ದೇವದುರ್ಗ ಸಮೀಪ ಭೀಕರ ಅಪಘಾತ: ಗರ್ಭಿಣಿ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ
ರಾಯಚೂರು: ದೇವದುರ್ಗ ತಾಲ್ಲೂಕಿನ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಕರಿಗುಡ್ಡ ಗ್ರಾಮದ 47 ವರ್ಷದ ಮಲ್ಲಯ್ಯ ಸ್ಥಳದಲ್ಲೇ ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡಿದ್ದ 8 ತಿಂಗಳ ಗರ್ಭಿಣಿ 24 ವರ್ಷದ ಮೋನಮ್ಮ ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಿಂಗಳ ಪರಿಶೀಲನೆಗಾಗಿ (ಚೆಕ್‌ಅಪ್) ಆಟೋರಿಕ್ಷಾದಲ್ಲಿ ದೇವದುರ್ಗಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೋನಮ್ಮ ಅವರ ಪತಿ ಅರುಣ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, 5 ವರ್ಷದ ಬಾಲಕ ರೋಹಿತ್‌ಗೆ ಕಾಲು ಮುರಿತವಾಗಿದೆ. ಗೋಪಾಲ್ ಹಾಗೂ ಬಾಳಪ್ಪ ಅವರಿಗೆ ಕೂಡ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ರಿಮ್ಸ್, ಓಪೆಕ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯಗೊಂಡವರನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬತಿಂಥಣಿಯಿಂದ ದೇವದುರ್ಗದತ್ತ ಸಾಗುತ್ತಿದ್ದ ಸಾರಿಗೆ ಬಸ್ ಹಿಂದಿನಿಂದ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮನೆ ಮುಂದೆ ಕೆಮ್ಮಿದ ವಿಷಯಕ್ಕೆ ಮಾತಿನ ಚಕಮಕಿ ಮಾರಣಾಂತಿಕ ಹಲ್ಲೆಗೆ ತಿರುಗಿ: 34 ವರ್ಷದ ವ್ಯಕ್ತಿ ಸಾವು
ರಾಮನಗರ: ಸಣ್ಣ ಕಾರಣಕ್ಕೂ ಪ್ರಾಣಹಾನಿ ಸಂಭವಿಸುವ ಮನಸ್ಥಿತಿ ಹೆಚ್ಚ... ಓದನ್ನು ಮುಂದುವರಿಸಿ
ಮುಂಬರುವ ಪರೀಕ್ಷೆಗಳ ಆತಂಕ: 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ – ಹೃದಯವಿದ್ರಾವಕ ಘಟನೆ
ಬೀದರ್: ಮುಂಬರುವ ಪರೀಕ್ಷೆಗಳ ಆತಂಕದ ನಡುವೆ 16 ವರ್ಷದ ಎಸ್‌ಎಸ್‌ಎ... ಓದನ್ನು ಮುಂದುವರಿಸಿ
ಬೈಲಹೊಂಗಲ
ಬೈಲಹೊಂಗಲದಲ್ಲಿ ಅನುಮಾನಾಸ್ಪದ ಸಾವು: ಪತಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ಆರೋಪ
ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ 29 ವರ್ಷದ ಸಕ್... ಓದನ್ನು ಮುಂದುವರಿಸಿ
ಶಿಗ್ಗಾಂವ
ಹನುಮನಹಳ್ಳಿ ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ: ಕಳ್ಳರ ಸುಳಿವು ಇನ್ನೂ ಪತ್ತೆ ಇಲ್ಲ, ಪೊಲೀಸರ ತೀವ್ರ ಶೋಧ
ಶಿಗ್ಗಾಂವಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಯೂನಿಯನ್ ಬ್ಯಾಂಕ್ ಎಟ... ಓದನ್ನು ಮುಂದುವರಿಸಿ
ಮಧ್ಯ ಕುಡಿಯೋದು ಬಿಡು ಎಂದಿದ್ದಕ್ಕೆ 11 ವರ್ಷದ ಮಗಳನ್ನೇ ಕೊಂದ ತಾಯಿ!
ಯಾದಗಿರಿ: ಮದ್ಯ ವ್ಯಸನದ ಭೀಕರ ಪರಿಣಾಮವನ್ನು ತೋರಿಸುವ ಅಮಾನುಷ ಘಟ... ಓದನ್ನು ಮುಂದುವರಿಸಿ
ಮಂಗಳೂರು
ವಿದ್ಯಾರ್ಥಿನಿಯ “ಕಿಡ್ನ್ಯಾಪ್ ನಾಟಕ” – ಪ್ರಾಥಮಿಕ ಪಿಯುಸಿ ವಿದ್ಯಾರ್ಥಿನಿ ಸ್ವತಃ ಸೃಷ್ಟಿಸಿದ ತಪ್ಪು ದಿಕ್ಕು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯ... ಓದನ್ನು ಮುಂದುವರಿಸಿ
ಸಿರಾ
ಎರಡೂವರೆ ವರ್ಷದ ಮಗುವನ್ನು ಚಾಕಲೇಟ್ ನೆಪದಲ್ಲಿ ಕಿಡ್ನ್ಯಾಪ್; ಶಿರಾ ಪೊಲೀಸರ ಸಾಹಸದಲ್ಲಿ ಪೋಷಕರ ಮಡಿಲಿಗೆ ಸೇರಿದ ಕಂದ
ತುಮಕೂರು: ಶಿರಾ ತಾಲ್ಲೂಕಿನ ಮಾಗೋಡು ಗ್ರಾಮದಲ್ಲಿ ನಡೆದ ಶ್ರೀರಂಗ... ಓದನ್ನು ಮುಂದುವರಿಸಿ
ಮಂಗಳೂರು
ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗಳ ಗಲಾಟೆ, ರಕ್ತಪಾತ!”
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲದ... ಓದನ್ನು ಮುಂದುವರಿಸಿ
ಥಣಿಸಂದ್ರದಲ್ಲಿ ದಾರುಣ ಅಪಘಾತ: ಶಾಲಾ ಬಸ್ ಡಿಕ್ಕಿಗೆ ಇಬ್ಬರು ಪುಟ್ಟ ಮಕ್ಕಳು ಬಲಿ
ಬೆಂಗಳೂರು: ನಗರದ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಸಮೀಪ ಶಾಲಾ ಬ... ಓದನ್ನು ಮುಂದುವರಿಸಿ
ಮನೆಯ ದೊಡ್ಡಮ್ಮ ಮೇಲೆ ನಂಬಿಕೆಯ ಮಧ್ಯೆ ಭಾರಿ ಕಳ್ಳತನ; ಕಳ್ಳ ಬಂಧನ
ಬೆಂಗಳೂರು: ನಗರದ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ... ಓದನ್ನು ಮುಂದುವರಿಸಿ