ಚೆನ್ನೈನಲ್ಲಿ ಸಿಎಸ್‌ಕೆ ಬ್ಯಾಟಿಂಗ್ ಶೋ: ಮ್ಹಾತ್ರೆ ಅರ್ಧಶತಕದಿಂದ ಮಿಂಚು

ಚೆನ್ನೈ: ತಮ್ಮ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಇಂದು ತನ್ನ ತವರಿನ ಎಂ.ಎ ಚಿದಂಬರಂ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದಿದೆ. ಟಾಸ್ ಸೋತ ಸಿಎಸ್‌ಕೆ ಮೊದಲು ಬ್ಯಾಟಿಂಗ್‌ಗೆ ಇಳಿದರೂ, ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಿದರು. ಆದರೆ ಸಂಜು ಸ್ಯಾಮ್ಸನ್ ಮತ್ತೆ ನಿರಾಸೆ ಮೂಡಿಸಿದರು. 

 

ಹಿಂದಿನ ಪಂದ್ಯದಲ್ಲಿಯೇ ವಿಫಲವಾಗಿದ್ದ ಅವರು, ಈ ಪಂದ್ಯದಲ್ಲೂ ಕೇವಲ 7 ಎಸೆತಗಳಲ್ಲಿ 7 ರನ್ ಗಳಿಸಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಅವರ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಬೌಂಡರಿ ಮಾತ್ರ ಸೇರಿತ್ತು. ಇದರೊಂದಿಗೆ ಸಿಎಸ್‌ಕೆ 14 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಜವಾಬ್ದಾರಿಯುತ ಆಟ ಪ್ರದರ್ಶಿಸಿ ತಂಡವನ್ನು ಸ್ಥಿರಪಡಿಸಿದರು. ಇವರಿಬ್ಬರ ಜತೆಯಾಟದಿಂದ ಸಿಎಸ್‌ಕೆ ಕೇವಲ 10 ಓವರ್‌ಗಳಲ್ಲಿ 100 ರನ್ ಗಡಿ ದಾಟಿತು. ವಿಶೇಷವಾಗಿ ಆಯುಷ್ ಮ್ಹಾತ್ರೆ ಅಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ತಮ್ಮ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿ ತಂಡದ ಮೊತ್ತವನ್ನು ವೇಗವಾಗಿ ಏರಿಸಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 hours ago

   
Image 1
Image 1

ಹೈದರಾಬಾದ್ ವಿರುದ್ಧ ತವರಿನಲ್ಲೇ ಮುಗ್ಗರಿಸಿದ ರಹಾನೆ ಪಡೆ: ಎಸ್‌ಆರ್‌ಎಚ್ ದಾಳಿ ಕೆಕೆಆರ್ ವಿರುದ್ಧ 65 ರನ್‌ಗಳ ಭರ್ಜರಿ ಜಯ

ಕೋಲ್ಕತ್ತಾ: ಐಪಿಎಲ್ ಪಂದ್ಯದಲ್ಲಿ Sunrisers Hyderabad ತಂಡದ ಸ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ನಕಲಿ ಟಿಕೆಟ್ ದಂಧೆ ಬಯಲು: RCB ಪಂದ್ಯಕ್ಕೆ ಸಂಪೂರ್ಣ ಆನ್‌ಲೈನ್ ವ್ಯವಸ್ಥೆ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಹಬ್ಬದ ನಡುವೆ ಬೆಂಗಳೂರಿನಲ್ಲಿ ನಕಲ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

4 ವಿಕೆಟ್ ಕಳೆದು ಸಂಕಷ್ಟದಲ್ಲಿದ್ದ ಡೆಲ್ಲಿ ಗೆಲುವಿನತ್ತ: ರಿಜ್ವಿ–ಸ್ಟಬ್ಸ್ ಮ್ಯಾಜಿಕ್

ಲಖ್ನೋ: ಎಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಐ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಮಹಿಳಾ ಆಟಗಾರ್ತಿಯರಿಗೆ ಸಿಹಿ ಸುದ್ದಿ : ಮಾಜಿ ಮಹಿಳಾ ಕ್ರಿಕೆಟರ್‌ಗಳಿಗೆ ಪಿಂಚಣಿ - ಕೆಎಸ್‌ಸಿಎಯಿಂದ ಮಹತ್ವದ ಘೋಷಣೆ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (KSCA) ರಾಜ್ಯದ ಮಾಜಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1

ಐಪಿಎಲ್ ಪಂದ್ಯದಲ್ಲಿ ಬ್ಯಾಟ್ ವಿವಾದ – ತೆವಾಟಿಯಾ ತಡೆ

ಐಪಿಎಲ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಅಟ್ಟಹಾಸ : 28 ಮೊಬೈಲ್ ವಶಕ್ಕೆ, ಅಪ್ರಾಪ್ತರು ಸೇರಿ ಮೂವರು ಅರೆಸ್ಟ್‌

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ RCB ಮತ್ತು SRH... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಚೆಂಡು ವಿರೂಪ ಆರೋಪ: ಫಖರ್ ಝಮಾನ್‌ಗೆ 2 ಪಂದ್ಯ ನಿಷೇಧ

ಲಾಹೋರ್: ಲಾಹೋರ್ ಖಲಂದರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಫಖರ್ ಝ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಪಶ್ಚಿಮ ಬಂಗಾಳ ಚುನಾವಣೆ : ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ

ಕೋಲ್ಕತ್ತಾ: ಭಾರತೀಯ ಟೆನಿಸ್ ಲೋಕದ ಖ್ಯಾತ ಆಟಗಾರ ಲಿಯಾಂಡರ್ ಪೇಸ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಐಪಿಎಲ್ ಟಿಕೆಟ್ ಗೊಂದಲ: KSCA ವಿರುದ್ಧ ಶಾಸಕ ಗಣಿಗ ರವಿ ಆಕ್ರೋಶ

ಮಂಡ್ಯ: ಐಪಿಎಲ್ ಪಂದ್ಯಗಳ ಟಿಕೆಟ್ ಹಂಚಿಕೆ ಹಾಗೂ ಮಾರಾಟ ವ್ಯವಸ್ಥೆ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

CSK ಸೋಲು ನಡುವೆ ಜಡೇಜಾ ಭಾವುಕ ಕ್ಷಣ: ವಿಡಿಯೋ ವೈರಲ್

ಚೆನ್ನೈ: ಕಳೆದ ವರ್ಷ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದ್ದ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1