ನಕಲಿ ಸ್ಲಿಂ ಪೌಡರ್ ದಂಧೆ ಬಯಲು: ತುಮಕೂರು ಪೊಲೀಸರ ದೊಡ್ಡ ದಾಳಿ

ತುಮಕೂರು: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮೂಲಕ ತೂಕ ಇಳಿಕೆ ಪೌಡರ್ ಸೇರಿದಂತೆ ನಕಲಿ ಆಯುರ್ವೇದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ರಾಕೆಟ್‌ನ್ನು ತುಮಕೂರು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ದೆಹಲಿ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಂಸ್ಥೆಯೊಂದರ ಮಾಲಕರು ತಮ್ಮ ಟ್ರೇಡ್‌ಮಾರ್ಕ್ ದುರುಪಯೋಗವಾಗಿದೆ ಎಂದು 2025ರ ಆಗಸ್ಟ್ 14ರಂದು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಆರೋಪಿಗಳು ‘RK ಟ್ರೇಡರ್ಸ್’ ಹೆಸರಿನಲ್ಲಿ ಆನ್‌ಲೈನ್ ಮೂಲಕ ಗ್ರಾಹಕರಿಗೆ, ವಿಶೇಷವಾಗಿ ಯುವಕರಿಗೆ ಅಪಾಯ ಉಂಟುಮಾಡಬಹುದಾದ ನಕಲಿ ತೂಕ ಇಳಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು.

 

ಮಾರ್ಚ್ 27ರಂದು ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು, ದೊಡ್ಡ ಪ್ರಮಾಣದ ನಕಲಿ ಉತ್ಪನ್ನಗಳು, ಆಯುರ್ವೇದ ಟ್ಯಾಬ್ಲೆಟ್‌ಗಳು, ಕಾಸ್ಮೆಟಿಕ್ ಕ್ರೀಮ್‌ಗಳು ಮತ್ತು ಪೌಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು.

 

ಕೆಲ ಸಂದರ್ಭಗಳಲ್ಲಿ ಸಾಮಾನ್ಯ ಗೋಧಿ ಹಿಟ್ಟನ್ನೇ ‘ಸ್ಲಿಂ ಪೌಡರ್’ ಎಂದು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯ ಪುತ್ರರೂ ಭಾಗಿಯಾಗಿದ್ದು, ಸುಮಾರು ಒಂದೂವರೆ ವರ್ಷಗಳಿಂದ RK ಟ್ರೇಡರ್ಸ್, MK ಟ್ರೇಡರ್ಸ್ ಮತ್ತು MHK ಟ್ರೇಡರ್ಸ್ ಹೆಸರಿನಲ್ಲಿ ಈ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ವಿಶೇಷ ತಂಡ, ಮುಖ್ಯ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಮುಂದುವರಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 hours ago

   
Image 1
Image 1
ಬೆಂಗಳೂರು ನಗರ

ಸೈಬರ್ ಕ್ರೈಂ ಹೆಚ್ಚಳ: ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ಸೈಬರ್ ಅಪರಾಧಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ರಾಜ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಆನ್‌ಲೈನ್ ಟ್ರೇಡಿಂಗ್ ಮೋಸ: ಪ್ರೀತಿಯಿಂದ ಹಣ ಕಸಿದ ಮಹಿಳೆ

ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಡೆಯುವ ವಂಚನೆ ಪ್ರಕರ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಹಣದ ವಿಚಾರಕ್ಕೆ ಹೆಂಡ್ತಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ ಗಂಡ!

ಬೆಂಗಳೂರು: ನಗರದ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಶಿವಮೊಗ್ಗ

ಸಾಗರ

ಹಣಕಾಸು ವಿವಾದ: ಹೋಟೆಲ್ ಮಾಲೀಕನಿಂದ ಕಾರ್ಮಿಕನ ಹತ್ಯೆ

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಾಮರಾಜನಗರ

ಹನೂರು

ಪೋಷಕರ ವಿರೋಧ ತಾಳಲಾರದೆ ಪ್ರೇಮಿಗಳು ಆತ್ಮಹತ್ಯೆ

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಪ್... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ಬಕೆಟ್‌ಗೆ ಬಿದ್ದು ಮಗು ಸಾವು - ಮಗುವಿನ ಅಕಾಲಿಕ ಸಾವು ತಾಳಲಾರದೆ ತಾಯಿ ಆತ್ಮಹತ್ಯೆ

ಬೆಂಗಳೂರು: ನಗರದ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಚಿಕ್ಕಬಳ್ಳಾಪುರ

ಟೆಂಪೋದಲ್ಲೇ ಶವವಾಗಿ ಪತ್ತೆಯಾದ ಚಾಲಕ: ಸಾವಿನ ಸುತ್ತ ಅನುಮಾನಗಳ ಮಳೆ

ಚಿಕ್ಕಬಳ್ಳಾಪುರ: ಬಾಡಿಗೆಗೆ ತೆರಳಿದ ಟೆಂಪೋ ಚಾಲಕನೊಬ್ಬ, ತನ್ನದೇ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ಕಾಫಿ ಶಾಪ್ ಬಳಿ ಡ್ರಗ್ಸ್ ಆರೋಪ: ಸಿಬ್ಬಂದಿ-ಯುವಕರ ನಡುವೆ ಭಾರಿ ಗಲಾಟೆ

ಬೆಂಗಳೂರು: ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಸಿ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ದೇಗುಲ ವಿವಾದ: ಎರಡು ಗುಂಪುಗಳ ನಡುವೆ ಘರ್ಷಣೆ ಪೊಲೀಸರಿಂದ ಲಾಠಿ ಪ್ರಹಾರ

ಬೆಂಗಳೂರು ಗ್ರಾಮಾಂತರ: ದೇಗುಲದ ಅಸ್ತಿತ್ವದ ವಿಚಾರವಾಗಿ ಎರಡು ಗುಂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ತುಮಕೂರು

ಕಾರು ಬೆಂಕಿಗಾಹುತಿಯಾಗಿ ಮೂವರು ಸಾವು – ಓರ್ವ ಗಂಭೀರ ಗಾಯ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1