ಡಿ.ಕೆ. ಶಿವಕುಮಾರ್‌ಗೆ ಹೈಕೋರ್ಟ್ ರಿಲೀಫ್: ‘ನಾನು ಕರಸೇವಕ’ ಪೋಸ್ಟ್ ಪ್ರಕರಣದ ಎಫ್‌ಐಆರ್‌ಗೆ ತಡೆ
ಬೆಂಗಳೂರು: ‘ನಾನು ಕರಸೇವಕ, ನನ್ನನ್ನೂ ಬಂಧಿಸಿ’ ಅಭಿಯಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಾತ್ಕಾಲಿಕವಾಗಿ ಬಿಗ್ ರಿಲೀಫ್ ಸಿಕ್ಕಿದೆ.
ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ಡಿಸಿಎಂ ಪರ ವಕೀಲ ಹೆಚ್.ವಿ. ಪ್ರವೀಣ್ ಗೌಡ ಅವರು, ಎಕ್ಸ್ (ಹಳೆಯ ಟ್ವಿಟ್ಟರ್) ಪೋಸ್ಟ್‌ಗೆ ಶಿವಕುಮಾರ್ ಅವರ ನೇರ ಸಂಬಂಧ ಇಲ್ಲ ಎಂದು ವಾದಿಸಿದರು. ವಿಚಾರಣೆ ಬಳಿಕ ಹೈಕೋರ್ಟ್ ಎಫ್‌ಐಆರ್‌ಗೆ ತಾತ್ಕಾಲಿಕ ತಡೆ ನೀಡಿದೆ.
ಹುಬ್ಬಳ್ಳಿಯಲ್ಲಿ 1992ರಲ್ಲಿ ನಡೆದ ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕರಸೇವಕ ಶ್ರೀಕಾಂತ ಪೂಜಾರಿಯನ್ನು 31 ವರ್ಷಗಳ ಬಳಿಕ ಬಂಧಿಸಿದ್ದನ್ನು ಖಂಡಿಸಿ ಬಿಜೆಪಿ ನಾಯಕರು ‘ನಾನು ಕರಸೇವಕ, ನನ್ನನ್ನೂ ಬಂಧಿಸಿ’ ಎಂಬ ಅಭಿಯಾನ ನಡೆಸಿದ್ದರು. ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಬಂಧಿಸಿದೆ ಎಂದು ಬಿಜೆಪಿ ಆರೋಪಿಸಿತ್ತು.
ಈ ಅಭಿಯಾನಕ್ಕೆ ಪ್ರತಿಕ್ರಿಯೆಯಾಗಿ ತಿರುಚಿದ ಪೋಸ್ಟರ್‌ಗಳನ್ನು ಕಾಂಗ್ರೆಸ್ ನಾಯಕರು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಫೋರ್ಜರಿ ಹಾಗೂ ಎರಡು ಗುಂಪುಗಳ ನಡುವೆ ದ್ವೇಷ ಉಂಟುಮಾಡಿದ ಆರೋಪದಡಿ ದೂರು ದಾಖಲಿಸಲಾಗಿತ್ತು.
ಬಿಜೆಪಿ ಕಾನೂನು ಪ್ರಕೋಷ್ಠದ ಮಾಜಿ ಸಂಚಾಲಕ ಯೋಗೇಂದ್ರ ಹೊಡಘಟ್ಟ ಅವರು ಖಾಸಗಿ ದೂರು ಸಲ್ಲಿಸಿದ್ದರಿಂದ, ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಡಿ.ಕೆ. ಶಿವಕುಮಾರ್ ಮತ್ತು ಬಿಆರ್ ನಾಯ್ಡು ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ತನಿಖೆಗೆ ಆದೇಶಿಸಿತ್ತು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳೂರು
ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‌ಗಳು ತೇಲಿಬಂದವು.. ಸಾರ್ವಜನಿಕರು ಶಾಕ್
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮ, ಫರಂಗಿಪೇಟ... ಓದನ್ನು ಮುಂದುವರಿಸಿ
‘ತೆರಿಗೆ ಹೇರುವ ರಾಮಯ್ಯ’: ಸಿದ್ದರಾಮಯ್ಯ ವಿರುದ್ಧ R. Ashoka ಟೀಕೆ
ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ 1.15 ಲಕ್ಷ ಕೋಟಿ ರೂ. ಸಾಲ ಪಡೆಯುವ ಮೂಲಕ ಬಜೆಟ್ ಮ... ಓದನ್ನು ಮುಂದುವರಿಸಿ
ಒಳ ಮೀಸಲಾತಿ ಗೊಂದಲಕ್ಕೆ ಇನ್ನೆಷ್ಟು ವರ್ಷ? ಸಿಎಂ ಸಿದ್ದರಾಮಯ್ಯಗೆ ಸಚಿವ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು: ಒಳ ಮೀಸಲಾತಿ ವಿಚಾರವನ್ನು ಇತ್ಯರ್ಥಪಡಿಸಲು ಇನ್ನೆಷ್ಟು... ಓದನ್ನು ಮುಂದುವರಿಸಿ
ಕೂಡ್ಲಿಗಿ
ಕರಡಿ ದಾಳಿಗೆ ತುತ್ತಾದ ಓಬಣ್ಣರ ಕುಟುಂಬದ ಕಣ್ಣೀರೊರೆಸಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಹಾಲಸಾಗರ ಗ್ರಾಮದ , ಕುರ... ಓದನ್ನು ಮುಂದುವರಿಸಿ
ದುಬೈನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ ರಾಜ್ಯ ಚುನಾವಣಾ ಆಯುಕ್ತ! ಜಿ.ಎಸ್. ಸಂಗ್ರೇಶಿ, ಪುಷ್ಪಾ ಅಮರನಾಥ್
ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಬಂದ ರಾಜ್ಯ ಚುನಾವಣಾ ಆಯುಕ್ತ... ಓದನ್ನು ಮುಂದುವರಿಸಿ
ಒಳಮೀಸಲಾತಿ ಗೊಂದಲ: ಸಚಿವ ಸಂಪುಟ ಇಂದು ಚರ್ಚಿಸಿ ಅಂತಿಮ ತೀರ್ಮಾನ
ಬೆಂಗಳೂರು: ನೇಮಕಾತಿಯೊಳಗಿನ ಒಳಮೀಸಲಾತಿ ಗೊಂದಲ ಕುರಿತು ಇಂದು ಸಚಿ... ಓದನ್ನು ಮುಂದುವರಿಸಿ
ನಿಗಮ–ಮಂಡಳಿ ಅಧ್ಯಕ್ಷರ ಮೇಲಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ ಇತ್ಯರ್ಥ
ಬೆಂಗಳೂರು: ರಾಜ್ಯದಲ್ಲಿ 34 ಮಂದಿ ಶಾಸಕರನ್ನು ನಿಗಮ ಮತ್ತು ಮಂಡಳಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಯುದ್ಧದ ಮಧ್ಯೆ ಜಿದ್ದಾದಿಂದ ಕನ್ನಡಿಗರ ಸುರಕ್ಷಿತ ಆಗಮನ: 6E78 ವಿಮಾನ ಬೆಂಗಳೂರಿಗೆ
ದೇವನಹಳ್ಳಿ: ಯುದ್ಧ ಪರಿಸ್ಥಿತಿಯ ನಡುವೆಯೂ ಜಿದ್ದಾ ನಗರದಿಂದ ಕನ್ನ... ಓದನ್ನು ಮುಂದುವರಿಸಿ
ಡ್ರೋನ್ ಹಾರಾಟ ನಿಷೇಧ: ಬೆಳಗಾವಿ ವಿಮಾನ ನಿಲ್ದಾಣದ ಭದ್ರತೆ ಗಂಭೀರ ಕ್ರಮ
ಬೆಳಗಾವಿ: ನಗರದಲ್ಲಿರುವ Belagavi Airport (ಸಾಂಬ್ರಾ ವಿಮಾನ ನಿ... ಓದನ್ನು ಮುಂದುವರಿಸಿ
ಮಾರ್ಚ್ 6ಕ್ಕೆ ರಾಜ್ಯ ಬಜೆಟ್: ದಾಖಲೆಯ 17ನೇ ಬಜೆಟ್ ಮಂಡಿಸಲು ಸಿದ್ದರಾಮಯ್ಯ ರೆಡಿ
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಪವರ್ ಫೈಟ್ ನಡುವೆಯೇ ಮುಖ್ಯಮಂತ್... ಓದನ್ನು ಮುಂದುವರಿಸಿ