ಬಾಗಲಕೋಟೆ ಉಪಚುನಾವಣೆ: ಬೆಳಿಗ್ಗೆಯಿಂದಲೇ ಭರ್ಜರಿ ಮತದಾನ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಆರಂಭದಿಂದಲೇ ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕನ್ನು ಚಲಾಯಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಈ ಉಪಚುನಾವಣೆಯಲ್ಲಿ ಒಟ್ಟು 9 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಪ್ರಮುಖವಾಗಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಡುವೆ ನೇರ ಪೈಪೋಟಿ ಇದೆ.
ಬೆಳಿಗ್ಗೆ 9ರಿಂದ 10 ಗಂಟೆಯೊಳಗೆ ಪ್ರಮುಖ ಅಭ್ಯರ್ಥಿಗಳು ತಮ್ಮ ಮತ ಚಲಾಯಿಸಲಿದ್ದಾರೆ. ಚರಂತಿಮಠ್ ಅವರು ಬಾಗಲಕೋಟೆ ನಗರದ ಶಾಸಕರ ಮಾದರಿ ಪ್ರಾಥಮಿಕ ಶಾಲೆ ನಂ.4ರ 166ನೇ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದರೆ, ಉಮೇಶ್ ಮೇಟಿ ತಮ್ಮ ಸ್ವಗ್ರಾಮ ತಿಮ್ಮಾಪೂರದ 39ನೇ ಮತಗಟ್ಟೆಯಲ್ಲಿ ಮತದಾನ ಮಾಡಲು ನಿರ್ಧರಿಸಿದ್ದಾರೆ.
ಈ ಚುನಾವಣೆಗೆ ಕ್ಷೇತ್ರದಲ್ಲಿ ಒಟ್ಟು 322 ಮತಗಟ್ಟೆಗಳು ನಿರ್ಮಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಮತ್ತು ಮೂವರು ಪೋಲಿಂಗ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಒಟ್ಟು 1564 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಪೊಲೀಸ್ ಹಾಗೂ ಶಸ್ತ್ರಸಜ್ಜಿತ ಪಡೆ ಸೇರಿ ಸುಮಾರು 2500 ಮಂದಿ ಭದ್ರತಾ ಕರ್ತವ್ಯದಲ್ಲಿ ತೊಡಗಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದ್ದು, ಚುನಾವಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಜೊತೆಗೆ 2 ಪಿಂಕ್ ಮತಗಟ್ಟೆ, 1 ಯುವ ಮತಗಟ್ಟೆ, 1 ವಿಕಲಚೇತನರ ಮತಗಟ್ಟೆ ಹಾಗೂ 1 ಥೀಮ್ ಮತಗಟ್ಟೆ ಸೇರಿದಂತೆ 5 ವಿಶೇಷ ಮತಗಟ್ಟೆಗಳು ಸ್ಥಾಪಿಸಲಾಗಿದೆ.
ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರು ಇದ್ದು, ಅವರಲ್ಲಿ 1,26,999 ಪುರುಷರು ಹಾಗೂ 1,32,775 ಮಹಿಳೆಯರು ಸೇರಿದ್ದಾರೆ. 4,387 ಯುವ ಮತದಾರರು ಇದೇ ಮೊದಲ ಬಾರಿಗೆ ಮತದಾನ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಒಟ್ಟಿನಲ್ಲಿ, ಶಾಂತಿಯುತ ಹಾಗೂ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ನಡುವೆ ಮತದಾನ ಪ್ರಕ್ರಿಯೆ ಸುಗಮವಾಗಿ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತಿಕೋಟಾ
ತಿಕೋಟಾ ತಾಲ್ಲೂಕಿನಲ್ಲಿ ಭೂಕಂಪನ ಅನುಭವ – ಜನರು ಮನೆಬಿಟ್ಟು ಹೊರಗೆ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲ್ಲೂಕು ಸೇರಿದಂತೆ ಹಲವು ಭಾಗಗಳಲ್ಲ... ಓದನ್ನು ಮುಂದುವರಿಸಿ
ಜನತಾ ದರ್ಶನದಲ್ಲಿ ಗದ್ದಲ: ಮನವಿ ನೀಡಲು ಬಂದ ಮುಖಂಡನನ್ನು ಎಳೆದೊಯ್ದ ಪೊಲೀಸರು
ತುಮಕೂರು: ಜನತಾ ದರ್ಶನ ಕಾರ್ಯಕ್ರಮದ ವೇಳೆ ಗೃಹ ಸಚಿವ ಜಿ. ಪರಮೇಶ್... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆಯಲ್ಲಿ ಅತಿಥಿ ಶಿಕ್ಷಕರ ಬೀಳ್ಕೊಡುಗೆ: ಶಿಕ್ಷಣ ಸೇವೆಗೆ ಕೃತಜ್ಞತೆ
ಗುಡಿಬಂಡೆ: ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ನೀಡಿ, ಅವರನ್ನು ಸುಶಿಕ... ಓದನ್ನು ಮುಂದುವರಿಸಿ
ಗೃಹಲಕ್ಷ್ಮಿ ಬೇಡ, ಮನೆ ಬೇಕು”: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆಯ ಮನವಿ
ಬೆಂಗಳೂರು: “ಗೃಹಲಕ್ಷ್ಮಿ ಬೇಡ, ಮನೆ ಬೇಕು” ಎಂಬ ಭಾವನಾತ್ಮಕ ಮನವಿ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಹಣವೂ ಹೋಯ್ತು, ಮಗಳೂ ಇಲ್ಲ: ಹುಬ್ಬಳ್ಳಿಯಲ್ಲಿ ತಾಯಿ ಕಣ್ಣೀರಿನ ಕತೆ
ಹುಬ್ಬಳ್ಳಿ: ನಗರದಲ್ಲಿ ಯುವತಿ ನಾಪತ್ತೆ ಪ್ರಕರಣವೊಂದು ಗಂಭೀರ ತಿರ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅರಟಾಳ ರುದ್ರಗೌಡರಿಗೆ ಯೋಗ್ಯ ಗೌರವ ಸಿಗಲಿ: ಬಸವರಾಜ ಬೊಮ್ಮಾಯಿ ಆಗ್ರಹ
ಹಾವೇರಿ (ಶಿಗ್ಗಾವಿ): ಕೆಎಲ್‌ಇ ಸಂಸ್ಥೆಯನ್ನು ಕಟ್ಟಿದ ಸಪ್ತರ್ಷಿಗ... ಓದನ್ನು ಮುಂದುವರಿಸಿ
ಉಪಚುನಾವಣೆ ಕಾವು : ಕಾಂಗ್ರೆಸ್ ಪ್ರತಿಷ್ಠೆ vs ಬಿಜೆಪಿ ಸವಾಲು: ಎರಡು ಕ್ಷೇತ್ರಗಳಲ್ಲಿ ಕಠಿಣ ಪೈಪೋಟಿ
ಬೆಂಗಳೂರು: ಕರ್ನಾಟಕದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸ... ಓದನ್ನು ಮುಂದುವರಿಸಿ
23ರ ಯುವಕ ಕಾರ್ಪೊರೇಟ್ ಜಾಬ್ ಬಿಟ್ಟು ಸ್ಟಾರ್ಟ್‌ಅಪ್‌ಗೆ ಕೈ ಹಾಕಿದ ಕಥೆ
ಬೆಂಗಳೂರು: ಓದು ಮುಗಿಸಿ ಉತ್ತಮ ಉದ್ಯೋಗ ಪಡೆದು ಸ್ಥಿರ ಜೀವನ ನಡೆಸ... ಓದನ್ನು ಮುಂದುವರಿಸಿ
ಮುಸ್ಲಿಂ ಮತದಾರರಿಗೆ ಪ್ರದೀಪ್ ಈಶ್ವರ್ ಮನವಿ: ಕಾಂಗ್ರೆಸ್‌ಗೆ ಬೆಂಬಲ ಕೋರಿಕೆ
ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ತೀವ್... ಓದನ್ನು ಮುಂದುವರಿಸಿ
ಖರ್ಗೆ ಹೇಳಿಕೆಗೆ ಸಿ.ಟಿ. ರವಿ ಕಿಡಿ: ‘ಮಾನಸಿಕ ಅಸ್ವಸ್ಥತೆ’ ಆರೋಪ
ಬೆಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಎಐಸಿಸಿ ಅಧ್ಯಕ... ಓದನ್ನು ಮುಂದುವರಿಸಿ