ನೀರಿನ ಬಿಲ್ ಪಾವತಿಗೆ ಸುವರ್ಣಾವಕಾಶ – ಬಡ್ಡಿ ಮನ್ನಾ ಘೋಷಣೆ
ಬೆಂಗಳೂರು: ನಗರದ ನೀರಿನ ಬಿಲ್ ಬಾಕಿದಾರರಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಹತ್ವದ ಸಡಿಲಿಕೆ ಘೋಷಿಸಿದೆ. ಬಾಕಿ ಇರುವ ನೀರಿನ ಬಿಲ್‌ಗಳನ್ನು ತೆರವುಗೊಳಿಸಲು ‘ಒನ್ ಟೈಮ್ ಸೆಟಲ್‌ಮೆಂಟ್’ (OTS) ಯೋಜನೆಯನ್ನು ಜಾರಿಗೆ ತರಲಾಗಿದೆ. ಮಂಡಳಿಯ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ತಿಂಗಳ ಕಾಲ ಈ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ಗ್ರಾಹಕರಿಗೆ ಪ್ರಸ್ತುತ ಬಿಲ್‌ಗಳ ಜೊತೆಗೆ OTS ಸಂಬಂಧಿತ ನೋಟಿಸ್‌ಗಳನ್ನು ವಿತರಿಸಲಾಗುತ್ತದೆ. BWSSB ವ್ಯಾಪ್ತಿಯಲ್ಲಿ ಸುಮಾರು 11 ಲಕ್ಷ ನೀರಿನ ಸಂಪರ್ಕಗಳಿದ್ದು, ಅದರಲ್ಲಿ 5.11 ಲಕ್ಷ ಗ್ರಾಹಕರಿಗೆ ಬಾಕಿ ಬಿಲ್‌ಗಳಿವೆ. ಫೆಬ್ರವರಿ ಅಂತ್ಯದ ವೇಳೆಗೆ ಒಟ್ಟು ಬಾಕಿ ಮೊತ್ತ ₹851.33 ಕೋಟಿ ಆಗಿದ್ದು, ಅದರಲ್ಲಿ ₹539.43 ಕೋಟಿ ಮೂಲ ಮೊತ್ತ ಮತ್ತು ₹311.90 ಕೋಟಿ ಬಡ್ಡಿ ಸೇರಿದೆ.
ಈ ಯೋಜನೆಯಡಿ ಬಾಕಿದಾರರಿಗೆ ಬಡ್ಡಿಯಲ್ಲಿ ಸಡಿಲಿಕೆ ನೀಡಲಾಗುತ್ತಿದ್ದು, ಮೂಲ ಮೊತ್ತವನ್ನು ಪಾವತಿಸುವ ಮೂಲಕ ಖಾತೆಗಳನ್ನು ಕ್ಲೀರ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪಾವತಿಸಬೇಕಾದ ಅಂತಿಮ ಮೊತ್ತ, ಬಡ್ಡಿ ಮನ್ನಾ ವಿವರಗಳು ಮತ್ತು ಪಾವತಿ ವಿಧಾನಗಳ ಮಾಹಿತಿ ಬಿಲ್ ಜೊತೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ದೀರ್ಘಕಾಲದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ BWSSB ಮನವಿ ಮಾಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗಾಂಧಿನಗರದಲ್ಲಿ ನಕಲಿ ಫಾರಿನ್ ಸಿಗರೇಟ್ ಅಡ್ಡೆ ಬಯಲು – ಲಕ್ಷಾಂತರ ಮೌಲ್ಯದ ವಸ್ತು ಸೀಜ್!
ಬೆಂಗಳೂರು: ನಗರದ ಗಾಂಧಿನಗರದಲ್ಲಿ ನಕಲಿ ಫಾರಿನ್ ಸಿಗರೇಟ್ ತಯಾರಿಕ... ಓದನ್ನು ಮುಂದುವರಿಸಿ
ಹುಟ್ಟುಹಬ್ಬದ ಹುಚ್ಚಾಟ: ನಡು ರಸ್ತೆಯಲ್ಲಿ ಪಟಾಕಿ ಸಿಡಿಸಿದ ವಿದ್ಯಾರ್ಥಿಗಳು!
ಬೆಂಗಳೂರು: ಹುಟ್ಟುಹಬ್ಬದ ನೆಪದಲ್ಲಿ ಕಾಲೇಜು ವಿದ್ಯಾರ್ಥಿಗಳು ನಡು... ಓದನ್ನು ಮುಂದುವರಿಸಿ
ಹೂ ಮಾರಾಟಕ್ಕೆ ಜಡೆ ಜಗಳ – ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರ ರಂಪಾಟ!
ಬೆಂಗಳೂರು: ಹೂ ಮಾರಾಟದ ವಿಚಾರಕ್ಕೆ ಇಬ್ಬರು ಮಹಿಳೆಯರ ನಡುವೆ ಜಗಳ... ಓದನ್ನು ಮುಂದುವರಿಸಿ
ಗುಂಡ್ಲುಪೇಟೆ
ಬಂಡೀಪುರದಲ್ಲಿ ರಣಹದ್ದುಗಳ ಹಾರಾಟ – ಪ್ರವಾಸಿಗರಿಗೆ ಅಪರೂಪದ ದೃಶ್ಯ! ರಣಹದ್ದುಗಳ ಸಂಖ್ಯೆ ಏರಿಕೆ – ಪ್ರಕೃತಿಗೆ ಶುಭ ಸೂಚನೆ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ... ಓದನ್ನು ಮುಂದುವರಿಸಿ
ಮಂಗಳೂರು
ಕರಾವಳಿಯಲ್ಲಿ ತೀವ್ರ ಬಿಸಿ ಎಚ್ಚರಿಕೆ – ಮೂರು ದಿನ ‘ಯೆಲ್ಲೋ ಅಲರ್ಟ್’ ಘೋಷಣೆ!
ಮಂಗಳೂರು: ಭಾರತೀಯ ಹವಾಮಾನ ಇಲಾಖೆ ರಾಜ್ಯದ ಕರಾವಳಿ ಜಿಲ್ಲೆಗಳಾದ ಉ... ಓದನ್ನು ಮುಂದುವರಿಸಿ
ಮಧ್ಯ ರಸ್ತೆಯಲ್ಲಿ ‘ಜಾಂಬಿ’ ರೀತಿಯಲ್ಲಿ ನಿಂತ ವ್ಯಕ್ತಿ – ಬಾಗಲೂರಿನಲ್ಲಿ ಆತಂಕ!
ಬೆಂಗಳೂರು: ಬಾಗಲೂರು ಸಮೀಪದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರು ಪ... ಓದನ್ನು ಮುಂದುವರಿಸಿ
ಖರ್ಗೆ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಆರೋಪ – ಬೆಂಗಳೂರಿನಲ್ಲಿ ದೂರು
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ... ಓದನ್ನು ಮುಂದುವರಿಸಿ
2011 ಜನಗಣತಿ ಆಧಾರ ಅಪಾಯಕರ – ಡಿಕೆ ಸುರೇಶ್ ತೀವ್ರ ಅಭಿಪ್ರಾಯ
ಬೆಂಗಳೂರು: ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆ ವ... ಓದನ್ನು ಮುಂದುವರಿಸಿ
ಭಾಲ್ಕಿ
ಮನೆ ಸಮಾರಂಭದಲ್ಲಿ ಊಟ ಸೇವಿಸಿದವರಿಗೆ ಅನಾರೋಗ್ಯ – ಆಸ್ಪತ್ರೆಗೆ ದಾಖಲು - 40ಕ್ಕೂ ಹೆಚ್ಚು ಜನ ಅಸ್ವಸ್ಥ
ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಂತಿ ಗ್ರಾಮದಲ್ಲಿ ಸಂಭವಿಸಿದ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ನಾನು PCC ಅಧ್ಯಕ್ಷ – ಸಿಎಂ ವಿಚಾರದಲ್ಲಿ ನನ್ನ ಮಾತೇ ಅಂತಿಮ: ಡಿ.ಕೆ. ಶಿವಕುಮಾರ್
ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚ... ಓದನ್ನು ಮುಂದುವರಿಸಿ