ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ರಸ್ತೆ ತಡೆ – 80 ಕ್ಕೂ ಹೆಚ್ಚು ಪ್ರತಿಭಟನಾಕಾರರು ಬಂಧನ

ಮಂಡ್ಯ: ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ಮಾಡಿರುವುದನ್ನು ಖಂಡಿಸಿ, ಸೋಮವಾರ ಬೆಂಗಳೂರು – ಮೈಸೂರು ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ 80 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. 50 ದಿನಗಳಿಂದ ನಿರಂತರ ಹೋರಾಟ: ಗೆಜ್ಜಲಗೆರೆ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು 50 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದರು. ಸೋಮವಾರ, ರೈತ ಪರ ಹೋರಾಟಗಾರ್ತಿ ಸುನಂದಾ ಜಯರಾಮ್ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಗ್ರಾಮಸ್ಥರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

 

ಎತ್ತಿನಗಾಡಿ, ಜಾನುವಾರುಗಳು ಸಹಿತ ಗ್ರಾಮಸ್ಥರು ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಹೆದ್ದಾರಿಯಲ್ಲೇ ಕುಳಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಸತ್ತಿಗೇರಿರವರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಫಲಿತಾಂಶಕ್ಕಿಲ್ಲ. ನಂತರ ನೂರಾರು ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು 3 ವಾಹನಗಳಲ್ಲಿ ಮಂಡ್ಯದ ಪೊಲೀಸ್ ಠಾಣೆಗೆ ಕರೆದೋಯ್ದರು.

 

ಸುನಂದಾ ಜಯರಾಮ್ ತಿಳಿಸಿದ್ದಾರೆ, “ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ಕುರಿತು 50 ದಿನಗಳ ಹೋರಾಟ ನಡೆಸಿದರೂ, ಅಧಿಕಾರಿಗಳು ರೈತರ, ಗ್ರಾಮಸ್ಥರ ಆಶೋತ್ತರಗಳಿಗೆ ಸ್ಪಂದಿಸಿಲ್ಲ. ನಾವು ಅನಿರ್ಧಿಷ್ಟಾವಧಿ ಧರಣಿ ಮುಂದುವರೆಸುತ್ತೇವೆ.” ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ ಕುಮಾರ್, ಸಿಪಿಐ ನವೀನ್ ಕುಮಾರ್ ನೇತೃತ್ವದಲ್ಲಿ ನೂರಾರು ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ನಲ್ಲಿದ್ದರು. ಪ್ರತಿಭಟನೆಯಲ್ಲಿ ರೈತ ಮುಖಂಡರು ಚಂದ್ರಶೇಖರ್, ಲಿಂಗಪ್ಪಾಜಿ, ಮುದ್ದೇಗೌಡ್ರು, ಕೆ.ಬೊರೇಗೌಡ, ವಿರೇಶ್, ಗುರುಮೂರ್ತಿ, ಮಂಜಣ್ಣ, ಜಗದೀಶ್, ರಾಮಲಿಂಗಯ್ಯ, ಯೋಗೇಶ್ ಸೇರಿದಂತೆ ಹಲವು ಹೋರಾಟಗಾರರು ಭಾಗವಹಿಸಿದ್ದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

20 hours ago

   
Image 1
Image 1
ಕೊಪ್ಪಳ

ಕನಕಗಿರಿ

ಕನಕಗಿರಿ ಸರಣಿ ಕಳ್ಳತನ ಪ್ರಕರಣಗಳು – ಸಾರ್ವಜನಿಕರಲ್ಲಿ ಭೀತಿ, ಸಚಿವರು ಪೊಲೀಸರಿಗೆ ತ್ವರಿತ ಕ್ರಮ ಸೂಚನೆ

ಕೊಪ್ಪಳ: ಕೊಪ್ಪಳದ ಕನಕಗಿರಿಯಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ವಿಜಯನಗರ

ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾಮಗಾರಿ ನಿಧಾನ, ರೈತರಲ್ಲಿ ಆತಂಕ

ವಿಜಯನಗರ: ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಬದಲಾವಣೆ ಕಾ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ವಿಜಯಪುರ

ಅನ್ಯಧರ್ಮೀಯನೊಂದಿಗೆ ಯುವತಿ ಮದುವೆ – ಪೊಲೀಸ್ ಠಾಣೆ ಮುಂದೆ ಪೋಷಕರ ಕಣ್ಣೀರು

ವಿಜಯಪುರ: ಪ್ರೀತಿಸಿದ ಯುವಕನೊಂದಿಗೆ ಪರಾರಿಯಾಗಿದ್ದ ಮಗಳಿಗಾಗಿ ಪೋ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಮೈಸೂರು

ನಂಜನಗೂಡು

ಗ್ರಾಮ ದೇವತೆ ಜಾತ್ರೆಗೆ ಕಟ್ಟುನಿಟ್ಟಿನ ನಿಯಮಗಳು – ವಿಡಿಯೋ ಚಿತ್ರೀಕರಣ, ಮದ್ಯಪಾನ ಗಲಾಟೆಗೆ ₹30 ಸಾವಿರ ದಂಡ

ಮೈಸೂರು: ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆಯಲಿರುವ ಗ್... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ತುಮಕೂರು

ಗಂಡು ಮಗುವಿನ ಆಸೆಗೆ ಎರಡುವರೆ ವರ್ಷದ ಮಗು ಅಪಹರಣೆ – ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಶಿರಾ ಪೊಲೀಸರು

ತುಮಕೂರು: ಹೆಣ್ಣು–ಗಂಡು ಸಮಾನರು ಎಂಬ ಆಲೋಚನೆ ಸಮಾಜದಲ್ಲಿ ಬೆಳೆದಿ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1
ಧಾರವಾಡ

ಹುಬ್ಬಳ್ಳಿ

ಸಾಗರ್ ಕಾಲೋನಿ ಅಭಿವೃದ್ಧಿ ಕಾಮಗಾರಿಗೆ ಹೊರಗಿನ ಹಸ್ತಕ್ಷೇಪ – ನಿವಾಸಿಗಳ ಆಕ್ರೋಶ

ಹುಬ್ಬಳ್ಳಿ–ಧಾರವಾಡ:  ಹುಬ್ಬಳ್ಳಿ–ಧಾರವಾಡ: ಮಹಾನಗರ ಪಾಲಿಕೆ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ತುಮಕೂರು

ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಮಧ್ಯ ಮಾರಾಟ – ಅಬಕಾರಿ, ಪೊಲೀಸರು ನಿರ್ಲಕ್ಷ

ತುಮಕೂರು: ತುಮಕೂರು ತಾಲ್ಲೂಕಿನ ಕೋರ ಹೋಬಳಿ ಚಿಕ್ಕತೊಟ್ಲುಕೆರೆ ಗ್... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಧಾರವಾಡ

ಹುಬ್ಬಳ್ಳಿ

ಮಹದಾಯಿ–ಕಳಸಾ–ಬಂಡೂರಿ ಯೋಜನೆ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ

ಹುಬ್ಬಳ್ಳಿ:  ಇಂದು ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಚಾಮರಾಜನಗರ

ಬಿಗ್ ಕ್ಯಾಟ್ ಸಂರಕ್ಷಣೆಯಲ್ಲಿ ಭಾರತ ಮುಂಚೂಣಿಯಲ್ಲಿ – NTCA IGF ಎಸ್.ಪಿ. ಯಾದವ್

ಚಾಮರಾಜನಗರ:  ಬಂಡೀಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ NTCA... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಮಂಡ್ಯ

ಮಳವಳ್ಳಿ

ತಾಯಿ–ಮಗಳು ಆತ್ಮಹತ್ಯೆ ಪ್ರಕರಣಕ್ಕೆ ಭೀಕರ ತಿರುವು, ಪ್ರಿಯಕರ ಆತ್ಮಹತ್ಯೆಗೆ ಯತ್ನ

ಮಂಡ್ಯ:  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1