“ಭಾರತೀಯ ಹಡಗುಗಳು ಸುರಕ್ಷಿತ” – ಇರಾನ್ ಸ್ಪಷ್ಟನೆ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕ್ಕೇರಿರುವ ಹಿನ್ನೆಲೆ, ಭಾರತಕ್ಕೆ ಇರಾನ್ ಮಹತ್ವದ ಭರವಸೆ ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇರಾನಿನ ರಾಯಭಾರ ಕಚೇರಿ ಈ ಕುರಿತು ಪ್ರತಿಕ್ರಿಯಿಸಿ, ಪ್ರಸ್ತುತ ಪ್ರದೇಶದಲ್ಲಿ ಸಂಘರ್ಷ ಮುಂದುವರಿದಿದ್ದರೂ ಹಾಗೂ ಕದನ ವಿರಾಮದ ಪ್ರಯತ್ನಗಳು ಫಲಕಾರಿಯಾಗದಿದ್ದರೂ, ಭಾರತ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. “ಭಾರತೀಯ ಸ್ನೇಹಿತರು ಸುರಕ್ಷಿತ ಕೈಯಲ್ಲಿದ್ದಾರೆ” ಎಂದು ಸಾಮಾಜಿಕ ಜಾಲತಾಣದ ಮೂಲಕ ವಿಶ್ವಾಸ ಮೂಡಿಸಿದೆ.
ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದ್ದು, ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಯೊಂದಿಗೆ ಸಂಪರ್ಕಿಸುತ್ತದೆ. ಗಲ್ಫ್ ರಾಷ್ಟ್ರಗಳಿಂದ ವಿಶ್ವದ ವಿವಿಧ ಭಾಗಗಳಿಗೆ ತೈಲ ಮತ್ತು ಅನಿಲ ಸಾಗಣೆಗೆ ಈ ಮಾರ್ಗ ಅತ್ಯಂತ ಅಗತ್ಯವಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಈ ಪ್ರದೇಶದಲ್ಲಿ ಅಡಚಣೆಗಳ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಇಲಾಖೆ, ಭಾರತೀಯರ ಸುರಕ್ಷತೆ ಮತ್ತು ಹಡಗುಗಳ ಸಂಚಾರವನ್ನು ಖಚಿತಪಡಿಸಲು ಇರಾನಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಇರಾನ್ ನೀಡಿರುವ ಈ ಭರವಸೆ ಭಾರತಕ್ಕೆ ತಾತ್ಕಾಲಿಕ ನೆಮ್ಮದಿ ತಂದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಮೆರಿಕದ ಮತ್ತೊಂದು F-35 ವಿಮಾನ ಪತನ? ಇರಾನ್ ದಾವೆ
ಟೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್... ಓದನ್ನು ಮುಂದುವರಿಸಿ
ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾ... ಓದನ್ನು ಮುಂದುವರಿಸಿ
ಅಮೆರಿಕ ಸೇನೆಯಲ್ಲಿ ದೊಡ್ಡ ಬೆಳವಣಿಗೆ: ಮುಖ್ಯಸ್ಥರಿಗೆ ರಾಜೀನಾಮೆ ಸೂಚನೆ
ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕ ಸೇನೆಯಲ... ಓದನ್ನು ಮುಂದುವರಿಸಿ
ಫಾರ್ಮಾ ಕ್ಷೇತ್ರಕ್ಕೆ ಶಾಕ್ : ಅಮೆರಿಕದ ದೊಡ್ಡ ಕ್ರಮ- ಔಷಧ ಆಮದು ಮೇಲೆ 100% ಸುಂಕ
ವಾಷಿಂಗ್ಟನ್: ಇರಾನ್ ಯುದ್ಧದ ನಡುವೆಯೇ ಅಮೆರಿಕ ಮತ್ತೊಂದು ದೊಡ್ಡ... ಓದನ್ನು ಮುಂದುವರಿಸಿ
ಟ್ರಂಪ್ ಹೇಳಿಕೆಗೆ ಇರಾನ್ ಕೌಂಟರ್: “ಸುಳ್ಳು” ಎಂದು ಖಂಡನೆ
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ನಡುವೆ ಕದ... ಓದನ್ನು ಮುಂದುವರಿಸಿ
ಪ್ರೇಯಸಿಯ ಜೊತೆ ಗಂಡ… ಅಚಾನಕ್ ಬಂದ ಹೆಂಡತಿ: ವೈರಲ್ ವಿಡಿಯೋ!
ಥೈಲ್ಯಾಂಡ್: ಗಂಡ–ಹೆಂಡತಿ ಹಾಗೂ ಮತ್ತೊಬ್ಬ ಮಹಿಳೆ ನಡುವೆ ನಡೆದ ಗಲ... ಓದನ್ನು ಮುಂದುವರಿಸಿ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ನಿಧನ
ಇಸ್ಲಾಮಾಬಾದ್: ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ... ಓದನ್ನು ಮುಂದುವರಿಸಿ
ಹೊಸ ಬೆಡ್‌ಶೀಟ್ ತೊಳೆಯದೆ ಉಪಯೋಗಿಸಿದ ವ್ಯಕ್ತಿ ಬೆಳಿಗ್ಗೆ ನೀಲಿ ಬಣ್ಣದಲ್ಲಿ ಎದ್ದನು
ಲಂಡನ್: ಯುನೈಟೆಡ್ ಕಿಂಗ್‌ಡಮ್‌ನಲ್ಲಿ 42 ವರ್ಷದ ಟೋಮಿ ಲಿಂಚ್ ಅವರ... ಓದನ್ನು ಮುಂದುವರಿಸಿ
ಮಾಜಿ ರ್ಯಾಪರ್ ಬಾಲೇಂದ್ರ ಶಾ ನೇಪಾಳದ 47ನೇ ಪ್ರಧಾನಿ - ಬೆಂಗಳೂರಿನಲ್ಲಿ ಓದಿದ ಬಾಲೇಂದ್ರ ಶಾ!
ಕಠ್ಮಂಡು: ನೇಪಾಳದಲ್ಲಿ ನಡೆದ ರಾಜಕೀಯ ಬದಲಾವಣೆಯ ನಡುವೆಯೇ, ಮಾಜಿ... ಓದನ್ನು ಮುಂದುವರಿಸಿ
ಹಾರ್ಮುಜ್ ಜಲಸಂಧಿಯಲ್ಲಿ ಚೀನೀ ಹಡಗುಗಳಿಗೆ ಇರಾನ್ ನಿರಾಕರಣೆ – ಗಲ್ಫ್ ದೇಶಗಳಿಗೆ ಸರಕು ಸಾಗಣೆ ಅಡಚಣೆ
ವಾಷಿಂಗ್ಟನ್: ಇರಾನ್ ಹಾರ್ಮುಜ್ ಜಲಸಂಧಿ ಮೂಲಕ ಸಾಗಣೆಗೆ ಪ್ರಯತ್... ಓದನ್ನು ಮುಂದುವರಿಸಿ