ಹಸುಗಳ ಶೆಡ್‌ಗೆ ಬೆಂಕಿ – 6 ಹಸುಗಳ ದಾರುಣ ಸಾವು, ವಾಹನಗಳಿಗೂ ಬೆಂಕಿ ಹಾನಿ
ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ ರಸ್ತೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಆರು ಹಸುಗಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಪಕ್ಕದಲ್ಲಿದ್ದ ಪ್ಲೇವುಡ್ ಅಂಗಡಿಯಿಂದ ಬೆಂಕಿ ಪ್ರಾರಂಭವಾಗಿ, ಕ್ಷಣಾರ್ಧದಲ್ಲಿ ಹಸುಗಳ ಶೆಡ್‌ಗೆ ವ್ಯಾಪಿಸಿದೆ. ಶೆಡ್‌ನಲ್ಲಿ ಇದ್ದ 19 ಹಸುಗಳಲ್ಲಿ ಆರು ಹಸುಗಳು ಬೆಂಕಿಗೆ ಆಹುತಿಯಾಗಿವೆ. ಆದರೆ, ಸ್ಥಳೀಯರು ತಕ್ಷಣ ಎಚ್ಚರಗೊಂಡು 14 ಹಸುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಹಸುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ.
ಘಟನೆಯಾಗುವ ವೇಳೆ ಶೆಡ್‌ನಲ್ಲಿದ್ದ ನಾಲ್ಕು ವಾಹನಗಳು ಹಾಗೂ ಟಾಟಾ ಏಸ್ ವಾಹನ ಕೂಡ ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಹೋಗಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ದೌಡಾಯಿಸಿ, ಭಾರೀ ಪ್ರಯತ್ನದ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸ್ಥಳೀಯರ ಪ್ರಕಾರ, ಈ ಶೆಡ್ ಕಳೆದ 20 ವರ್ಷಗಳಿಂದ ಹಸು ಸಾಕಾಣಿಕೆ ಕೇಂದ್ರವಾಗಿತ್ತು. ಈ ದುರ್ಘಟನೆ ಸ್ಥಳೀಯರಲ್ಲಿ ದುಃಖ ಮತ್ತು ಆಕ್ರೋಶ ಮೂಡಿಸಿದ್ದು, ಅಗ್ನಿ ಸುರಕ್ಷತಾ ಕ್ರಮಗಳ ಅವಶ್ಯಕತೆ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮುಡಾ ಹಗರಣಕ್ಕೆ ಹೊಸ ತಿರುವು – ಹೈಕೋರ್ಟ್‌ಗೆ ಅರ್ಜಿ, ಮರುತನಿಖೆ ಬೇಡಿಕೆ!
ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾ... ಓದನ್ನು ಮುಂದುವರಿಸಿ
ನರಸಿಂಹರಾಜಪುರ
ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆ – ಕಾರಣ ತಿಳಿಯದ ದುರ್ಘಟನೆ
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್... ಓದನ್ನು ಮುಂದುವರಿಸಿ
ಹೆಲ್ಮೆಟ್ ಧರಿಸಿದ ಕಳ್ಳನ ದಾಳಿ – ಮನೆಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಕಳವು!
ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ... ಓದನ್ನು ಮುಂದುವರಿಸಿ
ಕೂಡ್ಲಿಗಿ
ಬೀದಿ ನಾಯಿಯ ಅಟ್ಟಹಾಸ – 3 ವರ್ಷದ ಬಾಲಕಿ ಸೇರಿ ಐವರಿಗೆ ಗಾಯ, ಆತಂಕದಲ್ಲಿ ನಾಗರೀಕರು
ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಬೀದಿ ನಾಯಿ... ಓದನ್ನು ಮುಂದುವರಿಸಿ
ಉಪಚುನಾವಣೆ ಕಾವು ತಾರಕ್ಕೇರಿತು – ಇಂದು ಪ್ರಚಾರಕ್ಕೆ ತೆರೆ, ಅಂತಿಮ ಕಸರತ್ತು ಜೋರಾಗಿ!
ದಾವಣಗೆರೆ/ಬಾಗಲಕೋಟೆ: ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್... ಓದನ್ನು ಮುಂದುವರಿಸಿ
ಎಲ್‌ಪಿಜಿ ಅಭಾವದ ಹೊಡೆತ – ಸಂಕಷ್ಟದಲ್ಲಿ ಆಟೋ ಚಾಲಕರು, ಸರ್ಕಾರಕ್ಕೆ ಬಂದ್ ಎಚ್ಚರಿಕೆ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸ... ಓದನ್ನು ಮುಂದುವರಿಸಿ
ವೇಗದ ಕಾರಿನ ಡಿಕ್ಕಿ: 9 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಬೀದರ್: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕ... ಓದನ್ನು ಮುಂದುವರಿಸಿ
“ನನ್ನನ್ನು ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ” – ಸಿಎಂ ಸಿದ್ದರಾಮಯ್ಯ ಕಿಡಿ
ದಾವಣಗೆರೆ: ನಾವು ಮಾಡಿದ ಅಭಿವೃದ್ಧಿ ಮತ್ತು ಜನಪರ ಕೆಲಸಗಳ ಆಧಾರದಲ... ಓದನ್ನು ಮುಂದುವರಿಸಿ
“ಅರಳು ಮರಳು ಆರೋಪ ಬೇಡ” –“ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದೆ?” – ಯಡಿಯೂರಪ್ಪಗೆ ಸಿಎಂ ಸವಾಲು
ಬಾಗಲಕೋಟೆ: ಯಡಿಯೂರಪ್ಪ ಅವರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ... ಓದನ್ನು ಮುಂದುವರಿಸಿ
ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ಮೇಲೆ ಟ್ರ್ಯಾಕ್ಟರ್ ಹರಿದು ಸಾವು
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ