವು
ಬೆಂಗಳೂರು : ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 74.... ಓದನ್ನು ಮುಂದುವರಿಸಿ
ಚಿಕ್ಕೋಡಿ
ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ನಕಲಿ ವೈದ್ಯರಿಂದ ಸಾರ್ವಜನಿಕರಿಗೆ ಅಪಾಯ
ಚಿಕ್ಕೋಡಿ: ದಿನೇ ದಿನೇ ನಕಲಿ ವೈದ್ಯರ ಹಾವಳಿ ಹೆಚ್ಚುತ್ತಿದ... ಓದನ್ನು ಮುಂದುವರಿಸಿ