ಮೇಲಾಧಿಕಾರಿ ಕಿರುಕುಳ ಆರೋಪ : ನಿವೃತ್ತಿಗೆ ಮುನ್ನ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ (59) ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

ಮಲ್ಲಿಕಾರ್ಜುನ ಅವರು ಪಾವಗಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದು, ಸಾವಿಗೆ ಮುನ್ನ ದಾಖಲಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವೀಡಿಯೋದಲ್ಲಿ ತಮ್ಮ ಸಾವಿಗೆ ಇಲಾಖೆಯ ಜಂಟಿ ನಿರ್ದೇಶಕರಾದ ಕೃಷ್ಣಪ್ಪ ಕಾರಣವೆಂದು ಆರೋಪಿಸಿರುವುದು ಗಮನಸೆಳೆಯುತ್ತಿದೆ.

 

ವೀಡಿಯೋದಲ್ಲಿ ಅವರು ಮಾತನಾಡುತ್ತಾ, “ನನ್ನ ಕುಟುಂಬದವರು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಮೇಲಾಧಿಕಾರಿಯಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದು, ಅದರಿಂದ ಮನೋವೈಕಲ್ಯಕ್ಕೆ ಒಳಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ತಿಳಿಸಿದ್ದಾರೆ.

 

ಮೂಲತಃ ಪಾವಗಡ ತಾಲೂಕಿನವರಾಗಿದ್ದ ಮಲ್ಲಿಕಾರ್ಜುನ ಅವರು ಕಳೆದ ಮೂರು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ನಿವೃತ್ತಿಯಾಗಬೇಕಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿರುವುದು ವಿಷಾದನೀಯವಾಗಿದೆ.

 

ಘಟನೆ ನಡೆದ ದಿನ ಸಂಜೆ ಕಚೇರಿಯ ಸಿಬ್ಬಂದಿ ತೆರಳಿದ ಬಳಿಕ ಅವರು ಈ ಕೃತ್ಯಕ್ಕೆ ಮುಂದಾಗಿರುವುದು ತಿಳಿದುಬಂದಿದೆ. ಸಾವಿಗೆ ಮುನ್ನ ಡೆತ್ ನೋಟ್ ಬರೆದಿರುವುದಾಗಿ ತಿಳಿದುಬಂದಿದ್ದು, ಅದರಲ್ಲಿ ಮೇಲಾಧಿಕಾರಿ ಹಾಗೂ ಹಣಕಾಸು ಸಂಬಂಧಿತ ವಿಚಾರಗಳ ಉಲ್ಲೇಖವಿರುವ ಸಾಧ್ಯತೆ ಇದೆ.

 

ಸುದ್ದಿ ತಿಳಿದ ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಡೆತ್ ನೋಟ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

15 hours ago

   
Image 1
Image 1
ಬೆಳಗಾವಿ

ಸೈಬರ್ ಕಳ್ಳತನ: “ಡಿಜಿಟಲ್ ಅರೆಸ್ಟ್” ವಂಚಕರು ವೃದ್ಧ ಉದ್ಯಮಿಯಿಂದ 15 ಕೋಟಿ ರೂ. ಎಗರಿಸಿದ ಖದೀಮರು!

ಬೆಳಗಾವಿ: ಜಿಲ್ಲೆಯ ವೃದ್ಧ ಉದ್ಯಮಿಯೊಬ್ಬರನ್ನು ಗುರಿಯಾಗಿಸಿಕೊಂಡು... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ಗ್ರಾಮಾಂತರ

ನೆಲಮಂಗಲ

ಯುಗಾದಿ ಸಂಭ್ರಮದಲ್ಲಿ ದುರಂತ : ತಾಯಿಯ ಕಣ್ಣೆದುರೇ 4 ವರ್ಷದ ಮಗು ದಾರುಣ ಸಾವು

ನೆಲಮಂಗಲ : ಯುಗಾದಿ ಹಬ್ಬದ ಸಂಭ್ರಮದ ನಡುವೆ, ಬೆಂಗಳೂರು ಉತ್ತರ ತಾ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ರಾತ್ರಿ ಶಿಫ್ಟ್ ಮುಗಿಸಿದ ಕಾರ್ಮಿಕನ ಮೇಲೆ ಚಾಕು ದಾಳಿ: ಕೊಲೆ ಯತ್ನ

ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ರಾತ್... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ರಾಯಚೂರು

ಹಬ್ಬದ ಸಂಭ್ರಮವೇ ದುರಂತ: ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ಸಾವು

ರಾಯಚೂರು: ಯುಗಾದಿ ಹಬ್ಬದ ಸಂಭ್ರಮದ ಮಧ್ಯೆ ಜಿಲ್ಲೆಯಲ್ಲಿ ಸಂಭವಿಸಿ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಚಿಕ್ಕಮಗಳೂರು

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್ ಪಲ್ಟಿ: 40ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ 8 ಮಂದಿಗೆ ಗಾಯ

ಚಿಕ್ಕಮಗಳೂರು: ಕುಕ್ಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಲ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ತುಮಕೂರು

ಹುಳಿಯಾರು ಪೊಲೀಸ್ ಠಾಣೆ: ಅನುಮಾನಾಸ್ಪದ ಸಾವು ಪ್ರಕರಣ – ತನಿಖೆ ಸಿಐಡಿಗೆ ಸಾಗಿಸಲು ರಾಜ್ಯ ಸರ್ಕಾರ ಆದೇಶ

ತುಮಕೂರು: ಹುಳಿಯಾರು ಪೊಲೀಸ್ ಠಾಣೆಯಲ್ಲಿ ಜೂಜಾಟ ಸಂಬಂಧ ವಿಚಾರಣೆಗ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಧಾರವಾಡ

ಭೂಮಿ ವಿವಾದಕ್ಕೆ ಸ್ವಂತ ತಂಗಿಯನ್ನೇ ಕೊಚ್ಚಿ ಕೊಂದ ಅಣ್ಣ

ಧಾರವಾಡ: ಅಮ್ಮಿನಬಾವಿ ಗ್ರಾಮದ ಭೂಮಿ ವಿವಾದಕ್ಕೆ ಸಂಬಂಧಿಸಿ ತಂಗಿಯ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಹಾಸನ

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್ ಮುಖಂಡರ ವಿರುದ್ಧ ಅನ್ಯಾಯ ಆರೋಪ

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಚಾರ್ಜ್‌ಶೀಟ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆ ಅಂತಿಮ ಹಂತ, ವರದಿ ಮುಂದಿನ ವಾರ ಸಲ್ಲಿಕೆ!

ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಅಂತಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ಅತಿವೇಗ ಬೈಕ್–ಕಾರು ಡಿಕ್ಕಿ; ಸ್ಥಳದಲ್ಲೇ ಸವಾರ ವೆಂಕಟೇಗೌಡ ಸಾವು

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ জেলার ದೇವನಹಳ್ಳಿ ತಾಲ್ಲೂಕಿನ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1