ಬೆಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಡಿಹೈಡ್ರೇಷನ್‌ವೇ ಮುಖ್ಯ ಕಾರಣ

ಬೆಂಗಳೂರು ನಗರದಲ್ಲಿ ಬೇಸಿಗೆ ಉಷ್ಣತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಡಿಹೈಡ್ರೇಷನ್ ಸಮಸ್ಯೆಗಳು ತೀವ್ರವಾಗಿ ಹೆಚ್ಚುತ್ತಿವೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಕೇವಲ ದೌರ್ಬಲ್ಯ ಅಥವಾ ತಲೆನೋವು ಮಾತ್ರವಲ್ಲ, ಕಂಠ ಮತ್ತು ಧ್ವನಿಯ ಮೇಲೆಯೂ ಪರಿಣಾಮ ಬೀರುತ್ತದೆ. ENT ತಜ್ಞರು ಹೇಳುವಂತೆ, ಬೇಸಿಗೆಯಲ್ಲಿ ಗಂಟಲು ಒಣಗುವುದು, ಧ್ವನಿ ಗರಗರಿಸುವುದು ಮತ್ತು ಮಾತನಾಡುವಾಗ ದಣಿವು ಕಾಣಿಸುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಆಸ್ಪತ್ರೆಗಳಿಗೆ ಬಂದವರ ಸಂಖ್ಯೆ ಕೂಡ ಹೆಚ್ಚಾಗುತ್ತದೆ; ಬಿಸಿಲಿನ ಸಮಯದಲ್ಲಿ OPD ಭೇಟಿಗಳು 20% ಹೆಚ್ಚುತ್ತವೆ ಮತ್ತು ORS ಬಳಕೆ 60% ವರೆಗೆ ಹೆಚ್ಚಾಗುತ್ತದೆ ಎಂದು ವರದಿಗಳು ಸೂಚಿಸುತ್ತವೆ.

 

ಡಾ. ಪ್ರೇರಿತ್ ರಾವ್ ಅವರ ಸಲಹೆ

ಮೆಡಿಕವರ್ ಆಸ್ಪತ್ರೆಯ ENT ಕನ್ಸಲ್ಟಂಟ್ ಸರ್ಜನ್, ಡಾ. ಪ್ರೇರಿತ್ ರಾವ್ ಹೇಳುತ್ತಾರೆ: 

"ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಕಂಠ ಒಣಗುತ್ತದೆ ಮತ್ತು ವೋಕಲ್ ಕಾರ್ಡ್‌ಗಳಿಗೆ ಅಗತ್ಯವಾದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಧ್ವನಿ ಗರಗರಿಸುವುದು, ಗಂಟಲು ಉರಿ ಮತ್ತು ಮಾತನಾಡುವಾಗ ದಣಿವು ಕಾಣುತ್ತದೆ."

 

ಹೆಚ್ಚು ತೊಂದರೆ ಅನುಭವಿಸುವವರು

ಶಿಕ್ಷಕರು, ಗಾಯಕರು, ಕಾಲ್ ಸೆಂಟರ್ ಉದ್ಯೋಗಿಗಳು

ಹೆಚ್ಚು ಮಾತನಾಡುವ ಉದ್ಯೋಗಿಗಳು

ಮಕ್ಕಳು ಮತ್ತು ವೃದ್ಧರು

AC ಕೊಠಡಿಯಲ್ಲಿ ಹೆಚ್ಚು ಸಮಯ ಕಳೆದವರು

AC ಕೊಠಡಿಗಳ ತೇವಾಂಶ ಕಡಿಮೆಯಾಗಿರುವುದರಿಂದ, ಕಂಠ ಮತ್ತಷ್ಟು ಒಣಗುತ್ತದೆ.

 

ತಡೆಯುವ ಮತ್ತು ಪರಿಹರಿಸುವ ಸಲಹೆಗಳು

ದಿನಕ್ಕೆ ಕನಿಷ್ಟ 2.5–3 ಲೀಟರ್ ನೀರು ಕುಡಿಯಬೇಕು.

ಹೆಚ್ಚು ಬೆವರುತ್ತಿದ್ದರೆ ORS ಅಥವಾ ಎಲೆಕ್ಟ್ರೋಲೈಟ್ ಪಾನೀಯಗಳು ಸೇವಿಸಬೇಕು.

ಕಾಫಿ, ಟೀ ಮತ್ತು ತಂಪು ಪಾನೀಯಗಳ ಸೇವನೆ ಕಡಿಮೆ ಮಾಡಬೇಕು.

AC ಕೊಠಡಿಯಲ್ಲಿ ತೇವಾಂಶ ಕಾಯ್ದುಕೊಳ್ಳಲು ನೀರಿನ ಪಾತ್ರೆ ಇರಿಸುವುದು.

ಹಣ್ಣುಗಳ ಸೇವನೆ, ಧ್ವನಿಗೆ ಸಮಯದಲ್ಲಿ ವಿಶ್ರಾಂತಿ ನೀಡುವುದು.

 

ಅಂತಿಮ ಸಲಹೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೇಸಿಗೆ ಉಷ್ಣತೆ ನಡುವೆ, ಡಿಹೈಡ್ರೇಷನ್ ಕಂಠ ಮತ್ತು ಧ್ವನಿಯ ಸಮಸ್ಯೆಗಳ ಪ್ರಮುಖ ಕಾರಣವಾಗಿದೆ. ಸರಿಯಾದ ಹೈಡ್ರೇಷನ್ ಕಾಪಾಡಿದರೆ, ಬೇಸಿಗೆಯಲ್ಲಿಯೂ ಕಂಠ ಮತ್ತು ಧ್ವನಿಯನ್ನು ಆರೋಗ್ಯಕರವಾಗಿ ಉಳಿಸಿಕೊಳ್ಳಬಹುದು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 hours ago

   
Image 1
Image 1

ಜೀವನದಲ್ಲಿ ಈ 5 ಸಮಸ್ಯೆಗಳಿದ್ದರೆ ನೆಮ್ಮದಿ ಇಲ್ಲ: ಚಾಣಕ್ಯರ ಎಚ್ಚರಿಕೆ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಚಾರಗಳಷ್ಟೇ ಅಲ್ಲ, ಪ್ರತಿಯೊಬ್... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಪಾದರಕ್ಷೆಗಳ ಬಣ್ಣ ಜೀವನದ ಮೇಲೆ ಪ್ರಭಾವ ಬೀರುತ್ತದೆಯೇ? ಜ್ಯೋತಿಷ್ಯ–ವಾಸ್ತು ಏನು ಹೇಳುತ್ತವೆ

ಮಾನವನ ಪಾದಗಳು ರಾಹು ಮತ್ತು ಶನಿಯ ನಿಯಂತ್ರಣದಲ್ಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳು... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಮದುವೆಯಲ್ಲಿ ಗಂಡ ಹಿರಿಯರಾಗಿರಲೇಬೇಕೇ? ಸಂಪ್ರದಾಯ vs ಇಂದಿನ ವಾಸ್ತವ

ನಮ್ಮ ದೇಶದಲ್ಲಿ ಮದುವೆಗಳಿಗೆ ಸಂಬಂಧಿಸಿದಂತೆ ಹಲವು ಸಾಮಾಜಿಕ ನಿಯಮಗಳು ಇಂದಿಗೂ ಪ್ರಚಲಿ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಚಪ್ಪಲಿ ಮೇಲೆ ಕಪ್ಪು ಹೆಜ್ಜೆ ಗುರುತುಗಳೇ? ಎಸೆಯಬೇಡಿ… ಈ ಸರಳ ಮನೆಮದ್ದು ಸಾಕು!

ಹೊಸ ಚಪ್ಪಲಿ ಅಥವಾ ಸ್ಯಾಂಡಲ್ ಖರೀದಿಸಿದಾಗ ಇರುವ ಖುಷಿ ಕೆಲವೇ ದಿನಗಳಲ್ಲಿ ಮಾಯವಾಗುತ್ತ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಮೊಸರು vs ಮಜ್ಜಿಗೆ: ಯಾವುದು ಹೆಚ್ಚು ಆರೋಗ್ಯಕರ? ತಜ್ಞರ ಸಲಹೆ ಏನು?

ಮೊಸರು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರವಾಗಿದೆ. ಹಾಲಿಗೆ ಸೂಕ್ತ ಬ್... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಆಹಾರ ಜೀರ್ಣವಾಗುತ್ತಿಲ್ಲವೇ? ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ತಜ್ಞರ ಎಚ್ಚರಿಕೆ

ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು.... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಪದೇ ಪದೇ ಬರುವ ಹೊಟ್ಟೆ ನೋವನ್ನ ನಿರ್ಲಕ್ಷಿಸುತ್ತಿದ್ದೀರಾ? ಹುಷಾರ್, ಅದು ಅಪಾಯದ ಸೂಚನೆ!

ಹೋತ್ತೆ ನೋವು ಬಂದಾಗ ಬಹುತೇಕ ಜನರು ಅದನ್ನು ಸಾಮಾನ್ಯ ಸಮಸ್ಯೆ ಎಂದುಕೊಳ್ಳುತ್ತಾರೆ: “ಗ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

“ಚಿಕ್ಕ ಮಕ್ಕಳು ಸಿರಪ್ ತೆಗೆದುಕೊಂಡಾಕ್ಷಣ ವಾಂತಿ ಮಾಡಿದ್ರೆ ಏನು ಮಾಡಬೇಕು ಗೊತ್ತಾ!? ಪೋಷಕರಿಗೆ ಗೊತ್ತಿರಬೇಕಾದ ಸಲಹೆಗಳು!”

ಜ್ವರ, ಕೆಮ್ಮು ಅಥವಾ ಸಣ್ಣ ಅಸ್ವಸ್ಥತೆ ಮಕ್ಕಳಲ್ಲಿ ಸಾಮಾನ್ಯವಾಗಿ ನೋವನ್ನುಂಟುಮಾಡುತ್ತ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

“ನಿಮ್ಮ ಮನೆಯ ಮುಂದೆ ಬೇವಿನ ಮರವಿದೆಯೆ? ಇದರ ಪರಿಣಾಮ ತಿಳಿದ್ರೆ ಶಾಕ್ ಆಗುತ್ತೀರಾ!”

ಪ್ರಕೃತಿಯಲ್ಲಿ ಹಲವು ಸಸ್ಯಗಳಲ್ಲಿ ಬೇವಿನ ಮರ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಆರೋಗ್ಯ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಸ್ನಾಯು ನೋವಿಗೆ ವಿಟಮಿನ್ ಕೊರತೆಯೇ ಕಾರಣವೇ? ತಜ್ಞರು ಹೇಳುವ ಇನ್ನಿತರ ಪ್ರಮುಖ ಕಾರಣಗಳು

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಸ್ನಾಯು ನೋವು ಸಮಸ್ಯೆಯಿಂದ ಬಳಲುತ್ತಿರುವುದು ಸಾಮ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1