ಯುದ್ಧದ ಪರಿಣಾಮ ಬೀದರ್ ರೈತರಿಗೆ ಭಾರೀ ಹೊಡೆತ – ಕಲ್ಲಂಗಡಿ ಬೆಲೆ ₹2ಕ್ಕೆ ಕುಸಿತ
ಬೀದರ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧದ ಪರಿಣಾಮ, ಗಡಿ ಜಿಲ್ಲೆ ಬೀದರ್‌ನಲ್ಲಿ ರೈತರ ಬದುಕಿನ ಮೇಲೆ ಭಾರೀ ಹೊಡೆತ ಬಿದ್ದಿದೆ. ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆ, ಕಲ್ಲಂಗಡಿ ಬೆಲೆ ತೀವ್ರ ಕುಸಿತ ಕಂಡಿದ್ದು, ಒಂದು ಕೆಜಿ ಕೇವಲ ₹2ಕ್ಕೆ ಇಳಿದಿದೆ. ಬೆಲೆ ಇಷ್ಟು ಕಡಿಮೆಯಾದರೂ ಖರೀದಿಗೆ ವ್ಯಾಪಾರಿಗಳು ಮುಂದೆ ಬರದಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಒಂದು ಕೆಜಿ ಕಲ್ಲಂಗಡಿ ₹12ರಿಂದ ₹15ರವರೆಗೆ ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ಯುದ್ಧದ ಪರಿಣಾಮ ಮಾರುಕಟ್ಟೆ ಸಂಪೂರ್ಣ ಕುಸಿತ ಕಂಡಿದೆ. ರೈತರು ಬೆಳೆದ ಬೆಳೆ ಮಾರಾಟವಾಗದೇ ಹೊಲದಲ್ಲೇ ಕೊಳೆಯುತ್ತಿರುವ ದುಸ್ಥಿತಿ ಎದುರಾಗಿದೆ. ಬೀದರ್ ತಾಲೂಕಿನ ರೈತ ವೈಜನಾಥ್ ಸಿದ್ದಾ ಅವರು ಸುಮಾರು ₹1 ಲಕ್ಷ ವೆಚ್ಚದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಆದರೆ ರಫ್ತು ಇಲ್ಲದ ಕಾರಣ, ಬೆಳೆ ಮಾರಾಟವಾಗದೇ ಹೊಲದಲ್ಲೇ ಹಾಳಾಗುತ್ತಿದೆ.
“ಹಣ ಖರ್ಚು ಮಾಡಿ ಬೆಳೆದಿದ್ದೇವೆ. ಕಟಾವು ಮಾಡಿದ ನಂತರ ಮಾರಾಟಕ್ಕೆ ಸಿದ್ಧವಾಗುತ್ತಿದ್ದಾಗಲೇ ಯುದ್ಧ ಆರಂಭವಾಯಿತು. ಈಗ ಬೆಲೆ ಇಲ್ಲ, ಖರೀದಿದಾರರಿಲ್ಲ,” ಎಂದು ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ, ರೈತರು ಸರ್ಕಾರದ ಮುಂದೆ ಪರಿಹಾರಕ್ಕಾಗಿ ಮನವಿ ಮಾಡುತ್ತಿದ್ದು, ಯುದ್ಧದಿಂದ ಉಂಟಾದ ನಷ್ಟಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ, ಮಾರುಕಟ್ಟೆ ಕುಸಿತ ಮತ್ತು ಬೆಳೆ ಹಾಳಾಗುತ್ತಿರುವ ಪರಿಸ್ಥಿತಿ ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳಿದ್ದು, ಸರ್ಕಾರದ ತುರ್ತು ಮಧ್ಯಪ್ರವೇಶದ ಅಗತ್ಯತೆ ಹೆಚ್ಚಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಡ್ಯದಲ್ಲಿ 150 ಕೋಟಿ ನೀರಾವರಿ ಯೋಜನೆ: ರೈತರಿಗೆ ಗುಡ್ ನ್ಯೂಸ್
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ರೈತರ ಬಹುಕಾಲದ ನೀರಾವರಿ... ಓದನ್ನು ಮುಂದುವರಿಸಿ
ಗ್ಯಾಸ್ ಕೊರತೆ ಹೊಡೆತ: ಚಿಕ್ಕಬಳ್ಳಾಪುರದಲ್ಲಿ ಹೋಟೆಲ್‌ಗಳು ಬಂದ್, ರೈತರಿಗೆ ಸಂಕಷ್ಟ-ತರಕಾರಿ ಬೆಲೆ ಭಾರೀ ಕುಸಿತ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಗ್ಯಾಸ್ ಸಿಲಿ... ಓದನ್ನು ಮುಂದುವರಿಸಿ
ರೈತರಿಗೆ ಗುಡ್ ನ್ಯೂಸ್: ಸಾಲ ಮನ್ನಾಕ್ಕೆ ಹೊಸ ರೂಲ್ಸ್ – ಫ್ಯಾಮಿಲಿ ಸೆಲ್ಫಿ ಕಡ್ಡಾಯ!
ಹೈದರಾಬಾದ್: ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್... ಓದನ್ನು ಮುಂದುವರಿಸಿ
ಟೊಮೆಟೊ ಉತ್ಪಾದನೆಯಲ್ಲಿ ನಂ.1 ದೇಶ ಯಾವುದು ಗೊತ್ತಾ..? ಉತ್ತರ ಕೇಳಿದ್ರೆ ಶಾಕ್!
ನಮ್ಮ ಮನೆಯ ಅಡುಗೆ ಪ್ರಪಂಚದಲ್ಲಿ ಟೊಮ್ಯಾಟೋಗಳ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ... ಓದನ್ನು ಮುಂದುವರಿಸಿ
100ಕ್ಕೂ ಹೆಚ್ಚು ಹಸುಗಳು, ಲಕ್ಷಾಂತರ ಆದಾಯ – ದೀಸಾ ಮಹಿಳೆಯ ಗೆಲುವು
ಗಾಂಧೀನಗರ: ಗುಜರಾತ್‌ನ ಬನಾಸ್ ಡೈರಿ ಏಷ್ಯಾದಲ್ಲೇ ಅಗ್ರ ಸ್ಥಾನ ಪಡ... ಓದನ್ನು ಮುಂದುವರಿಸಿ
₹1.5 ಕೋಟಿ ತೆರಿಗೆ ಬಾಕಿ: ಹೈದರಾಬಾದ್ ನಲ್ಲಿರುವ ಜಯಲಲಿತಾ ಮನೆ ಸೀಲ್
ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೈದರ... ಓದನ್ನು ಮುಂದುವರಿಸಿ
ಬೆಂಬಲ ಬೆಲೆ ಯೋಜನೆ ಕುರಿತು ಕೇಂದ್ರದ ಜೊತೆ ರಾಜ್ಯದ ಚರ್ಚೆ
ಬೆಂಗಳೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಗಲ್ಫ್ ಯುದ್ಧದ ಪರಿಣಾಮ, ರೈತರಿಗೆ ರಸಗೊಬ್ಬರ ಕೊರತೆ ಭೀತಿ
ಹುಬ್ಬಳ್ಳಿ: ಇರಾನ್, ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಯುದ್ಧದ ಪ... ಓದನ್ನು ಮುಂದುವರಿಸಿ
ತುಂಗಭದ್ರಾ ಜಲಾಶಯದ ಗೇಟ್‌ಗಳ ಬದಲಾವಣೆಗೆ ಸರ್ಕಾರ ತೀವ್ರ ಕ್ರಮ -ರೈತರಿಗೆ ನಿರಾಳತೆ
ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಸಂಖ್ಯೆ 19 ಕಿತ್ತು... ಓದನ್ನು ಮುಂದುವರಿಸಿ
ಅಕ್ರಮ ಪಂಪ್‌ಸೆಟ್ ಸಂಪರ್ಕ ಸಕ್ರಮಕ್ಕೆ 3 ತಿಂಗಳ ಗಡುವು: ಸಚಿವ ಕೆ.ಜೆ. ಜಾರ್ಜ್ ಎಚ್ಚರಿಕೆ
ಬೆಂಗಳೂರು: ಅನಧಿಕೃತವಾಗಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪ... ಓದನ್ನು ಮುಂದುವರಿಸಿ