ಬಕೆಟ್‌ಗೆ ಬಿದ್ದು ಮಗು ಸಾವು - ಮಗುವಿನ ಅಕಾಲಿಕ ಸಾವು ತಾಳಲಾರದೆ ತಾಯಿ ಆತ್ಮಹತ್ಯೆ
ಬೆಂಗಳೂರು: ನಗರದ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಮನಕಲಕುವ ಘಟನೆೊಂದು ನಡೆದಿದೆ. ಒಣಹಾಕಿದ್ದ ಬಟ್ಟೆ ತರಲು ತೆರಳಿದ್ದ ವೇಳೆ ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು ಸಾವನ್ನಪ್ಪಿದ್ದು, ಈ ಘಟನೆಗೆ ಮನಸ್ಸಿಗೆ ಬೇಸರಗೊಂಡ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮಗುವನ್ನು ಅಗಸ್ತ್ಯ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ತಾಯಿ ಪ್ರತಿಭಾ ಎಂದು ತಿಳಿದುಬಂದಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ತಾಯಿ ಮತ್ತು ಮಗು ಮಾತ್ರ ಇದ್ದರು.
ಪ್ರತಿಭಾ ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದರು. ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದು, ಪತಿ ಕೆಲಸದ ನಿಮಿತ್ತ ಹೊರಗಿದ್ದರು. ರಾತ್ರಿ ಮನೆಗೆ ವಾಪಸ್ ಬಂದ ಮಹಂತೇಶ್ ಈ ಘಟನೆ ಗಮನಿಸಿದ್ದಾರೆ. ಪತ್ನಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ, ತಮ್ಮ ಬಳಿ ಇದ್ದ ಕೀಲಿಯಿಂದ ಬಾಗಿಲು ತೆರೆದು ಒಳಗೆ ಪ್ರವೇಶಿಸಿದಾಗ ಪ್ರತಿಭಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಪರಿಶೀಲಿಸಿದಾಗ ಅದು ಈಗಾಗಲೇ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಸ್ಥಳದಲ್ಲೇ ಪ್ರತಿಭಾ ಬರೆದಿಟ್ಟಿದ್ದ ಡೆತ್‌ನೋಟ್ ಹಾಗೂ ಖಾಲಿಯಾಗಿದ್ದ ಮಾತ್ರೆಗಳ ಸ್ಟ್ರಿಪ್ ಪತ್ತೆಯಾಗಿದೆ. ಡೆತ್‌ನೋಟ್‌ನಲ್ಲಿ, ಬಟ್ಟೆ ತರಲು ಟೆರೆಸ್‌ಗೆ ತೆರಳಿದ ವೇಳೆ ಮಗು ಆಟವಾಡುತ್ತ ಬಚ್ಚಲು ಮನೆಗೆ ಹೋಗಿ, ಅಲ್ಲಿ ನೀರಿನ ಬಕೆಟ್‌ನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಉಲ್ಲೇಖಿಸಲಾಗಿದೆ. ಮಗುವಿನ ಸಾವಿಗೆ ತಾನೇ ಕಾರಣ ಎಂಬ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ಬರೆದಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಪ್ರತಿಭಾ ಮೊದಲು ಮಾತ್ರೆ ಸೇವಿಸಿ ಹಾಗೂ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ನೇಣಿಗೆ ಶರಣಾಗಿರುವ ಸಾಧ್ಯತೆ ಇದೆ. ಈ ಕುರಿತು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನಕಲಿ ಸ್ಲಿಂ ಪೌಡರ್ ದಂಧೆ ಬಯಲು: ತುಮಕೂರು ಪೊಲೀಸರ ದೊಡ್ಡ ದಾಳಿ
ತುಮಕೂರು: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮೂಲಕ ತೂಕ ಇಳಿಕೆ ಪೌಡರ್ ಸ... ಓದನ್ನು ಮುಂದುವರಿಸಿ
ಸೈಬರ್ ಕ್ರೈಂ ಹೆಚ್ಚಳ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ
ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ರಾಜ... ಓದನ್ನು ಮುಂದುವರಿಸಿ
ಆನ್‌ಲೈನ್ ಟ್ರೇಡಿಂಗ್ ಮೋಸ: ಪ್ರೀತಿಯಿಂದ ಹಣ ಕಸಿದ ಮಹಿಳೆ
ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಡೆಯುವ ವಂಚನೆ ಪ್ರಕರ... ಓದನ್ನು ಮುಂದುವರಿಸಿ
ಹಣದ ವಿಚಾರಕ್ಕೆ ಹೆಂಡ್ತಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ ಗಂಡ!
ಬೆಂಗಳೂರು: ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್... ಓದನ್ನು ಮುಂದುವರಿಸಿ
ಸಾಗರ
ಹಣಕಾಸು ವಿವಾದ: ಹೋಟೆಲ್ ಮಾಲೀಕನಿಂದ ಕಾರ್ಮಿಕನ ಹತ್ಯೆ
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂ... ಓದನ್ನು ಮುಂದುವರಿಸಿ
ಹನೂರು
ಪೋಷಕರ ವಿರೋಧ ತಾಳಲಾರದೆ ಪ್ರೇಮಿಗಳು ಆತ್ಮಹತ್ಯೆ
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪ್... ಓದನ್ನು ಮುಂದುವರಿಸಿ
ಟೆಂಪೋದಲ್ಲೇ ಶವವಾಗಿ ಪತ್ತೆಯಾದ ಚಾಲಕ: ಸಾವಿನ ಸುತ್ತ ಅನುಮಾನಗಳ ಮಳೆ
ಚಿಕ್ಕಬಳ್ಳಾಪುರ: ಬಾಡಿಗೆಗೆ ತೆರಳಿದ ಟೆಂಪೋ ಚಾಲಕನೊಬ್ಬ, ತನ್ನದೇ... ಓದನ್ನು ಮುಂದುವರಿಸಿ
ಕಾಫಿ ಶಾಪ್ ಬಳಿ ಡ್ರಗ್ಸ್ ಆರೋಪ: ಸಿಬ್ಬಂದಿ-ಯುವಕರ ನಡುವೆ ಭಾರಿ ಗಲಾಟೆ
ಬೆಂಗಳೂರು: ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಸಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ದೇಗುಲ ವಿವಾದ: ಎರಡು ಗುಂಪುಗಳ ನಡುವೆ ಘರ್ಷಣೆ ಪೊಲೀಸರಿಂದ ಲಾಠಿ ಪ್ರಹಾರ
ಬೆಂಗಳೂರು ಗ್ರಾಮಾಂತರ: ದೇಗುಲದ ಅಸ್ತಿತ್ವದ ವಿಚಾರವಾಗಿ ಎರಡು ಗುಂ... ಓದನ್ನು ಮುಂದುವರಿಸಿ
ಕಾರು ಬೆಂಕಿಗಾಹುತಿಯಾಗಿ ಮೂವರು ಸಾವು – ಓರ್ವ ಗಂಭೀರ ಗಾಯ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪ... ಓದನ್ನು ಮುಂದುವರಿಸಿ