ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ: ಸರ್ಕಾರದ ಕ್ಲಿಯರೆನ್ಸ್ ಅಗತ್ಯ – ಸಚಿವ ಜಿ. ಪರಮೇಶ್ವರ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಕುರಿತು ಸರ್ಕಾರದ ಕಡೆಯಿಂದ ಅಂತಿಮ ಕ್ಲಿಯರೆನ್ಸ್ ಅಗತ್ಯವಿದ್ದು, ಈ ಸಂಬಂಧ ಬುಧವಾರ ಮಹತ್ವದ ಸಭೆ ನಡೆಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, “ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಅವರ ವರದಿಯಲ್ಲಿರುವ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಜಿಬಿಎ ಹಾಗೂ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಯೂ ಕೂಡ ಕೆಲವು ಮಹತ್ವದ ಶಿಫಾರಸುಗಳನ್ನು ನೀಡಿದೆ” ಎಂದು ಹೇಳಿದರು.
ಐಪಿಎಲ್ ಪಂದ್ಯಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಕಡೆಯಿಂದ ಅನುಮತಿ ನೀಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ ಅವರು, “ಈ ಹಿನ್ನೆಲೆಯಲ್ಲೇ ಬುಧವಾರ ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಆಯೋಜಕರಿಗೆ ಯಾವ ಸೂಚನೆಗಳನ್ನು ನೀಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ” ಎಂದರು.
ಈ ವಿಚಾರವಾಗಿ ಮುಖ್ಯಮಂತ್ರಿ ಜೊತೆಗೂ ಚರ್ಚೆ ನಡೆಸಲಾಗುವುದು ಎಂದು ಹೇಳಿದ ಗೃಹ ಸಚಿವರು, “ನಮ್ಮ ಶಿಫಾರಸುಗಳನ್ನು ಅವರು ಎಷ್ಟರ ಮಟ್ಟಿಗೆ ಅನುಸರಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಸಾರ್ವಜನಿಕ ಸುರಕ್ಷತೆ ಅತ್ಯಂತ ಮುಖ್ಯ. ಕಾಲ್ತುಳಿತದಂತಹ ದುರ್ಘಟನೆಗಳು ಮರುಕಳಿಸಬಾರದು. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸಂಸದ ತೇಜಸ್ವಿ ಸೂರ್ಯ ಅವರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, “ತೇಜಸ್ವಿ ಸೂರ್ಯ ಅವರು ಸಂಸದರು. ಖಾಲಿ ಟ್ರಂಕ್ ಹಿಡಿದು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳುವ ಬದಲು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನು ತರಲು ಪ್ರಯತ್ನಿಸಬೇಕು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ಇನ್ನೂ ಬಾಕಿಯಿದೆ. ಅದನ್ನು ಮೊದಲು ಕೇಂದ್ರದ ಜೊತೆ ಮಾತನಾಡಿ ತರಲಿ. ಅವರು ಹಣ ಕೊಡಿಸಿದರೆ ರಾಜ್ಯದ ಬಳಿಯೂ ಹಣ ಇರುತ್ತದೆ” ಎಂದು ಟೀಕಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಟಿ20 ವಿಶ್ವಕಪ್: ಸೂರ್ಯಕುಮಾರ್ ಯಾದವ್ ಅಜೇಯ ಅರ್ಧಶತಕ, ಭಾರತ 29 ರನ್‌ಗಳ ಗೆಲುವು; ದಾಖಲೆ ಗಡಿಯಲ್ಲೇ!
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಮೂರನೇ ಪಂದ್ಯದಲ್ಲಿ ಭಾರತ ಮತ... ಓದನ್ನು ಮುಂದುವರಿಸಿ
ಟೀಮ್ ಇಂಡಿಯಾ ಯುಎಸ್‌ಎ ವಿರುದ್ಧ 29 ರನ್‌ಗಳ ಗೆಲುವು; ಬುಮ್ರಾ–ಅಭಿಷೇಕ್ ಶರ್ಮಾ ಅನಾರೋಗ್ಯದಲ್ಲಿ ಆತಂಕ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೀ20 ವಿಶ್ವಕಪ್ ಪ್ರಿಯ ಪಂದ್ಯದಲ್ಲಿ ಭಾರತ ತಂ... ಓದನ್ನು ಮುಂದುವರಿಸಿ
ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ₹7.5 ಕೋಟಿ ಬಹುಮಾನ ಯುವ ಆಟಗಾರರ ಐತಿಹಾಸಿಕ ಸಾಧನೆಗೆ ಬಿಸಿಸಿಐ ಶ್ಲಾಘನೆ
ನವದೆಹಲಿ: ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ... ಓದನ್ನು ಮುಂದುವರಿಸಿ
ಮೂರನೇ ಬಾರಿ ಕಿರೀಟದ ಗುರಿಯೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ 2026 ಇಂದಿನಿಂದ ಆರಂಭವಾಗುತ್ತ... ಓದನ್ನು ಮುಂದುವರಿಸಿ
WPL ಫೈನಲ್ ಕೈ ತಪ್ಪಿದ ಬೆಂಗಳೂರು; IPLಗೂ ಚಿನ್ನಸ್ವಾಮಿ ಅನುಮಾನ – ಮ್ಯಾನೇಜ್‌ಮೆಂಟ್ ಮೌನ
ಬೆಂಗಳೂರು: ವಡೋದರದ ಕ್ರೀಡಾಂಗಣದಲ್ಲಿ ನಡೆದ WPL ಫೈನಲ್ ಪಂದ್ಯದಲ್... ಓದನ್ನು ಮುಂದುವರಿಸಿ
PSL 11ರಿಂದ ಹಿಂದೆ ಸರಿದ ಆಸ್ಟ್ರೇಲಿಯಾ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಪಾಕಿಸ್ತಾನ್ ಸೂಪರ್ ಲೀಗ... ಓದನ್ನು ಮುಂದುವರಿಸಿ
ಐಪಿಎಲ್ ಕ್ರಿಕೆಟ್ ಲೋಕದ 'ಮಹಾ ನಾಯಕ' ಮಹೇಂದ್ರ ಸಿಂಗ್ ಧೋನಿ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜು
ಧೋನಿ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ ಅದು ಕೇವಲ ಇನ್ನೊಂದು ಸೀಸನ್ ಅಲ್ಲ…... ಓದನ್ನು ಮುಂದುವರಿಸಿ
ಸ್ಮೃತಿ ನೇತೃತ್ವದ RCB vs ಡೆಲ್ಲಿ ಕ್ಯಾಪಿಟಲ್ಸ್ – ಕಪ್‌ಗೆ ಮಹಾಸಮರ!
ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಡ... ಓದನ್ನು ಮುಂದುವರಿಸಿ
IPL ಸೀಸನ್ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ದಾಖಲೆ
IPL ಸೀಸನ್ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ದಾಖಲೆ ಸೃಷ್ಟ... ಓದನ್ನು ಮುಂದುವರಿಸಿ
ದಿನೇ ದಿನೇ ತನ್ನ ಪರ್ಫಾಮೆನ್ಸ್ನಿಂದ ಗಮನ ಸೆಳೆಯುತ್ತಿರುವ ಟೀಮ್ ಇಂಡಿಯಾ ಆಟಗಾರ ಹರ್ಷಿತ್ ರಾಣಾ
ದಿನೇ ದಿನೇ ತನ್ನ ಪರ್ಫಾಮೆನ್ಸ್ನಿಂದ ಗಮನ ಸೆಳೆಯುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರ... ಓದನ್ನು ಮುಂದುವರಿಸಿ