ಬಂಡೀಪುರದಲ್ಲಿ ರಣಹದ್ದುಗಳ ಹಾರಾಟ – ಪ್ರವಾಸಿಗರಿಗೆ ಅಪರೂಪದ ದೃಶ್ಯ! ರಣಹದ್ದುಗಳ ಸಂಖ್ಯೆ ಏರಿಕೆ – ಪ್ರಕೃತಿಗೆ ಶುಭ ಸೂಚನೆ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರಣಹದ್ದುಗಳ ಹಿಂಡು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರಿಗೆ ಅಪರೂಪದ ದೃಶ್ಯಗಳನ್ನು ನೀಡುತ್ತಿದೆ. ಸಫಾರಿಗೆ ತೆರಳಿದ ಪ್ರವಾಸಿಗರು ಅರಣ್ಯದ ವಿವಿಧ ಭಾಗಗಳಲ್ಲಿ ರಣಹದ್ದುಗಳು ಗುಂಪುಗಳಾಗಿ ಹಾರಾಡುತ್ತಿರುವ ದೃಶ್ಯಗಳನ್ನು ಕಂಡು, ಅವುಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. bಸಾಮಾನ್ಯವಾಗಿ ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಈ ಪಕ್ಷಿಗಳು, ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅರಣ್ಯ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ಬಂಡೀಪುರದಲ್ಲಿ 200ಕ್ಕೂ ಹೆಚ್ಚು ಪಕ್ಷಿ ಜಾತಿಗಳು ಕಂಡುಬರುತ್ತಿದ್ದು, ಅದರಲ್ಲಿ ಕೆಂಪುತಲೆ ರಣಹದ್ದು ಸೇರಿದಂತೆ ಹಲವು ಅಪರೂಪದ ಜಾತಿಗಳು ಸೇರಿವೆ. ರಣಹದ್ದುಗಳ ಸಂಖ್ಯೆಯಲ್ಲಿ ಕಂಡುಬರುತ್ತಿರುವ ಈ ಏರಿಕೆ ಪರಿಸರ ಸಮತೋಲನದ ದೃಷ್ಟಿಯಿಂದ ಉತ್ತಮ ಸೂಚಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹವಾಮಾನ ಬದಲಾವಣೆ, ಆಹಾರ ಲಭ್ಯತೆ ಹಾಗೂ ಸಂರಕ್ಷಣಾ ಕ್ರಮಗಳು ಈ ಬೆಳವಣಿಗೆಗೆ ಕಾರಣವಾಗಿರಬಹುದು ಎಂದು ತಿಳಿಸಲಾಗಿದೆ. ಒಟ್ಟಾರೆ, ನಶಿಸುತ್ತಿದ್ದ ರಣಹದ್ದುಗಳ ಮರುಕಳಿಕೆ ಪ್ರಕೃತಿ ಸಂರಕ್ಷಣೆಗೆ ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗಾಂಧಿನಗರದಲ್ಲಿ ನಕಲಿ ಫಾರಿನ್ ಸಿಗರೇಟ್ ಅಡ್ಡೆ ಬಯಲು – ಲಕ್ಷಾಂತರ ಮೌಲ್ಯದ ವಸ್ತು ಸೀಜ್!
ಬೆಂಗಳೂರು: ನಗರದ ಗಾಂಧಿನಗರದಲ್ಲಿ ನಕಲಿ ಫಾರಿನ್ ಸಿಗರೇಟ್ ತಯಾರಿಕ... ಓದನ್ನು ಮುಂದುವರಿಸಿ
ಹುಟ್ಟುಹಬ್ಬದ ಹುಚ್ಚಾಟ: ನಡು ರಸ್ತೆಯಲ್ಲಿ ಪಟಾಕಿ ಸಿಡಿಸಿದ ವಿದ್ಯಾರ್ಥಿಗಳು!
ಬೆಂಗಳೂರು: ಹುಟ್ಟುಹಬ್ಬದ ನೆಪದಲ್ಲಿ ಕಾಲೇಜು ವಿದ್ಯಾರ್ಥಿಗಳು ನಡು... ಓದನ್ನು ಮುಂದುವರಿಸಿ
ಹೂ ಮಾರಾಟಕ್ಕೆ ಜಡೆ ಜಗಳ – ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರ ರಂಪಾಟ!
ಬೆಂಗಳೂರು: ಹೂ ಮಾರಾಟದ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಜಗಳ... ಓದನ್ನು ಮುಂದುವರಿಸಿ
ಮಂಗಳೂರು
ಕರಾವಳಿಯಲ್ಲಿ ತೀವ್ರ ಬಿಸಿ ಎಚ್ಚರಿಕೆ – ಮೂರು ದಿನ ‘ಯೆಲ್ಲೋ ಅಲರ್ಟ್’ ಘೋಷಣೆ!
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಉ... ಓದನ್ನು ಮುಂದುವರಿಸಿ
ಮಧ್ಯ ರಸ್ತೆಯಲ್ಲಿ ‘ಜಾಂಬಿ’ ರೀತಿಯಲ್ಲಿ ನಿಂತ ವ್ಯಕ್ತಿ – ಬಾಗಲೂರಿನಲ್ಲಿ ಆತಂಕ!
ಬೆಂಗಳೂರು: ಬಾಗಲೂರು ಸಮೀಪದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರು ಪ... ಓದನ್ನು ಮುಂದುವರಿಸಿ
ಖರ್ಗೆ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಆರೋಪ – ಬೆಂಗಳೂರಿನಲ್ಲಿ ದೂರು
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ... ಓದನ್ನು ಮುಂದುವರಿಸಿ
ನೀರಿನ ಬಿಲ್ ಪಾವತಿಗೆ ಸುವರ್ಣಾವಕಾಶ – ಬಡ್ಡಿ ಮನ್ನಾ ಘೋಷಣೆ
ಬೆಂಗಳೂರು: ನಗರದ ನೀರಿನ ಬಿಲ್ ಬಾಕಿದಾರರಿಗೆ ಬೆಂಗಳೂರು ನೀರು ಸರಬ... ಓದನ್ನು ಮುಂದುವರಿಸಿ
2011 ಜನಗಣತಿ ಆಧಾರ ಅಪಾಯಕರ – ಡಿಕೆ ಸುರೇಶ್ ತೀವ್ರ ಅಭಿಪ್ರಾಯ
ಬೆಂಗಳೂರು: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆ ವ... ಓದನ್ನು ಮುಂದುವರಿಸಿ
ಭಾಲ್ಕಿ
ಮನೆ ಸಮಾರಂಭದಲ್ಲಿ ಊಟ ಸೇವಿಸಿದವರಿಗೆ ಅನಾರೋಗ್ಯ – ಆಸ್ಪತ್ರೆಗೆ ದಾಖಲು - 40ಕ್ಕೂ ಹೆಚ್ಚು ಜನ ಅಸ್ವಸ್ಥ
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಂತಿ ಗ್ರಾಮದಲ್ಲಿ ಸಂಭವಿಸಿದ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ನಾನು PCC ಅಧ್ಯಕ್ಷ – ಸಿಎಂ ವಿಚಾರದಲ್ಲಿ ನನ್ನ ಮಾತೇ ಅಂತಿಮ: ಡಿ.ಕೆ. ಶಿವಕುಮಾರ್
ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚ... ಓದನ್ನು ಮುಂದುವರಿಸಿ