ಉಪಚುನಾವಣೆ ಕಾವು : ಕಾಂಗ್ರೆಸ್ ಪ್ರತಿಷ್ಠೆ vs ಬಿಜೆಪಿ ಸವಾಲು: ಎರಡು ಕ್ಷೇತ್ರಗಳಲ್ಲಿ ಕಠಿಣ ಪೈಪೋಟಿ
ಬೆಂಗಳೂರು: ಕರ್ನಾಟಕದ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕದನ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಇಂದು ಬೆಳಿಗ್ಗೆಯಿಂದ ಮತದಾನ ಪ್ರಾರಂಭವಾಗಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಇದು ಪ್ರತಿಷ್ಠೆಯ ಹೋರಾಟವಾಗಿದ್ದರೆ, ಪ್ರತಿಪಕ್ಷ ಬಿಜೆಪಿಗೆ ಸವಾಲಿನ ಸಮರವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ರಾಜಕೀಯ ಕಾವು ಹೆಚ್ಚಾಗಿದೆ. ಮಂಗಳವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕಳೆದ ಕೆಲ ದಿನಗಳಿಂದ ಕ್ಷೇತ್ರದಲ್ಲೇ ತಂಗಿದ್ದ ಪ್ರಮುಖ ನಾಯಕರು ವಾಪಸ್ಸಾಗಿದ್ದಾರೆ. ಅಭ್ಯರ್ಥಿಗಳು ಮನೆಮನೆ ಪ್ರಚಾರ ಪೂರ್ಣಗೊಳಿಸಿ ಇದೀಗ ಮತದಾನ ಪ್ರಕ್ರಿಯೆಗೆ ಸಜ್ಜಾಗಿದ್ದಾರೆ.
ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಕಂಡುಬರುತ್ತಿದೆ. ಒಟ್ಟು 2,59,797 ಮತದಾರರಿರುವ ಈ ಕ್ಷೇತ್ರದಲ್ಲಿ 332 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1,564 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಿರಿಯ ನಾಗರಿಕರಿಗೆ ಮನೆಮನೆ ಮತದಾನ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಇನ್ನೊಂದೆಡೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿ 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 76 ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲಾಗಿದೆ. 1,489 ಸಿಬ್ಬಂದಿ ನಿಯೋಜನೆಯೊಂದಿಗೆ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಮತಗಟ್ಟೆ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನಕ್ಕೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ. ಮತದಾರರು ಉತ್ಸಾಹದಿಂದ ತಮ್ಮ ಮತದಾನ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತಿಕೋಟಾ
ತಿಕೋಟಾ ತಾಲ್ಲೂಕಿನಲ್ಲಿ ಭೂಕಂಪನ ಅನುಭವ – ಜನರು ಮನೆಬಿಟ್ಟು ಹೊರಗೆ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲ್ಲೂಕು ಸೇರಿದಂತೆ ಹಲವು ಭಾಗಗಳಲ್ಲ... ಓದನ್ನು ಮುಂದುವರಿಸಿ
ಜನತಾ ದರ್ಶನದಲ್ಲಿ ಗದ್ದಲ: ಮನವಿ ನೀಡಲು ಬಂದ ಮುಖಂಡನನ್ನು ಎಳೆದೊಯ್ದ ಪೊಲೀಸರು
ತುಮಕೂರು: ಜನತಾ ದರ್ಶನ ಕಾರ್ಯಕ್ರಮದ ವೇಳೆ ಗೃಹ ಸಚಿವ ಜಿ. ಪರಮೇಶ್... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪಚುನಾವಣೆ: ಬೆಳಿಗ್ಗೆಯಿಂದಲೇ ಭರ್ಜರಿ ಮತದಾನ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬ... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆಯಲ್ಲಿ ಅತಿಥಿ ಶಿಕ್ಷಕರ ಬೀಳ್ಕೊಡುಗೆ: ಶಿಕ್ಷಣ ಸೇವೆಗೆ ಕೃತಜ್ಞತೆ
ಗುಡಿಬಂಡೆ: ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ನೀಡಿ, ಅವರನ್ನು ಸುಶಿಕ... ಓದನ್ನು ಮುಂದುವರಿಸಿ
ಗೃಹಲಕ್ಷ್ಮಿ ಬೇಡ, ಮನೆ ಬೇಕು”: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆಯ ಮನವಿ
ಬೆಂಗಳೂರು: “ಗೃಹಲಕ್ಷ್ಮಿ ಬೇಡ, ಮನೆ ಬೇಕು” ಎಂಬ ಭಾವನಾತ್ಮಕ ಮನವಿ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಹಣವೂ ಹೋಯ್ತು, ಮಗಳೂ ಇಲ್ಲ: ಹುಬ್ಬಳ್ಳಿಯಲ್ಲಿ ತಾಯಿ ಕಣ್ಣೀರಿನ ಕತೆ
ಹುಬ್ಬಳ್ಳಿ: ನಗರದಲ್ಲಿ ಯುವತಿ ನಾಪತ್ತೆ ಪ್ರಕರಣವೊಂದು ಗಂಭೀರ ತಿರ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅರಟಾಳ ರುದ್ರಗೌಡರಿಗೆ ಯೋಗ್ಯ ಗೌರವ ಸಿಗಲಿ: ಬಸವರಾಜ ಬೊಮ್ಮಾಯಿ ಆಗ್ರಹ
ಹಾವೇರಿ (ಶಿಗ್ಗಾವಿ): ಕೆಎಲ್‌ಇ ಸಂಸ್ಥೆಯನ್ನು ಕಟ್ಟಿದ ಸಪ್ತರ್ಷಿಗ... ಓದನ್ನು ಮುಂದುವರಿಸಿ
23ರ ಯುವಕ ಕಾರ್ಪೊರೇಟ್ ಜಾಬ್ ಬಿಟ್ಟು ಸ್ಟಾರ್ಟ್‌ಅಪ್‌ಗೆ ಕೈ ಹಾಕಿದ ಕಥೆ
ಬೆಂಗಳೂರು: ಓದು ಮುಗಿಸಿ ಉತ್ತಮ ಉದ್ಯೋಗ ಪಡೆದು ಸ್ಥಿರ ಜೀವನ ನಡೆಸ... ಓದನ್ನು ಮುಂದುವರಿಸಿ
ಮುಸ್ಲಿಂ ಮತದಾರರಿಗೆ ಪ್ರದೀಪ್ ಈಶ್ವರ್ ಮನವಿ: ಕಾಂಗ್ರೆಸ್‌ಗೆ ಬೆಂಬಲ ಕೋರಿಕೆ
ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ತೀವ್... ಓದನ್ನು ಮುಂದುವರಿಸಿ
ಖರ್ಗೆ ಹೇಳಿಕೆಗೆ ಸಿ.ಟಿ. ರವಿ ಕಿಡಿ: ‘ಮಾನಸಿಕ ಅಸ್ವಸ್ಥತೆ’ ಆರೋಪ
ಬೆಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಎಐಸಿಸಿ ಅಧ್ಯಕ... ಓದನ್ನು ಮುಂದುವರಿಸಿ