ಥಣಿಸಂದ್ರದಲ್ಲಿ ದಾರುಣ ಅಪಘಾತ: ಶಾಲಾ ಬಸ್ ಡಿಕ್ಕಿಗೆ ಇಬ್ಬರು ಪುಟ್ಟ ಮಕ್ಕಳು ಬಲಿ

ಬೆಂಗಳೂರು: ನಗರದ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಸಮೀಪ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪುಟ್ಟ ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತಪಟ್ಟ ಮಕ್ಕಳನ್ನು ವರ್ಷಾ (2) ಹಾಗೂ ಭಾನು (4) ಎಂದು ಗುರುತಿಸಲಾಗಿದೆ. ಯಾದಗಿರಿ ಮೂಲದ ನಾಗನಗೌಡ ಅವರು ಸಿಎಆರ್‌ನಲ್ಲಿ ಕಾನ್ಸ್‌ಟೇಬಲ್ ಆಗಿದ್ದು, ತಮ್ಮ ಮಗಳು ವರ್ಷಾ ಹಾಗೂ ಅಣ್ಣನ ಮಗಳು ಭಾನು ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹಾಲು ತರಲು ತೆರಳುತ್ತಿದ್ದರು. ಇದೇ ವೇಳೆ ಖಾಸಗಿ ಶಾಲೆಗೆ ಸೇರಿದ ಬಸ್ ಮಕ್ಕಳ ಪಿಕಪ್‌ಗೆ ತೆರಳುತ್ತಿತ್ತು. ಬಸ್ ಬರುತ್ತಿರುವುದನ್ನು ಗಮನಿಸಿದ ನಾಗನಗೌಡ ಬೈಕ್ ನಿಲ್ಲಿಸಿದ್ದರು ಎಂದು ಹೇಳಲಾಗಿದೆ.

 

ಹೆಣ್ಣೂರು ಸಂಚಾರಿ ಠಾಣೆ ವ್ಯಾಪ್ತಿಯ ಥಣಿಸಂದ್ರ ಬಳಿ ಶಾಲಾ ಬಸ್ ಯೂ-ಟರ್ನ್ ಪಡೆಯುವಾಗ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬೈಕ್‌ನಿಂದ ಕೆಳಗೆ ಬಿದ್ದ ಇಬ್ಬರು ಮಕ್ಕಳು ಬಸ್ ಹಿಂಬದಿ ಚಕ್ರದಡಿ ಸಿಲುಕಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿದಿದೆ. ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಕುಟುಂಬಸ್ಥರು ಜಮಾಯಿಸಿದ್ದು, ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

12 hours ago

   
Image 1
Image 1
ಬೆಂಗಳೂರು ನಗರ

ವಿಧಾನಸೌಧದಲ್ಲಿ ಚಿನ್ನ-ಹಣದ ಬ್ಯಾಗ್ ನಾಪತ್ತೆ: ಗೃಹ ಸಚಿವ ಪರಮೇಶ್ವರ್ ತನಿಖೆಗೆ ಜಂಟಿ ಪೊಲೀಸ್ ಆಯುಕ್ತರಿಗೆ ಆದೇಶ

ಬೆಂಗಳೂರು: ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್... ಓದನ್ನು ಮುಂದುವರಿಸಿ


Edited by: ಬಾನು

47 minutes ago

   
Image 1
ಬೆಂಗಳೂರು ನಗರ

ಬೆಂಗಳೂರಿನಲ್ಲಿ ವಿಶೇಷ ಆಪರೇಷನ್: ವೀಸಾ ಮುಗಿದ 8 ವಿದೇಶಿ ಪ್ರಜೆಗಳು ಪೊಲೀಸ್ ಕಸ್ಟಡಿಗೆ

ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗುತ್ತಿದ್ದ 8... ಓದನ್ನು ಮುಂದುವರಿಸಿ


Edited by: ಬಾನು

49 minutes ago

   
Image 1

“ನನ್ನ ಆಸೆ ಈಡೇರಿಸು”: ಸೊಸೆ ಮೇಲೆ ಮಾವನ ಲೈಂಗಿಕ ದೌರ್ಜನ್ಯ

ಬೆಂಗಳೂರು: ಥಣಿಸಂಧ್ರದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ಆಗಿರು... ಓದನ್ನು ಮುಂದುವರಿಸಿ


Edited by: ಬಾನು

53 minutes ago

   
Image 1
ಬೆಂಗಳೂರು ನಗರ

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ: ಐಟಿ ಕಿರುಕುಳ ಕಾರಣವಲ್ಲ ಎಂದು ಎಸ್‌ಐಟಿ ರಿವೀಲ್!

ಬೆಂಗಳೂರು: ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತನಿಖ... ಓದನ್ನು ಮುಂದುವರಿಸಿ


Edited by: ಬಾನು

58 minutes ago

   
Image 1
ಬೆಂಗಳೂರು ನಗರ

ರಾಜ್ಯದಲ್ಲಿ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ: ಸರ್ಕಾರ ಆದೇಶ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರವು 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ರಾಮನಗರ

ಮನೆ ಮುಂದೆ ಕೆಮ್ಮಿದ ವಿಷಯಕ್ಕೆ ಮಾತಿನ ಚಕಮಕಿ ಮಾರಣಾಂತಿಕ ಹಲ್ಲೆಗೆ ತಿರುಗಿ: 34 ವರ್ಷದ ವ್ಯಕ್ತಿ ಸಾವು

ರಾಮನಗರ: ಸಣ್ಣ ಕಾರಣಕ್ಕೂ ಪ್ರಾಣಹಾನಿ ಸಂಭವಿಸುವ ಮನಸ್ಥಿತಿ ಹೆಚ್ಚ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೀದರ್

ಮುಂಬರುವ ಪರೀಕ್ಷೆಗಳ ಆತಂಕ: 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ – ಹೃದಯವಿದ್ರಾವಕ ಘಟನೆ

ಬೀದರ್: ಮುಂಬರುವ ಪರೀಕ್ಷೆಗಳ ಆತಂಕದ ನಡುವೆ 16 ವರ್ಷದ ಎಸ್‌ಎಸ್‌ಎ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಳಗಾವಿ

ಬೈಲಹೊಂಗಲ

ಬೈಲಹೊಂಗಲದಲ್ಲಿ ಅನುಮಾನಾಸ್ಪದ ಸಾವು: ಪತಿಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ಆರೋಪ

ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ 29 ವರ್ಷದ ಸಕ್... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಹಾವೇರಿ

ಶಿಗ್ಗಾಂವ

ಹನುಮನಹಳ್ಳಿ ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ: ಕಳ್ಳರ ಸುಳಿವು ಇನ್ನೂ ಪತ್ತೆ ಇಲ್ಲ, ಪೊಲೀಸರ ತೀವ್ರ ಶೋಧ

ಶಿಗ್ಗಾಂವಿ: ತಾಲೂಕಿನ ಹನುಮನಹಳ್ಳಿ ಗ್ರಾಮದ ಯೂನಿಯನ್ ಬ್ಯಾಂಕ್ ಎಟ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ರಾಯಚೂರು

ದೇವದುರ್ಗ

ದೇವದುರ್ಗ ಸಮೀಪ ಭೀಕರ ಅಪಘಾತ: ಗರ್ಭಿಣಿ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ

ರಾಯಚೂರು: ದೇವದುರ್ಗ ತಾಲ್ಲೂಕಿನ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1