:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಶಯಾಸ್ಪದ ಪಾರ್ಸೆಲ್ ಶಾಕ್ – ನಗ್ನ ಫೋಟೋ, ಹೂವಿನ ಹಾರ ಪತ್ತೆ!
ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೋಸ್ಟ್ ಆಫೀಸ್‌ಗೆ ಬಂದ ಸಂಶಯಾಸ್ಪದ ಪಾರ್ಸೆಲ್ ಒಂದು ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ. ಪಾರ್ಸೆಲ್ ತೆರೆಯುವಾಗ ಅದರೊಳಗೆ ಮಹಿಳೆ ಹಾಗೂ ಪುರುಷನ ನಗ್ನ ಫೋಟೋಗಳು, ಹೂವಿನ ಹಾರ, ಕೊಳೆತ ಟೊಮೆಟೊ, ಕಬ್ಬಿಣದ ತುಂಡು, ಟೂತ್ ಪೇಸ್ಟ್ ಸೇರಿದಂತೆ ಹಲವು ವಿಚಿತ್ರ ವಸ್ತುಗಳು ಪತ್ತೆಯಾಗಿವೆ.
ಈ ವಸ್ತುಗಳನ್ನು ನೋಡಿ ಕೆಲವರು ಇದು ವಾಮಾಚಾರ ಅಥವಾ ಅಂಧಶ್ರದ್ಧೆಗೆ ಸಂಬಂಧಿಸಿದಿರಬಹುದೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಪಾರ್ಸೆಲ್ ತೆರೆಯುವ ಸಂದರ್ಭದಲ್ಲಿ ಸಿಬ್ಬಂದಿ ಶಾಕ್‌ಗೆ ಒಳಗಾಗಿದ್ದು, ಈ ಘಟನೆ ಅವರ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಕೆಲ ಸಿಬ್ಬಂದಿ ಕರ್ತವ್ಯದಲ್ಲಿ ಆಸಕ್ತಿ ತೋರದೇ ನಿರಾಸಕ್ತಿ ತೋರಿದ ಘಟನೆ ಕೂಡ ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಕೆಐಎಎಲ್ ಸಿಬ್ಬಂದಿ ಸಂಬಂಧಿತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಪಾರ್ಸೆಲ್ ಕಳುಹಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದು, ಪಾರ್ಸೆಲ್‌ಗಳ ಸುರಕ್ಷತಾ ಪರಿಶೀಲನಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮುಡಾ ವಿವಾದ: ದಿನೇಶ್ ಕುಮಾರ್ ವಿರುದ್ಧ ED ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಿವ... ಓದನ್ನು ಮುಂದುವರಿಸಿ
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್‌ಗೆ 6 ವರ್ಷ: ಶಾಸಕರಿಗೆ ವಿಶೇಷ ಔತಣಕೂಟ
ಬೆಂಗಳೂರು: ಡಿಕೆ ಶಿವಕುಮಾರ್ ಅವರು Karnataka Pradesh... ಓದನ್ನು ಮುಂದುವರಿಸಿ
ಸಾರ್ವಜನಿಕ ದೂರುಗಳ ವಿಲೇವಾರಿಗೆ 21 ದಿನದಲ್ಲಿ ಪರಿಹಾರ: ರಾಜ್ಯ ಸರ್ಕಾರ ಹೊಸ ನಿಯಮ
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಅವುಗಳ ಅಧೀನ... ಓದನ್ನು ಮುಂದುವರಿಸಿ
ಟಿ20 ವಿಶ್ವಕಪ್ ಗೆದ್ದ ನಾಯಕನ ಪವಾಡ : ಉಡುಪಿ ಕಾಪು ಮಾರಿಗುಡಿಯ ಅಪ್ಪಟ ಭಕ್ತ ಸೂರ್ಯ: 9 ದಿನಗಳಲ್ಲಿ ನುಡಿ ಪವಾಡವಾಗಿ ನಿಜವಾಗಿದೆ!
ಉಡುಪಿ: 2026 ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿರುವ ಟ... ಓದನ್ನು ಮುಂದುವರಿಸಿ
ಬಗರ್ ಹುಕುಂ ಯೋಜನೆ ಉದ್ದೇಶದಲ್ಲಿ ಬದಲಾವಣೆ ಇಲ್ಲ – ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಅರ್ಹ ರೈತರಿಗೆ... ಓದನ್ನು ಮುಂದುವರಿಸಿ
ಕೃಷಿ ಹೊಂಡದಲ್ಲಿ ಆಕಸ್ಮಿಕ ಬಿದ್ದು ಯುವತಿ ದುರಂತ ಸಾವು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರ... ಓದನ್ನು ಮುಂದುವರಿಸಿ
ಮೆಕ್ಕೆಜೋಳ ರಾಶಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು – ರೈತರಿಗೆ 4 ಲಕ್ಷ ರೂ. ನಷ್ಟ
ಹಾವೇರಿ: ಹಾವೇರಿ ಜಿಲ್ಲೆಯ ಕಾಟೇನಹಳ್ಳಿ ಗ್ರಾಮದಲ್ಲಿ ಬೆಳೆ... ಓದನ್ನು ಮುಂದುವರಿಸಿ
ಇರಾನ್-ಇಸ್ರೇಲ್ ಯುದ್ಧ: ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ರಫ್ತು ಯುದ್ಧದ ಪರಿಣಾಮದಿಂದ ಸ್ಥಗಿತ
ಹಾವೇರಿ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮದ... ಓದನ್ನು ಮುಂದುವರಿಸಿ
ಹೈದರಾಬಾದ್ ಉತ್ತಮ, ಬೆಂಗಳೂರು ಟ್ರಾಫಿಕ್ ಜಾಮ್ ಹಾಸ್ಯ – CM ರೇವಂತ್ ರೆಡ್ಡಿ
ಬೆಂಗಳೂರು: ಐಟಿ ಸಿಟಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಈಗ ರಾಜ... ಓದನ್ನು ಮುಂದುವರಿಸಿ
ಕರ್ನಾಟಕ ಪರ್ವತಾರೋಹಣ ತಂಡ ಮುಂಟ್ ಎವೆರೆಸ್ಟ್ ಏರಲು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ
ಬೆಂಗಳೂರು: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ Mount Everest ಏರುವ... ಓದನ್ನು ಮುಂದುವರಿಸಿ