ಡ್ರೋನ್ ಸರ್ವೇ ಮೂಲಕ 46,000 ಮನೆಗಳಿಗೆ ಹೆಚ್ಚುವರಿ ಆಸ್ತಿ ತೆರಿಗೆ ನೋಟಿಸ್
ಬೆಂಗಳೂರು: ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ಕ್ರಮವು ಇದೀಗ ಬೃಹತ್ ಚರ್ಚೆಗೆ ಕಾರಣವಾಗಿದೆ. ಡ್ರೋನ್ ಸರ್ವೇ ಮೂಲಕ ಹೆಚ್ಚುವರಿ ಆಸ್ತಿ ತೆರಿಗೆ ವಸೂಲು ಮಾಡುವ ನಿರ್ಧಾರ ಜಿಬಿಎ ತೆಗೆದುಕೊಂಡಿದ್ದು, ಮನೆಗಳ ಬಾಲ್ಕನಿ, ಕಿಟಕಿ ಮೇಲಿನ ಸಜ್ಜೆ, ವಾಟರ್ ಟ್ಯಾಂಕ್ ಸ್ಟ್ಯಾಂಡ್, ಕಾರ್ ಪಾರ್ಕಿಂಗ್, ಪೋರ್ಟಿಕೋ ಮತ್ತು ಮನೆ ಮುಂದೆ ತಾತ್ಕಾಲಿಕ ಗಜಿಬೋಗಳ ಮೇಲೆ ಕೂಡ ತೆರಿಗೆ ವಿಧಿಸಲಾಗಿದೆ
.
ಈ ಕ್ರಮದಲ್ಲಿ ಸುಮಾರು 46,000 ಮನೆ ಮಾಲೀಕರಿಗೆ ಹೆಚ್ಚುವರಿ ತೆರಿಗೆ ಸಂಗ್ರಹಣೆಗಾಗಿ ನೋಟಿಸ್ ಕಳುಹಿಸಲಾಗಿದೆ. ಮನೆಗಳಿಗೆ 5 ಲಕ್ಷದಿಂದ 18 ಲಕ್ಷ ರೂಪಾಯಿವರೆಗೆ ಹೆಚ್ಚುವರಿ ತೆರಿಗೆ ಪಾವತಿಸಲು ಮೆಸೇಜ್ ಮೂಲಕ ಸೂಚಿಸಲಾಗಿದೆ. ಜಿಬಿಎ ಎಚ್ಚರಿಕೆ ನೀಡಿದ್ದಾರೆ, ಮೆಸೇಜ್ ಓದಿದ ಕ್ಷಣವೇ ನೋಟಿಸ್ ಸ್ವೀಕೃತ ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿ ತೆರಿಗೆ ಪ್ರಶ್ನಿಸಿದವರ ಮನೆಗಳನ್ನು ಹರಾಜು ಮಾಡಲು ಕೂಡ ಸೂಚನೆ ನೀಡಲಾಗಿದೆ. ಈಗಾಗಲೇ 17 ಮನೆಗಳ ಹರಾಜು ಪ್ರಕ್ರಿಯೆಗೆ ಅಂತಿಮ ನೋಟಿಸ್ ನೀಡಲಾಗಿದೆ.
ಈ ಕ್ರಮವನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ಅವರು, “ಡ್ರೋನ್ ಸರ್ವೇ ನಡೆಸಿ ಬೆಂಗಳೂರಿನಲ್ಲಿ ಮನೆಗಳಿಗೆ ಬಾಕಿ ತೆರಿಗೆ ಮತ್ತು ದಂಡ ವಿಧಿಸುತ್ತಿದ್ದಾರೆ. ಒಂದು ಮನೆಗೆ 7–8 ಲಕ್ಷದಿಂದ 30 ಲಕ್ಷ ರೂಪಾಯಿವರೆಗೆ ತೆರಿಗೆ ಮತ್ತು ದಂಡ ವಿಧಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಅದರ ಬೆಂಬಲವಾಗಿ ಮಾತನಾಡಿದ ಶಾಸಕ ಸುರೇಶ್ ಕುಮಾರ್, “ಇದು ಆಸ್ತಿ ತೆರಿಗೆ ಭಯೋತ್ಪಾದನೆ. ತಕ್ಷಣ ಈ ಕ್ರಮವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು. ಈ ಆರೋಪಗಳಿಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಾವು ಡ್ರೋನ್ ಸರ್ವೇ ನಡೆಸಿ ನೋಟಿಸ್ ನೀಡುತ್ತಿಲ್ಲ. ಆದರೆ ಮನೆಗಳ ಸರ್ವೇ ಡ್ರೋನ್ ಮೂಲಕ ನಡೆಯುತ್ತಿದೆ. ಮೊದಲು ಸೆಲ್ಫ್ ಅಸೆಸ್ಮೆಂಟ್ ಸ್ಕೀಮ್ ಆರಂಭಿಸಿದೆ. ಒನ್ ಟೈಮ್ ಸೆಟ್ಲ್ಮೆಂಟ್ ಸ್ಕೀಮ್ ಕೂಡ ನೀಡುತ್ತಿದ್ದೇವೆ. ಯಾರಿಗಾದರೂ ಸಮಸ್ಯೆ ಇದ್ದರೆ ಅರ್ಜಿ ಸಲ್ಲಿಸಲಿ, ಪರಿಶೀಲಿಸಿ ಸರಿಪಡಿಸುತ್ತೇವೆ” ಎಂದು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ಬಾಶೆಟ್ಟಹಳ್ಳಿ ಕೇಬಲ್ ಫ್ಯಾಕ್ಟರಿ ಸುಟ್ಟು ಕರಕಲು ಕೋಟ್ಯಂತರ ರೂ. ನಷ್ಟ
ದೇವನಹಳ್ಳಿ: ಸಣ್ಣ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ದೊಡ್ಡಬಳ್ಳಾಪುರ... ಓದನ್ನು ಮುಂದುವರಿಸಿ
ಬೀದಿ ನಾಯಿಗಳ ಹೊರೆ ಶಿಕ್ಷಕರಿಗೆ? ಬಸವರಾಜ ಹೊರಟ್ಟಿ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಶಾಲಾ ಶಿ... ಓದನ್ನು ಮುಂದುವರಿಸಿ
ರಸ್ತೆ ಕಾಮಗಾರಿಯಲ್ಲಿ ಕಡಿಯುವ ಪ್ರತಿ ಮರಕ್ಕೆ 10 ಸಸಿ ಕಡ್ಡಾಯ - ಈಶ್ವರ ಖಂಡ್ರೆ
ಬೆಂಗಳೂರು: ಮರ ಕಟಿಂಗ್ ಸಂಬಂಧಿತ ರಸ್ತೆ ಯೋಜನೆಗಳಲ್ಲಿ, ಕಡಿಯುವ ಪ... ಓದನ್ನು ಮುಂದುವರಿಸಿ
ನಿರ್ಮಲಾ ಸೀತಾರಾಮನ್ ಬಜೆಟ್ ಖಾಲಿ ಡ್ರಮ್ಮು- ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ
ಬೆಂಗಳೂರು : ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ ವಿಧಾನಸಭೆಯ ಚರ್... ಓದನ್ನು ಮುಂದುವರಿಸಿ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪಾವತಿ ಜಾರಿ ಮೆನು ಪ್ರಕಾರ ಆಹಾರ ನೀಡಲಾಗುತ್ತಿದೆಯೇ? – ಕಾಂಗ್ರೆಸ್ ಆರೋಪ
ಬೆಂಗಳೂರು: ರಾಜ್ಯದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪಾವತಿ... ಓದನ್ನು ಮುಂದುವರಿಸಿ
ಅಡುಗೆ ಅನಿಲ ಬೆಲೆ ಏರಿಕೆ ಸ್ಮೃತಿ ಇರಾನಿ ಕಾಣೆಯಾಗಿದ್ದಾರೆ? – ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
ಬೆಂಗಳೂರು: ಕೇಂದ್ರ ಸರ್ಕಾರದ ಅಡುಗೆ ಅನಿಲ ಬೆಲೆ ಏರಿಕೆ ಹಿನ್ನೆಲೆ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಸಂಘರ್ಷದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 17 ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಾದ ಅಬುಧಾಬಿ, ರಿಯಾದ್, ಜೆದ್ದಾ,... ಓದನ್ನು ಮುಂದುವರಿಸಿ
ಕಾಂಗ್ರೆಸ್ ಕಚೇರಿ ಭೂ ಮಂಜೂರು ಕುರಿತು ವಿಧಾನ ಪರಿಷತ್‌ನಲ್ಲಿ ತೀವ್ರ ವಾಗ್ವಾದ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ... ಓದನ್ನು ಮುಂದುವರಿಸಿ
ವಾಣಿಜ್ಯ ಎಲ್‌ಪಿಜಿ ಕೊರತೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ತೀವ್ರ ಸಂಕಷ್ಟ- ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ
ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ನಗರದ... ಓದನ್ನು ಮುಂದುವರಿಸಿ
ರಾಯಚೂರಿನಲ್ಲಿ ಕನಸಿನ ಮನೆ ನಿರ್ಮಾಣದ ವೇಳೆ ದಂಪತಿ ಸ್ಥಳದಲ್ಲೇ ಸಾವು!
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಯಲಗಟ್ಟ ಗ್ರಾಮದಲ್ಲಿ ಕನಸಿನ ಮ... ಓದನ್ನು ಮುಂದುವರಿಸಿ