ಗ್ರಾಮ ಪಂಚಾಯಿತಿ ಚುನಾವಣೆ ಸ್ಫರ್ಧೆಗೆ ಹೆತ್ತ ಮಗುವನ್ನೆ ಕೊಂದ ಪಾಪಿ ತಂದೆ..!
ಮಹಾರಾಷ್ಟ್ರ : ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಫರ್ಧೆ ಮಾಡಲು ತನ್ನ ಮೂರನೇ ಮಗು ಅಡ್ಡಿಯಾಗಿದೆ ಎಂದು ಪಾಪಿ ತಂದೆಯೊಬ್ಬ ಹೆತ್ತ ಮಗುವನ್ನೇ ಕೊಲೆಗೈದ ಘಟನೆ ತಡವಾಗಿ ವರದಿಯಾಗಿದೆ. ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರ್ ಗ್ರಾಮದ 28 ವರ್ಷ ಪ್ರಾಯದ ಪಾಂಡುರಂಗ ಕೊಂಡಮಂಗಳೆ ವೃತ್ತಿಯಲ್ಲಿ ಕ್ಷೌರಿಕ. ಅವನಿಗೆ ಗ್ರಾಮ ಸರಪಂಚ ಗಣೇಶ್ ಶಿಂಧೆಯ ಕುಮ್ಮಕ್ಕಿನಿಂದ ಪಂಚಾಯತಿ ಚುನಾವಣೆಗೆ ನಿಲ್ಲುವ ಆಸೆ ಹುಟ್ಟಿತು. ಅದರೆ, ಅಲ್ಲೊಂದು ಸಮಸ್ಯೆಯಿತ್ತು. ಅವನಿಗೆ ಮೂರು ಮಕ್ಕಳು. ಎರಡು ಅವಳಿ ಜವಳಿ ಹೆಣ್ಣು ಮಕ್ಕಳು, ಮತ್ತೊಂದು ಗಂಡು ಮಗು. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಸರ್ಕಾರಿ ಕಾನೂನು ಅವನಿಗೆ ತೊಡಕಾಯಿತು.
ಪಾಂಡುರಂಗ ಮೊದಲು ಗಣೇಶ್ ಶಿಂಧೆಯ ಸಹಾಯದಿಂದ ತನಗೆ ಎರಡೇ ಮಕ್ಕಳು ಎಂದು ದಾಖಲೆ ಸೃಷ್ಟಿಸಲು ನೋಡಿದ. ಸಾಧ್ಯವಾಗಲಿಲ್ಲ. ನಂತರ ಒಂದು ಮಗುವನ್ನು ದತ್ತು ಕೊಟ್ಟು ತನಗೆ ಎರಡೇ ಮಕ್ಕಳು ಅಂತ ತೋರಿಸಲು ನೋಡಿದ. ಅದೂ ಆಗಲಿಲ್ಲ. ಆಗ ಅವನು ಜನವರಿ 29 ರಂದು ಅವಳಿ ಹೆಣ್ಣು ಮಕ್ಕಳಲ್ಲಿ ಒಂದಾದ ಆರು ವರ್ಷದ ಪ್ರಾಚಿಯನ್ನು ಬೈಕಲ್ಲಿ ಕುಳ್ಳಿರಿಸಿಕೊಂಡು ತೆಲಂಗಾಣದ ನಿಜಾಮಬಾದ್ ಜಿಲ್ಲೆಯ ಎಡಪಳ್ಳಿಗೆ ಕೊಂಡು ಹೋಗಿ ಅಲ್ಲಿ ಒಂದು ಕಾಲುವೆಗೆ ಎಸೆದು ಸಾಯಿಸಿದ. ಈ ಪಾಪಿ ತಂದೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಮಿತ್ ಶಾ ಮಹಿಳಾ ಮಾವೋವಾದಿಗಳಿಗೆ ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದಲ್ಲಿ ಸೇರಲು ಮನವಿ
ಛತ್ತೀಸ್‌ಗಢ : ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಅಭಿವ... ಓದನ್ನು ಮುಂದುವರಿಸಿ
ನೀವು ಎಷ್ಟೇ ಕಿರುಚಾಡಿದ್ರು ನನ್ನ ಸಮಾಧಿ ತೋಡಲು ಸಾಧ್ಯವಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ಮೋದಿ ಆಕ್ರೋಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ತೀವ... ಓದನ್ನು ಮುಂದುವರಿಸಿ
ಮಾಲೂರು ಶಾಸಕ ಕೆ.ವೈ. ನಂಜೇಗೌಡರ ಆಯ್ಕೆ ಮಾನ್ಯ: ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ದೆಹಲಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇ... ಓದನ್ನು ಮುಂದುವರಿಸಿ
"ಪಾಪ… ಬಾಳಿ ಬದುಕಬೇಕಿದ್ದ ಮಕ್ಕಳು; ಹೀಗಾಗಬಾರದು"
ಹೈದರಾಬಾದ್ : ಕೆಲಬಾರಿ ಪೋಷಕರು ಮಾಡುವ ತಪ್ಪಿಗೆ ಅಮಾಯಕ ಮಕ... ಓದನ್ನು ಮುಂದುವರಿಸಿ
ಯೂಟ್ಯೂಬ್ ರೀಲ್ಸ್ ನೋಡುವಾಗ ಕೈಯಲ್ಲಿ ಟೀ ಕಪ್ ಹಿಡಿದುಕೊಂಡು ನಗುವ ಈ ವೈರಲ್ ಹುಡುಗ ಯಾರು?:
ತೆಲಂಗಾಣ : ಇತ್ತೀಚಿನ ದಿನಗಳಲ್ಲಿ ನೀವು ಇನ್ಸ್ಟಾಗ್ರಾಮ್ ಅಥ... ಓದನ್ನು ಮುಂದುವರಿಸಿ
ಭಾರತ–ಮಲೇಷ್ಯಾ ಸಂಬಂಧ ಬಲಪಡಿಸಲು ಫೆಬ್ರವರಿ 7–8ರಂದು ಮಲೇಷ್ಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ!
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮಲೇಷ್ಯಾದ ಪ್ರಧಾನಿ ಅನ್ವರ್... ಓದನ್ನು ಮುಂದುವರಿಸಿ
ಆನ್‌ಲೈನ್ ಬೆಟ್ಟಿಂಗ್ ವ್ಯಸನ : ಸರ್ವಿಸ್ ರಿವಾಲ್ವರ್ ಅಡವಿಟ್ಟ ಎಸ್ಐ
ಆಂಧ್ರಪ್ರದೇಶದ ರಾಯಚೋಟಿಗೆ ಸೇರಿದ ಭಾನು ಪ್ರಕಾಶ್ ಅಂಬರ್‌ಪೇಟ್ ಪೊಲೀಸ್ ಠಾಣೆಯಲ್ಲಿ ಕ್... ಓದನ್ನು ಮುಂದುವರಿಸಿ
ದೇವಾಲಯದ ಆವರಣದಲ್ಲಿ ಗಾಂಜಾ ಬೆಳೆದ ಅರ್ಚಕ ಬಂಧನ : ₹70 ಲಕ್ಷ ಮೌಲ್ಯದ ವಸ್ತುಗಳ ವಶಕ್ಕೆ ಪಡೆದ ಪೊಲೀಸರು
ತೆಲಂಗಾಣ : ದೇವಾಲಯದ ಆವರಣದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿ... ಓದನ್ನು ಮುಂದುವರಿಸಿ
ತಾಯಿ ನಿಧನ ಮುಖ ತಿರುಗಿಸಿಕೊಂಡ ಗ್ರಾಮಸ್ಥರು.. ತಾಯಿಯ ಅಂತ್ಯಸಂಸ್ಕಾರ ನೇರವೆರಿಸಿದ ಇಬ್ಬರು ಪುತ್ರಿಯರು
ಬಿಹಾರ : ಛಾಪ್ರಾ, ಬಿಹಾರದಲ್ಲಿ ಒಬ್ಬ ತಾಯಿ ನಿಧನರಾದರು. ಆದರೆ ಗ್... ಓದನ್ನು ಮುಂದುವರಿಸಿ
ಪ್ರತಿವರ್ಷ ಕೇಂದ್ರ ಬಜೆಟ್ ಫೆಬ್ರವರಿ 1 ರಂದೇ ಮಂಡಿಸುವುದೇಕೆ?
ನವದೆಹಲಿ: ಭಾರತದಲ್ಲಿ ಯೂನಿಯನ್ ಬಜೆಟ್ ಅನ್ನು ಪ್ರತಿವರ್ಷ ಫೆಬ್ರ... ಓದನ್ನು ಮುಂದುವರಿಸಿ