ಗ್ಯಾಸ್ ಕೊರತೆ ಹೊಡೆತ: ಚಿಕ್ಕಬಳ್ಳಾಪುರದಲ್ಲಿ ಹೋಟೆಲ್‌ಗಳು ಬಂದ್, ರೈತರಿಗೆ ಸಂಕಷ್ಟ-ತರಕಾರಿ ಬೆಲೆ ಭಾರೀ ಕುಸಿತ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯ ಪರಿಣಾಮವಾಗಿ, ಬೆಂಗಳೂರು ಸೇರಿದಂತೆ ಹಲವೆಡೆ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಚಿಕ್ಕಬಳ್ಳಾಪುರದಲ್ಲೂ ಹೋಟೆಲ್‌ಗಳು ಕಾರ್ಯನಿರ್ವಹಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಅಭಾವದಿಂದ ಅನೇಕ ಹೋಟೆಲ್‌ಗಳು ಬಂದ್ ಆಗಿದ್ದು, ಇದರ ನೇರ ಪರಿಣಾಮ ತರಕಾರಿ ವ್ಯಾಪಾರ ಮತ್ತು ರೈತರ ಜೀವನದ ಮೇಲೆ ಬಿದ್ದಿದೆ. ಹೂವು, ಹಣ್ಣು ಮತ್ತು ತರಕಾರಿ ಉತ್ಪಾದನೆಯಲ್ಲಿ ಹೆಸರುವಾಸಿಯಾದ ಚಿಕ್ಕಬಳ್ಳಾಪುರದಲ್ಲಿ, ಪ್ರತಿದಿನ ಬೇರೆ ನಗರಗಳಿಗೆ ರಫ್ತಾಗುತ್ತಿದ್ದ ತರಕಾರಿಗಳಿಗೆ ಈಗ ಬೇಡಿಕೆ ಕುಸಿತ ಕಂಡಿದೆ.
ಹೋಟೆಲ್ ಉದ್ಯಮ ಸ್ಥಗಿತವಾಗಿರುವುದರಿಂದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಕುಸಿದಿದ್ದು, ಬೆಲೆಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಕೆಲ ತಿಂಗಳುಗಳ ಹಿಂದೆ ಕೆ.ಜಿ.ಗೆ 80ರಿಂದ 100 ರೂಪಾಯಿ ಮಾರಾಟವಾಗುತ್ತಿದ್ದ ಬೀನ್ಸ್, ಈಗ ಕೇವಲ 20 ರೂಪಾಯಿಗೆ ಇಳಿದಿದೆ. ಕ್ಯಾರೆಟ್ 8 ರೂಪಾಯಿ, ಸೋರೆಕಾಯಿ 5 ರೂಪಾಯಿ, ಆಲೂಗಡ್ಡೆ 6 ರೂಪಾಯಿ, ಬೆಂಡೆಕಾಯಿ 10 ರೂಪಾಯಿ, ಈರುಳ್ಳಿ 12 ರೂಪಾಯಿ, ಮೂಲಂಗಿ 5 ರೂಪಾಯಿ, ಆಗಲಕಾಯಿ 15 ರೂಪಾಯಿ, ಕ್ಯಾಪ್ಸಿಕಂ 20 ರೂಪಾಯಿ, ಬದನೇಕಾಯಿ ಕೇವಲ 2 ರೂಪಾಯಿಗೆ ಮಾರಾಟವಾಗುತ್ತಿದೆ.
ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದು, ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ. ಗಲ್ಫ್ ಪ್ರದೇಶದ ಯುದ್ಧದ ಪರಿಣಾಮ ಮತ್ತು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಕುಂಟುತ್ತಿರುವುದರಿಂದ, ಇದನ್ನು ನಂಬಿಕೊಂಡಿದ್ದ ತರಕಾರಿ ವ್ಯಾಪಾರಕ್ಕೂ ಭಾರಿ ಹೊಡೆತ ಬಿದ್ದಿದೆ. ಈ ಸಮಸ್ಯೆಗೆ ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸಬೇಕೆಂದು ರೈತರು ಹಾಗೂ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಡ್ಯದಲ್ಲಿ 150 ಕೋಟಿ ನೀರಾವರಿ ಯೋಜನೆ: ರೈತರಿಗೆ ಗುಡ್ ನ್ಯೂಸ್
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ರೈತರ ಬಹುಕಾಲದ ನೀರಾವರಿ... ಓದನ್ನು ಮುಂದುವರಿಸಿ
ರೈತರಿಗೆ ಗುಡ್ ನ್ಯೂಸ್: ಸಾಲ ಮನ್ನಾಕ್ಕೆ ಹೊಸ ರೂಲ್ಸ್ – ಫ್ಯಾಮಿಲಿ ಸೆಲ್ಫಿ ಕಡ್ಡಾಯ!
ಹೈದರಾಬಾದ್: ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್... ಓದನ್ನು ಮುಂದುವರಿಸಿ
ಟೊಮೆಟೊ ಉತ್ಪಾದನೆಯಲ್ಲಿ ನಂ.1 ದೇಶ ಯಾವುದು ಗೊತ್ತಾ..? ಉತ್ತರ ಕೇಳಿದ್ರೆ ಶಾಕ್!
ನಮ್ಮ ಮನೆಯ ಅಡುಗೆ ಪ್ರಪಂಚದಲ್ಲಿ ಟೊಮ್ಯಾಟೋಗಳ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ... ಓದನ್ನು ಮುಂದುವರಿಸಿ
ಯುದ್ಧದ ಪರಿಣಾಮ ಬೀದರ್ ರೈತರಿಗೆ ಭಾರೀ ಹೊಡೆತ – ಕಲ್ಲಂಗಡಿ ಬೆಲೆ ₹2ಕ್ಕೆ ಕುಸಿತ
ಬೀದರ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯ... ಓದನ್ನು ಮುಂದುವರಿಸಿ
100ಕ್ಕೂ ಹೆಚ್ಚು ಹಸುಗಳು, ಲಕ್ಷಾಂತರ ಆದಾಯ – ದೀಸಾ ಮಹಿಳೆಯ ಗೆಲುವು
ಗಾಂಧೀನಗರ: ಗುಜರಾತ್‌ನ ಬನಾಸ್ ಡೈರಿ ಏಷ್ಯಾದಲ್ಲೇ ಅಗ್ರ ಸ್ಥಾನ ಪಡ... ಓದನ್ನು ಮುಂದುವರಿಸಿ
₹1.5 ಕೋಟಿ ತೆರಿಗೆ ಬಾಕಿ: ಹೈದರಾಬಾದ್ ನಲ್ಲಿರುವ ಜಯಲಲಿತಾ ಮನೆ ಸೀಲ್
ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೈದರ... ಓದನ್ನು ಮುಂದುವರಿಸಿ
ಬೆಂಬಲ ಬೆಲೆ ಯೋಜನೆ ಕುರಿತು ಕೇಂದ್ರದ ಜೊತೆ ರಾಜ್ಯದ ಚರ್ಚೆ
ಬೆಂಗಳೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಗಲ್ಫ್ ಯುದ್ಧದ ಪರಿಣಾಮ, ರೈತರಿಗೆ ರಸಗೊಬ್ಬರ ಕೊರತೆ ಭೀತಿ
ಹುಬ್ಬಳ್ಳಿ: ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಯುದ್ಧದ ಪ... ಓದನ್ನು ಮುಂದುವರಿಸಿ
ತುಂಗಭದ್ರಾ ಜಲಾಶಯದ ಗೇಟ್‌ಗಳ ಬದಲಾವಣೆಗೆ ಸರ್ಕಾರ ತೀವ್ರ ಕ್ರಮ -ರೈತರಿಗೆ ನಿರಾಳತೆ
ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತು... ಓದನ್ನು ಮುಂದುವರಿಸಿ
ಅಕ್ರಮ ಪಂಪ್‌ಸೆಟ್ ಸಂಪರ್ಕ ಸಕ್ರಮಕ್ಕೆ 3 ತಿಂಗಳ ಗಡುವು: ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ
ಬೆಂಗಳೂರು: ಅನಧಿಕೃತವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪ... ಓದನ್ನು ಮುಂದುವರಿಸಿ