ಜೂನಿಯರ್ ಜೊತೆ ಸೀನಿಯರ್ ಯುವತಿ ಎಸ್ಕೇಪ್..! ಪೊಲೀಸರಿಗೆ ಸವಾಲಾದ ಇಬ್ಬರು ವಿದ್ಯಾರ್ಥಿನಿಯರ ಕಾಣೆಯಾದ ಪ್ರಕರಣ
ಬೆಂಗಳೂರು: ನಗರದ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಕಾಣೆಯಾಗಿರುವ ಘಟನೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸುಮಾರು ಒಂದು ತಿಂಗಳಿನಿಂದ ಹುಡುಕಾಟ ನಡೆಸಿದರೂ ಅವರ ಸುಳಿವು ಪತ್ತೆಯಾಗಿಲ್ಲ.
ಕಾಣೆಯಾದವರು 2ನೇ ಪಿಯು ವಿದ್ಯಾರ್ಥಿನಿ ತನಿಷ್ಕಾ ಹಾಗೂ 1ನೇ ಪಿಯು ವಿದ್ಯಾರ್ಥಿನಿ ತೇಜಸ್ವಿನಿ. ಜನವರಿ 31ರಂದು ಮನೆಬಿಟ್ಟು ಹೊರಟಿರುವ ಇವರು ಬಳಿಕ ಮನೆಗೆ ಮರಳಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಹಿತಿಯಂತೆ, ಇಬ್ಬರೂ ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣಕಾಸು ವಸ್ತುಗಳನ್ನು ತೆಗೆದುಕೊಂಡಿಲ್ಲ. ಆದರೆ ಕಾಲೇಜು ಬ್ಯಾಗ್ ಮತ್ತು ಆಧಾರ್ ಕಾರ್ಡ್ ಹಿಡಿದು ಹೊರಟಿದ್ದಾರೆ ಎನ್ನಲಾಗಿದೆ. ಆಧಾರ್ ಕಾರ್ಡ್ ಆಧಾರದಲ್ಲಿ ಉಚಿತ ಬಸ್ ಪ್ರಯಾಣ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿದ ವಿದ್ಯಾರ್ಥಿನಿಯರು, ತಾವು ಮಹದೇಶ್ವರ ಬೆಟ್ಟದಲ್ಲಿ ಇರುವುದಾಗಿ ತಿಳಿಸಿದ್ದಾರೆ. ಇನ್ನೊಂದು ವಾರದಲ್ಲಿ ಮತ್ತೆ ಕರೆ ಮಾಡುವುದಾಗಿ ಹೇಳಿದ್ದರೂ ಬಳಿಕ ಅವರ ಸಂಪರ್ಕ ಕಡಿತಗೊಂಡಿದೆ.
ಕಳೆದ ವರ್ಷ ಪರೀಕ್ಷೆಯ ಭಯದಿಂದ ಒಬ್ಬ ವಿದ್ಯಾರ್ಥಿನಿ ಕೈಗೆ ಗಾಯ ಮಾಡಿಕೊಂಡಿದ್ದ ಘಟನೆ ಕೂಡ ಬೆಳಕಿಗೆ ಬಂದಿದೆ. ಈ ವರ್ಷವೂ ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಇಬ್ಬರೂ ಮನೆಬಿಟ್ಟು ಹೋಗಿರುವುದರಿಂದ ‘ಪರೀಕ್ಷೆ ಭಯ’ವೇ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಇದಲ್ಲದೆ, ಪೊಲೀಸರು ಈಗಾಗಲೇ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸ್ಪಷ್ಟ ಸುಳಿವು ದೊರಕಿಲ್ಲ. ಈ ಪ್ರಕರಣ ಸಂಬಂಧ ಕುಟುಂಬಸ್ಥರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಒಂದು ವಾರದ ಗಡುವು ನೀಡಿದೆ. ತಮ್ಮ ಮಕ್ಕಳಿಗಾಗಿ ಕುಟುಂಬಸ್ಥರು ಕಣ್ಣೀರಿಡುತ್ತಿದ್ದು, ವಿದ್ಯಾರ್ಥಿನಿಯರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೇವನಹಳ್ಳಿ
ದೇವನಹಳ್ಳಿ 5 ನಿಮಿಷ ಶಾಕ್: 1 ಕೆಜಿ ಚಿನ್ನ 20 ಲಕ್ಷಕ್ಕೆ ನಂಬಿದ ಆಂಧ್ರ ವ್ಯಕ್ತಿ ದುರಂತ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲ್ಲೂಕಿನ ವೆಂಕ... ಓದನ್ನು ಮುಂದುವರಿಸಿ
3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತನ ಶವ ಅಡಿಕೆ ತೋಟದಲ್ಲಿ ಪತ್ತೆ!
ತುಮಕೂರು: ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟದಲ್ಲಿ ಮ... ಓದನ್ನು ಮುಂದುವರಿಸಿ
ಪತಿ ಸಾವು ‘ಹೃದಯಾಘಾತ’ ಎಂದ ಪತ್ನಿ: ಶವ ಹೊರತೆಗೆದಾಗ ಪತ್ನಿ-ಪ್ರಿಯಕರನ ಜೊತೆ ಪ್ರೀ-ಪ್ಲ್ಯಾನ್ ಕೊಲೆ ಬಯಲು
ತುಮಕೂರು: ಹೃದಯಾಘಾತದಿಂದ ಪತಿ ಸಾವಿಗೀಡಾದಂತೆ ಪತ್ನಿ ನಾಟಕ ರಚಿಸಿ... ಓದನ್ನು ಮುಂದುವರಿಸಿ
ಕಾರವಾರ
ಉತ್ತರ ಕನ್ನಡದಲ್ಲಿ ಕೊಲೆ ರಹಸ್ಯ ಬಯಲು: ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಕೊಳಗಿ ಅರ... ಓದನ್ನು ಮುಂದುವರಿಸಿ
ಸಿಸಿಟಿವಿ ದೃಶ್ಯದಿಂದ ನಿಜ ಹೊರಬಂತು.. ಹಿಟ್ & ರನ್ ಅಲ್ಲ, ಪ್ರೀ-ಪ್ಲ್ಯಾನ್ ಕೊಲೆ! ಪತಿ ಸೇರಿ 4 ಮಂದಿ ಬಂಧನ
ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ & ರನ್ ಪ್ರಕರಣ ಭ... ಓದನ್ನು ಮುಂದುವರಿಸಿ
ಬೆಂಗಳೂರು ಕಾಲೇಜುಗಳಲ್ಲಿ ಡ್ರಗ್ ಶಾಕ್: ‘ಸನ್ಮಿತ್ರ’ ಕಾರ್ಯಾಚರಣೆಯಲ್ಲಿ 31 ವಿದ್ಯಾರ್ಥಿಗಳ ವರದಿ ಪಾಸಿಟಿವ್
ಬೆಂಗಳೂರು: ಡ್ರಗ್ ರಹಿತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ಪ... ಓದನ್ನು ಮುಂದುವರಿಸಿ
ನಗರದಲ್ಲಿ ಡ್ರಗ್ ಮೇಲಿನ ಸಮರ: ಪೊಲೀಸ್ ದಾಳಿ – 6 ಕಾಲೇಜು, 2 ಹಾಸ್ಟೇಲ್ ತಪಾಸಣೆ
ಬೆಂಗಳೂರು: ನಗರದ ಡ್ರಗ್ ವ್ಯಸನ ವಿರುದ್ಧ ಪಶ್ಚಿಮ ವಿಭಾಗದ ಪೊಲೀಸ್... ಓದನ್ನು ಮುಂದುವರಿಸಿ
ಬಸವಕಲ್ಯಾಣದಲ್ಲಿ ಉದ್ರಿಕ್ತತೆ: ಠಾಣೆ ಎದುರು ಕಲ್ಲು ತೂರಾಟ, 20 ಆರೋಪಿಗಳ ಬಂಧನ
ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿ... ಓದನ್ನು ಮುಂದುವರಿಸಿ
ಹೋಳಿ ವೇಳೆ ಹಿಜಾಬ್ ಧರಿಸಿ ವ್ಯಂಗ್ಯ: ಕಲಬುರಗಿಯಲ್ಲಿ ಹಲವರ ವಿರುದ್ಧ ಎಫ್‌ಐಆರ್
ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದ... ಓದನ್ನು ಮುಂದುವರಿಸಿ
"ಮಿತಿ ಮೀರಿದ ಲಂಚಾವಾತಾರ: ಕುಂಬಳಗೋಡು ಪೊಲೀಸರು ಬೇಡಿಕೆ ಹಾಕಿದ 10 ಲಕ್ಷ, ಕೊಡದಿದ್ರೆ ಕೇಸ್ ಬುಕ್ ಮಾಡುವ ಬೆದರಿಕೆ!"
ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಗಂಭೀರ... ಓದನ್ನು ಮುಂದುವರಿಸಿ