ಟಿ20 ವಿಶ್ವಕಪ್ ಗೆದ್ದ ನಾಯಕನ ಪವಾಡ : ಉಡುಪಿ ಕಾಪು ಮಾರಿಗುಡಿಯ ಅಪ್ಪಟ ಭಕ್ತ ಸೂರ್ಯ: 9 ದಿನಗಳಲ್ಲಿ ನುಡಿ ಪವಾಡವಾಗಿ ನಿಜವಾಗಿದೆ!

ಉಡುಪಿ: 2026 ರ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ಗೆ, ಕರಾವಳಿಯ ಉಡುಪಿಯ ಜೊತೆ ಅಮೋಘ ಸಂಬಂಧವಿದೆ. ವಿಶ್ವ ಗೆದ್ದ ಈ ಕ್ಯಾಪ್ಟನ್ ಬೇರಾರಲ್ಲ, ಅವರು ನಮ್ಮ ಉಡುಪಿಯ ಅಳಿಯ.

 

ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕಿನವರು. ಈ ಕುಟುಂಬ ಕಾಪು ಹೊಸ ಮಾರಿಗುಡಿ ಅಮ್ಮನವರ ಪರಮ ಭಕ್ತರು. ಪತ್ನಿಯ ಊರಿನ ಮೇಲಿನ ಪ್ರೀತಿ ಮತ್ತು ದೇವಿಯ ಮೇಲಿನ ಭಕ್ತಿಯಿಂದ, ಸೂರ್ಯಕುಮಾರ್–ದೇವಿಶಾ ದಂಪತಿ ಈಗಾಗಲೇ ಎರಡು ಬಾರಿ ಕಾಪು ಮಾರಿಗುಡಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

 

2024 ರ ಜುಲೈ 9 ರಂದು ಈ ದಂಪತಿ ಪೂಜೆ ಸಲ್ಲಿಸಲು ದೇಗುಲಕ್ಕೆ ಭೇಟಿ ನೀಡಿದ್ದರು. ಅರ್ಚಕರು “ನೀವು ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಲಿ” ಎಂದು ಶುಭಕೋಡಿ ಹೇಳಿದರು. ಅದ್ಭುತವೆಂದರೆ, ಈ ನುಡಿ ಕೇವಲ 9 ದಿನಗಳಲ್ಲಿ ಸತ್ಯವಾಯಿತು. ಜುಲೈ 18 ರಂದು ಬಿಸಿಸಿಐ ಸೂರ್ಯಕುಮಾರ್ ಯಾದವ್ ಅವರನ್ನು ಭಾರತೀಯ ಟಿ20 ತಂಡದ ನಾಯಕರಾಗಿ ಅಧಿಕೃತವಾಗಿ ಘೋಷಿಸಿತು.

 

ಸೂರ್ಯಕುಮಾರ್–ದೇವಿಶಾ ದಂಪತಿ ದೇಗುಲಕ್ಕೆ ಕೊಡುಗೆ ನೀಡಿದ್ದರು. ಹೊಸ ಮಾರಿಗುಡಿಯನ್ನು ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿ ಮರುನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ, ಈ ದಂಪತಿ ದೇಗುಲಕ್ಕೆ ಸುಂದರವಾದ ಕಂಬವನ್ನು (Pillar) ದಾನ ಮಾಡಿದ್ದಾರೆ.

 

ವಿಶ್ವಕಪ್ ಗೆದ್ದು ಬರುವ ಹಿಂದೆ ಸೂರ್ಯಕುಮಾರ್ ಯಾದವ್ ದೇವಿಯ ಮುಂದೆ ‘ತುಲಾಭಾರ’ ಹರಕೆ ಸಂಕಲ್ಪ ಮಾಡಿದ್ದರು. ಭಾರತ ವಿಶ್ವಕಪ್ ಗೆದ್ದ ಬಳಿಕ, ಮುಂದಿನ ದಿನಗಳಲ್ಲಿ ಸೂರ್ಯಕುಮಾರ್–ದೇವಿಶಾ ದಂಪತಿ ಕ್ಷೇತ್ರಕ್ಕೆ ಆಗಮಿಸಿದಾಗ ಅವರಿಗೆ ‘ಬೆಲ್ಲ ಮತ್ತು ಸಕ್ಕರೆ ತುಲಾಭಾರ’ ನೆರವೇರಿಸುವುದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರ ಸಂಕಲ್ಪವಾಗಿದೆ.

 

ಈಗಿನ ಸಂದರ್ಭದಲ್ಲಿ, ಉಡುಪಿಯವರಿಗೂ, ಕರಾವಳಿಯ ಕ್ರಿಕೆಟ್ ಪ್ರೀತಿಗಳಿಗೆ ಇಂಥ ಹೆಮ್ಮೆ ನೀಡಿದ ಸೂರ್ಯಕುಮಾರ್ ಯಾದವ್ ಅವರ ಸಾಧನೆ ಪ್ರತಿ ಹೃದಯಕ್ಕೂ ಉಲ್ಲಾಸ ತುಂಬಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

10 hours ago

   
Image 1
Image 1
ಬೆಂಗಳೂರು ನಗರ

ಮುಡಾ ವಿವಾದ: ದಿನೇಶ್ ಕುಮಾರ್ ವಿರುದ್ಧ ED ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಿವ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್‌ಗೆ 6 ವರ್ಷ: ಶಾಸಕರಿಗೆ ವಿಶೇಷ ಔತಣಕೂಟ

ಬೆಂಗಳೂರು: ಡಿಕೆ ಶಿವಕುಮಾರ್‌  ಅವರು Karnataka Pradesh... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಶಯಾಸ್ಪದ ಪಾರ್ಸೆಲ್ ಶಾಕ್ – ನಗ್ನ ಫೋಟೋ, ಹೂವಿನ ಹಾರ ಪತ್ತೆ!

ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೋಸ್ಟ್ ಆ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಸಾರ್ವಜನಿಕ ದೂರುಗಳ ವಿಲೇವಾರಿಗೆ 21 ದಿನದಲ್ಲಿ ಪರಿಹಾರ: ರಾಜ್ಯ ಸರ್ಕಾರ ಹೊಸ ನಿಯಮ

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಅವುಗಳ ಅಧೀನ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಬಗರ್ ಹುಕುಂ ಯೋಜನೆ ಉದ್ದೇಶದಲ್ಲಿ ಬದಲಾವಣೆ ಇಲ್ಲ – ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಅರ್ಹ ರೈತರಿಗೆ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಚಿಕ್ಕಬಳ್ಳಾಪುರ

ಕೃಷಿ ಹೊಂಡದಲ್ಲಿ ಆಕಸ್ಮಿಕ ಬಿದ್ದು ಯುವತಿ ದುರಂತ ಸಾವು

ಚಿಕ್ಕಬಳ್ಳಾಪುರ:  ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಹಾವೇರಿ

ಮೆಕ್ಕೆಜೋಳ ರಾಶಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು – ರೈತರಿಗೆ 4 ಲಕ್ಷ ರೂ. ನಷ್ಟ

ಹಾವೇರಿ:  ಹಾವೇರಿ ಜಿಲ್ಲೆಯ ಕಾಟೇನಹಳ್ಳಿ ಗ್ರಾಮದಲ್ಲಿ ಬೆಳೆ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಹಾವೇರಿ

ಇರಾನ್-ಇಸ್ರೇಲ್ ಯುದ್ಧ: ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ರಫ್ತು ಯುದ್ಧದ ಪರಿಣಾಮದಿಂದ ಸ್ಥಗಿತ

ಹಾವೇರಿ:  ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮದ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ನಗರ

ಹೈದರಾಬಾದ್‌ ಉತ್ತಮ, ಬೆಂಗಳೂರು ಟ್ರಾಫಿಕ್ ಜಾಮ್ ಹಾಸ್ಯ – CM ರೇವಂತ್ ರೆಡ್ಡಿ

ಬೆಂಗಳೂರು: ಐಟಿ ಸಿಟಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಈಗ ರಾಜ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಕರ್ನಾಟಕ ಪರ್ವತಾರೋಹಣ ತಂಡ ಮುಂಟ್ ಎವೆರೆಸ್ಟ್ ಏರಲು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಾಶಯ

ಬೆಂಗಳೂರು: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ Mount Everest ಏರುವ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1