ಮುಡಾ ಹಗರಣಕ್ಕೆ ಹೊಸ ತಿರುವು – ಹೈಕೋರ್ಟ್‌ಗೆ ಅರ್ಜಿ, ಮರುತನಿಖೆ ಬೇಡಿಕೆ!
ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಸಲಾಗಿದ್ದು, ಬಿ-ರಿಪೋರ್ಟ್ ಅನ್ನು ಪ್ರಶ್ನಿಸಲಾಗಿದೆ. ಅರ್ಜಿಯಲ್ಲಿ, ಸಿಎಂ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಇರುವ ಆರೋಪಗಳಿಗೆ ಸಾಕ್ಷ್ಯಾಧಾರಗಳಿವೆ ಎಂದು ಉಲ್ಲೇಖಿಸಲಾಗಿದೆ.
ಮೂಲ ದೂರುದಾರ ಸ್ನೇಹಮಯಿ ಕೃಷ್ಣ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, ಸಿಎಂ ಕುಟುಂಬಕ್ಕೆ ಇದುವರೆಗೆ ತಾತ್ಕಾಲಿಕ ರಿಲೀಫ್ ಮಾತ್ರ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಗಂಭೀರ ತಿರುವು ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ತಮ್ಮ ಬಳಿ ಸಹ ಸಾಕ್ಷ್ಯಗಳಿದ್ದು, ಬಿ-ರಿಪೋರ್ಟ್ ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಕೇಂದ್ರದ ತನಿಖಾ ಸಂಸ್ಥೆ ಇಡಿ (ED) ಕೂಡ ಪ್ರತ್ಯೇಕ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಮುಡಾ ಹಗರಣದ ತನಿಖೆಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿರುವುದರಿಂದ ಮರು ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. ಇದಕ್ಕೂ ಮೊದಲು ನೀಡಲಾದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಈ ಅರ್ಜಿಯಲ್ಲಿ, ನಾಲ್ವರು ಪ್ರಮುಖ ಆರೋಪಿಗಳ ಪಾತ್ರದ ಬಗ್ಗೆ ಸಾಕ್ಷ್ಯಾಧಾರಗಳಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ, ಮುಡಾ ಹಗರಣ ಪ್ರಕರಣ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹೈಕೋರ್ಟ್‌ನಲ್ಲಿ ನಡೆಯಲಿರುವ ಮುಂದಿನ ವಿಚಾರಣೆ ರಾಜಕೀಯ ಹಾಗೂ ನ್ಯಾಯಾಂಗ ವಲಯದಲ್ಲಿ ಹೆಚ್ಚಿನ ಗಮನ ಸೆಳೆಯುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನರಸಿಂಹರಾಜಪುರ
ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆ – ಕಾರಣ ತಿಳಿಯದ ದುರ್ಘಟನೆ
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್... ಓದನ್ನು ಮುಂದುವರಿಸಿ
ಹಸುಗಳ ಶೆಡ್‌ಗೆ ಬೆಂಕಿ – 6 ಹಸುಗಳ ದಾರುಣ ಸಾವು, ವಾಹನಗಳಿಗೂ ಬೆಂಕಿ ಹಾನಿ
ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ... ಓದನ್ನು ಮುಂದುವರಿಸಿ
ಹೆಲ್ಮೆಟ್ ಧರಿಸಿದ ಕಳ್ಳನ ದಾಳಿ – ಮನೆಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಕಳವು!
ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ... ಓದನ್ನು ಮುಂದುವರಿಸಿ
ಕೂಡ್ಲಿಗಿ
ಬೀದಿ ನಾಯಿಯ ಅಟ್ಟಹಾಸ – 3 ವರ್ಷದ ಬಾಲಕಿ ಸೇರಿ ಐವರಿಗೆ ಗಾಯ, ಆತಂಕದಲ್ಲಿ ನಾಗರೀಕರು
ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಬೀದಿ ನಾಯಿ... ಓದನ್ನು ಮುಂದುವರಿಸಿ
ಉಪಚುನಾವಣೆ ಕಾವು ತಾರಕ್ಕೇರಿತು – ಇಂದು ಪ್ರಚಾರಕ್ಕೆ ತೆರೆ, ಅಂತಿಮ ಕಸರತ್ತು ಜೋರಾಗಿ!
ದಾವಣಗೆರೆ/ಬಾಗಲಕೋಟೆ: ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್... ಓದನ್ನು ಮುಂದುವರಿಸಿ
ಎಲ್‌ಪಿಜಿ ಅಭಾವದ ಹೊಡೆತ – ಸಂಕಷ್ಟದಲ್ಲಿ ಆಟೋ ಚಾಲಕರು, ಸರ್ಕಾರಕ್ಕೆ ಬಂದ್ ಎಚ್ಚರಿಕೆ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸ... ಓದನ್ನು ಮುಂದುವರಿಸಿ
ವೇಗದ ಕಾರಿನ ಡಿಕ್ಕಿ: 9 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಬೀದರ್: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕ... ಓದನ್ನು ಮುಂದುವರಿಸಿ
“ನನ್ನನ್ನು ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ” – ಸಿಎಂ ಸಿದ್ದರಾಮಯ್ಯ ಕಿಡಿ
ದಾವಣಗೆರೆ: ನಾವು ಮಾಡಿದ ಅಭಿವೃದ್ಧಿ ಮತ್ತು ಜನಪರ ಕೆಲಸಗಳ ಆಧಾರದಲ... ಓದನ್ನು ಮುಂದುವರಿಸಿ
“ಅರಳು ಮರಳು ಆರೋಪ ಬೇಡ” –“ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದೆ?” – ಯಡಿಯೂರಪ್ಪಗೆ ಸಿಎಂ ಸವಾಲು
ಬಾಗಲಕೋಟೆ: ಯಡಿಯೂರಪ್ಪ ಅವರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ... ಓದನ್ನು ಮುಂದುವರಿಸಿ
ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ಮೇಲೆ ಟ್ರ್ಯಾಕ್ಟರ್ ಹರಿದು ಸಾವು
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ