ಹಬ್ಬದ ಸಂಭ್ರಮವೇ ದುರಂತ: ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ಸಾವು
ರಾಯಚೂರು: ಯುಗಾದಿ ಹಬ್ಬದ ಸಂಭ್ರಮದ ಮಧ್ಯೆ ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ದುರ್ಘಟನೆಗಳು ದುಃಖದ ನೆರಳು ಮೂಡಿಸಿವೆ. ಬಣ್ಣದಾಟದ ಬಳಿಕ ಸ್ನಾನಕ್ಕೆ ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.
ಮೊದಲ ಘಟನೆ ಅರಕೇರಾ ತಾಲೂಕಿನ ನಾಗೋಲಿ ಗ್ರಾಮದ ಬಳಿ ನಡೆದಿದೆ. ನಾರಾಯಣಪೂರ ಬಲದಂಡೆ ಕಾಲುವೆಯಲ್ಲಿ ಸ್ನಾನಕ್ಕೆ ಇಳಿದ 20 ವರ್ಷದ ಗಂಗಾಧರ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಬುದ್ದಿನ್ನಿ ಗ್ರಾಮದ ನಿವಾಸಿಯಾಗಿದ್ದ ಗಂಗಾಧರ, ಹೋಳಿ ಬಳಿಕ ಸ್ನೇಹಿತರೊಂದಿಗೆ ಕಾಲುವೆಗೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಗ್ರಾಮಸ್ಥರು ಶೋಧ ಕಾರ್ಯ ಕೈಗೊಂಡಿದ್ದು, ಬಳಿಕ ನಾಗೋಲಿ ಗ್ರಾಮದ ಬಳಿ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಘಟನೆ ಮಾನ್ವಿ ತಾಲೂಕಿನ ಗೋವಿನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಯುಗಾದಿ ಹಿನ್ನೆಲೆ ಹೋಳಿ ಆಟವಾಡಿದ್ದ ಯುವಕರು ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದಾಗ 30 ವರ್ಷದ ಗೋವಿಂದರಾಜು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಗ್ರಾಮಸ್ಥರ ಸಹಾಯದಿಂದ ಪೊಲೀಸರು ಶವವನ್ನು ಹೊರತೆಗೆದಿದ್ದಾರೆ. ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಬ್ಬದ ಸಂಭ್ರಮದ ನಡುವೆಯೇ ಸಂಭವಿಸಿದ ಈ ಘಟನೆಗಳು ಜನರಲ್ಲಿ ಆತಂಕ ಮೂಡಿಸಿದ್ದು, ನೀರಿನ ತಾಣಗಳಲ್ಲಿ ಎಚ್ಚರಿಕೆಯಿಂದ ಇರಬೇಕೆಂಬ ಅಗತ್ಯವನ್ನು ಮತ್ತೊಮ್ಮೆ ಸ್ಮರಿಸಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸೈಬರ್ ಕಳ್ಳತನ: “ಡಿಜಿಟಲ್ ಅರೆಸ್ಟ್” ವಂಚಕರು ವೃದ್ಧ ಉದ್ಯಮಿಯಿಂದ 15 ಕೋಟಿ ರೂ. ಎಗರಿಸಿದ ಖದೀಮರು!
ಬೆಳಗಾವಿ: ಜಿಲ್ಲೆಯ ವೃದ್ಧ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು... ಓದನ್ನು ಮುಂದುವರಿಸಿ
ನೆಲಮಂಗಲ
ಯುಗಾದಿ ಸಂಭ್ರಮದಲ್ಲಿ ದುರಂತ : ತಾಯಿಯ ಕಣ್ಣೆದುರೇ 4 ವರ್ಷದ ಮಗು ದಾರುಣ ಸಾವು
ನೆಲಮಂಗಲ : ಯುಗಾದಿ ಹಬ್ಬದ ಸಂಭ್ರಮದ ನಡುವೆ, ಬೆಂಗಳೂರು ಉತ್ತರ ತಾ... ಓದನ್ನು ಮುಂದುವರಿಸಿ
ರಾತ್ರಿ ಶಿಫ್ಟ್ ಮುಗಿಸಿದ ಕಾರ್ಮಿಕನ ಮೇಲೆ ಚಾಕು ದಾಳಿ: ಕೊಲೆ ಯತ್ನ
ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ರಾತ್... ಓದನ್ನು ಮುಂದುವರಿಸಿ
ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್ ಪಲ್ಟಿ: 40ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ 8 ಮಂದಿಗೆ ಗಾಯ
ಚಿಕ್ಕಮಗಳೂರು: ಕುಕ್ಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಲ... ಓದನ್ನು ಮುಂದುವರಿಸಿ
ಪಾವಗಡ
ಮೇಲಾಧಿಕಾರಿ ಕಿರುಕುಳ ಆರೋಪ : ನಿವೃತ್ತಿಗೆ ಮುನ್ನ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ
ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹ... ಓದನ್ನು ಮುಂದುವರಿಸಿ
ಹುಳಿಯಾರು ಪೊಲೀಸ್ ಠಾಣೆ: ಅನುಮಾನಾಸ್ಪದ ಸಾವು ಪ್ರಕರಣ – ತನಿಖೆ ಸಿಐಡಿಗೆ ಸಾಗಿಸಲು ರಾಜ್ಯ ಸರ್ಕಾರ ಆದೇಶ
ತುಮಕೂರು: ಹುಳಿಯಾರು ಪೊಲೀಸ್ ಠಾಣೆಯಲ್ಲಿ ಜೂಜಾಟ ಸಂಬಂಧ ವಿಚಾರಣೆಗ... ಓದನ್ನು ಮುಂದುವರಿಸಿ
ಭೂಮಿ ವಿವಾದಕ್ಕೆ ಸ್ವಂತ ತಂಗಿಯನ್ನೇ ಕೊಚ್ಚಿ ಕೊಂದ ಅಣ್ಣ
ಧಾರವಾಡ: ಅಮ್ಮಿನಬಾವಿ ಗ್ರಾಮದ ಭೂಮಿ ವಿವಾದಕ್ಕೆ ಸಂಬಂಧಿಸಿ ತಂಗಿಯ... ಓದನ್ನು ಮುಂದುವರಿಸಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್ ಮುಖಂಡರ ವಿರುದ್ಧ ಅನ್ಯಾಯ ಆರೋಪ
ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಚಾರ್ಜ್‌ಶೀಟ್... ಓದನ್ನು ಮುಂದುವರಿಸಿ
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆ ಅಂತಿಮ ಹಂತ, ವರದಿ ಮುಂದಿನ ವಾರ ಸಲ್ಲಿಕೆ!
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ಅತಿವೇಗ ಬೈಕ್–ಕಾರು ಡಿಕ್ಕಿ; ಸ್ಥಳದಲ್ಲೇ ಸವಾರ ವೆಂಕಟೇಗೌಡ ಸಾವು
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ জেলার ದೇವನಹಳ್ಳಿ ತಾಲ್ಲೂಕಿನ... ಓದನ್ನು ಮುಂದುವರಿಸಿ