ಕಾಂಗ್ರೆಸ್ ಕಚೇರಿ ಭೂ ಮಂಜೂರು ಕುರಿತು ವಿಧಾನ ಪರಿಷತ್‌ನಲ್ಲಿ ತೀವ್ರ ವಾಗ್ವಾದ
ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ತೆರೆಯಲು ಭೂ ಮಂಜೂರಿನ ಕುರಿತು ವಿಧಾನ ಪರಿಷತ್‌ನಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಗಂಭೀರ ವಾಗ್ವಾದ ಸಂಭವಿಸಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಡಿ.ಎಸ್. ಅರುಣ್ ಈ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ ಸುಮಾರು 40 ಕೋಟಿ ರೂ. ಮೌಲ್ಯದ ಸರ್ಕಾರಿ ಜಾಗವನ್ನು ಕೇವಲ 2 ಕೋಟಿ ರೂ. ದರದಲ್ಲಿ ಮಂಜೂರು ಮಾಡಲಾಗಿದೆ ಎಂಬ ಆರೋಪ ಸತ್ಯವೇ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, “ಕಾನೂನು ಪ್ರಕಾರ ನಾಗರಿಕ ಸೌಲಭ್ಯ (CA) ನಿವೇಶನಗಳನ್ನು ಮಂಜೂರು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ತುಮಕೂರಿನಲ್ಲಿ ಮಾರ್ಗಸೂಚಿ ಮೌಲ್ಯದ ಶೇ.5ರಷ್ಟು ಶುಲ್ಕದ ಆಧಾರದ ಮೇಲೆ ಭೂ ನೀಡಲಾಗಿದೆ. ಮಂಜೂರಾತಿ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ನಡೆದಿದೆ ಎಂಬುದು ತಪ್ಪು” ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, “ರಾಜ್ಯದಲ್ಲಿ 100 ಸ್ಥಳಗಳಲ್ಲಿ ಕಾಂಗ್ರೆಸ್ ಕಚೇರಿ ಸ್ಥಾಪಿಸುವ ಉದ್ದೇಶ ಸರಿಯಲ್ಲ. ಎಲ್ಲಾ ಸ್ಥಳಗಳಲ್ಲಿ ಮಾರ್ಗಸೂಚಿ ದರದಲ್ಲಿ ಭೂ ಮಂಜೂರು ಮಾಡುವುದು ತಪ್ಪು. ಸರ್ಕಾರವೇ ಲೂಟಿ ಮಾಡುತ್ತಿದೆ” ಎಂದು ಆರೋಪಿಸಿದರು.
ಸಚಿವ ಬೈರತಿ ಸುರೇಶ್ ಪ್ರತಿಕ್ರಿಯಿಸುತ್ತಾ, “ರಾಜಕೀಯ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳಿಗೆ CA ನಿವೇಶನ ನೀಡುವುದು ಹೊಸದು ಅಲ್ಲ. ಹೀಗೇ ಬಿಜೆಪಿ ಕೂಡ ಕಡಿಮೆ ದರದಲ್ಲಿ ಜಾಗ ಪಡೆದುಕೊಂಡಿದೆ. ಡಿ.ಎಸ್. ಅರುಣ್ ಅವರು ಸಹ ಈ ಹಿಂದೆ ಎರಡು CA ನಿವೇಶನಗಳನ್ನು ಕಡಿಮೆ ಬೆಲೆಗೆ ಪಡೆದಿದ್ದಾರೆ” ಎಂದು counter ಮಾಡಿದ್ದಾರೆ.
ಉಭಯಪಕ್ಷಗಳ ನಡುವಿನ ಚರ್ಚೆ ಗಂಭೀರತೆಯನ್ನು ಹೊಂದಿದ್ದರಿಂದ ಸಭಾಪತಿ ಮಧ್ಯಪ್ರವೇಶಿಸಿ, ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ನಡೆಸಬಾರದು ಎಂದು ನಿರ್ಧರಿಸಿ, ಅಗತ್ಯವಿದ್ದರೆ ಪ್ರತ್ಯೇಕ ಅರ್ಧಗಂಟೆಯ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ಬಾಶೆಟ್ಟಹಳ್ಳಿ ಕೇಬಲ್ ಫ್ಯಾಕ್ಟರಿ ಸುಟ್ಟು ಕರಕಲು ಕೋಟ್ಯಂತರ ರೂ. ನಷ್ಟ
ದೇವನಹಳ್ಳಿ: ಸಣ್ಣ ಕಿಡಿಯಿಂದ ಹೊತ್ತಿಕೊಂಡ ಬೆಂಕಿ ದೊಡ್ಡಬಳ್ಳಾಪುರ... ಓದನ್ನು ಮುಂದುವರಿಸಿ
ಬೀದಿ ನಾಯಿಗಳ ಹೊರೆ ಶಿಕ್ಷಕರಿಗೆ? ಬಸವರಾಜ ಹೊರಟ್ಟಿ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಶಾಲಾ ಶಿ... ಓದನ್ನು ಮುಂದುವರಿಸಿ
ರಸ್ತೆ ಕಾಮಗಾರಿಯಲ್ಲಿ ಕಡಿಯುವ ಪ್ರತಿ ಮರಕ್ಕೆ 10 ಸಸಿ ಕಡ್ಡಾಯ - ಈಶ್ವರ ಖಂಡ್ರೆ
ಬೆಂಗಳೂರು: ಮರ ಕಟಿಂಗ್ ಸಂಬಂಧಿತ ರಸ್ತೆ ಯೋಜನೆಗಳಲ್ಲಿ, ಕಡಿಯುವ ಪ... ಓದನ್ನು ಮುಂದುವರಿಸಿ
ನಿರ್ಮಲಾ ಸೀತಾರಾಮನ್ ಬಜೆಟ್ ಖಾಲಿ ಡ್ರಮ್ಮು- ಡಿಸಿಎಂ ಡಿ.ಕೆ. ಶಿವಕುಮಾರ್ ಲೇವಡಿ
ಬೆಂಗಳೂರು : ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ ವಿಧಾನಸಭೆಯ ಚರ್... ಓದನ್ನು ಮುಂದುವರಿಸಿ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪಾವತಿ ಜಾರಿ ಮೆನು ಪ್ರಕಾರ ಆಹಾರ ನೀಡಲಾಗುತ್ತಿದೆಯೇ? – ಕಾಂಗ್ರೆಸ್ ಆರೋಪ
ಬೆಂಗಳೂರು: ರಾಜ್ಯದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪಾವತಿ... ಓದನ್ನು ಮುಂದುವರಿಸಿ
ಅಡುಗೆ ಅನಿಲ ಬೆಲೆ ಏರಿಕೆ ಸ್ಮೃತಿ ಇರಾನಿ ಕಾಣೆಯಾಗಿದ್ದಾರೆ? – ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
ಬೆಂಗಳೂರು: ಕೇಂದ್ರ ಸರ್ಕಾರದ ಅಡುಗೆ ಅನಿಲ ಬೆಲೆ ಏರಿಕೆ ಹಿನ್ನೆಲೆ... ಓದನ್ನು ಮುಂದುವರಿಸಿ
ಇರಾನ್–ಇಸ್ರೇಲ್ ಸಂಘರ್ಷದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 17 ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ
ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳಾದ ಅಬುಧಾಬಿ, ರಿಯಾದ್, ಜೆದ್ದಾ,... ಓದನ್ನು ಮುಂದುವರಿಸಿ
ವಾಣಿಜ್ಯ ಎಲ್‌ಪಿಜಿ ಕೊರತೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ತೀವ್ರ ಸಂಕಷ್ಟ- ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ
ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ನಗರದ... ಓದನ್ನು ಮುಂದುವರಿಸಿ
ಡ್ರೋನ್ ಸರ್ವೇ ಮೂಲಕ 46,000 ಮನೆಗಳಿಗೆ ಹೆಚ್ಚುವರಿ ಆಸ್ತಿ ತೆರಿಗೆ ನೋಟಿಸ್
ಬೆಂಗಳೂರು: ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು... ಓದನ್ನು ಮುಂದುವರಿಸಿ
ರಾಯಚೂರಿನಲ್ಲಿ ಕನಸಿನ ಮನೆ ನಿರ್ಮಾಣದ ವೇಳೆ ದಂಪತಿ ಸ್ಥಳದಲ್ಲೇ ಸಾವು!
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಯಲಗಟ್ಟ ಗ್ರಾಮದಲ್ಲಿ ಕನಸಿನ ಮ... ಓದನ್ನು ಮುಂದುವರಿಸಿ