ಕೇರಳ-ಪುದುಚೇರಿ ಚುನಾವಣಾ ಪ್ರಚಾರದಲ್ಲಿ ಡಿಕೆಶಿ ಕಿಡಿ: ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ವಾಗ್ದಾಳಿ!

ಕೇರಳ ಹಾಗೂ ಪುದುಚೇರಿಯಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ವಾಗ್ವಾದ ತಾರಕ್ಕೇರಿದೆ. ಈ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಪುದುಚೇರಿಯ ಮಾಹೆ ಕ್ಷೇತ್ರ ಹಾಗೂ ಕೇರಳದ ಒರ್ಕಟ್ಟೇರಿ ಪ್ರದೇಶಗಳಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆಯಿಂದ ಜನರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ಸಮಸ್ಯೆಗಳಿಗೆ ಸಮರ್ಥ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

 

“ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ನಮ್ಮ ನಂಬಿಕೆ ಸಂವಿಧಾನ, ರಾಷ್ಟ್ರಧ್ವಜ ಮತ್ತು ಕಾಂಗ್ರೆಸ್ ಪಕ್ಷದ ಇತಿಹಾಸದ ಮೇಲೆ ಇದೆ” ಎಂದು ಅವರು ಹೇಳಿದರು. ಕರ್ನಾಟಕದ ಉದಾಹರಣೆ ನೀಡಿದ ಅವರು, “ಮೂರು ವರ್ಷಗಳ ಹಿಂದೆ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಇತ್ತು. ಆದರೆ ನಾವು ಒಗ್ಗಟ್ಟಾಗಿ ಹೋರಾಡಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು, ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು” ಎಂದು ತಿಳಿಸಿದರು. ಇದೇ ವೇಳೆ ಕೇರಳದ ಹಾಲಿ ಎಲ್‌ಡಿಎಫ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್, ಕಳೆದ ಹತ್ತು ವರ್ಷಗಳಲ್ಲಿ ಜನಜೀವನದಲ್ಲಿ ಬದಲಾವಣೆ ತರಲಿಲ್ಲ ಎಂದು ಟೀಕಿಸಿದರು. “ಕೊಚ್ಚಿನ್ ಮೆಟ್ರೋ, ಕನ್ನೂರು ಹೆದ್ದಾರಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಪಡಿಸಿದ್ದಾರೆ” ಎಂದು ಆರೋಪಿಸಿದರು.

 

ಪುದುಚೇರಿಯ ರಂಗಸ್ವಾಮಿ ಸರ್ಕಾರವನ್ನೂ ಟೀಕಿಸಿದ ಅವರು, ಜನರಿಗೆ ಸ್ಪಷ್ಟವಾದ ಅಭಿವೃದ್ಧಿ ಕಾಣುತ್ತಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರದ ಮೇಲೂ ಟೀಕೆ ನಡೆಸಿದ ಡಿ.ಕೆ. ಶಿವಕುಮಾರ್, ವಿದೇಶಗಳಲ್ಲಿ ಇರುವ ಭಾರತೀಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿಲ್ಲ ಎಂದು ಆರೋಪಿಸಿದರು. ಒಟ್ಟಿನಲ್ಲಿ, ಕಾಂಗ್ರೆಸ್ ಹಾಗೂ ಅದರ ಮೈತ್ರಿಕೂಟವನ್ನು ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದ ಡಿ.ಕೆ. ಶಿವಕುಮಾರ್, ಈ ಚುನಾವಣೆ ದೇಶದ ಭವಿಷ್ಯ ನಿರ್ಧರಿಸುವುದಾಗಿ ಹೇಳಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 hours ago

   
Image 1
Image 1

‘ಐಐಟಿ ವಾಲೆ ಬಾಬಾ’ ಮದುವೆ: ವೈರಲ್ ಸನ್ಯಾಸಿಯಿಂದ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಅಭಯ್ ಸಿಂಗ್

ಚಂಡೀಗಢ: ಕಳೆದ ವರ್ಷ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಭಾರೀ ವೈರಲ್... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಮಳೆಗೆ ತತ್ತರಿಸಿದ ಐಪಿಎಲ್ ಪಂದ್ಯ: ಕೆಕೆಆರ್–ಪಂಜಾಬ್ ಕಿಂಗ್ಸ್ ಮುಖಾಮುಖಿ ಸ್ಥಗಿತ

ಕೋಲ್ಕತ್ತಾ: ಐಪಿಎಲ್ 2026ರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂ... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಸಾಥನ್‌ಕುಲಂ ಕಸ್ಟಡಿ ಸಾವು ಪ್ರಕರಣ: 9 ಪೊಲೀಸರಿಗೆ ಮರಣದಂಡನೆ

ಚೆನ್ನೈ: ದೇಶವನ್ನೇ ಬೆಚ್ಚಿಬೀಳಿಸಿದ್ದ ಸಾಥನ್‌ಕುಲಂ ಕಸ್ಟಡಿ ಸಾವು... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

“ನಾನು ನನ್ನ ಇಚ್ಛೆಗೆ ಬದುಕುತ್ತೇನೆ” –“ಗಂಡನ ಬಿಟ್ಟು ಪ್ರಿಯಕರನ ಜೊತೆ ಬದುಕಲು ಒಪ್ಪಿಗೆ ಕೊಟ್ಟ ಕೋರ್ಟ್!

ದೆಹಲಿ: 19 ವರ್ಷದ ಯುವತಿ ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ಸ್... ಓದನ್ನು ಮುಂದುವರಿಸಿ


Edited by: ಬಾನು

2 hours ago

   
Image 1

ಕೇರಳದಲ್ಲಿ ಬಿಜೆಪಿ–ಎಲ್‌ಡಿಎಫ್ ಒಳಒಪ್ಪಂದ ಆರೋಪ: ಡಿಕೆಶಿ ವಾಗ್ದಾಳಿ!

ಕೇರಳ ರಾಜಕೀಯ ರಂಗದಲ್ಲಿ ಚುನಾವಣಾ ಕಾವು ತಾರಕ್ಕೇರಿದೆ. ಈ ನಡುವೆ ಉಪಮುಖ್ಯಮಂತ್ರಿ ಡಿ.... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಯುದ್ಧದ ಮಧ್ಯೆಯೂ ಎಲ್ಪಿಜಿ ಕೊರತೆ ಇಲ್ಲ: ಜನರಿಗೆ ಕೇಂದ್ರದ ಭರವಸೆ!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ನಡುವೆಯೇ ದೇಶದಲ್ಲಿ ಎಲ್ಪಿಜಿ ಕೊರತೆ ಉಂಟಾಗಬಹು... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಮೊಮ್ಮಗನಿಗೆ ಕಾರು ನಿಲ್ಲಿಸಲು ಸಹಾಯ ಮಾಡಲು ಹೋಗಿ ಸ್ಮಶಾನ ಸೇರಿದ ಅಜ್ಜಿ

ಉತ್ತರ ಪ್ರದೇಶದ ಫಾರೂಕಾಬಾದ್‌ನಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಕಾರು ರಿವರ್ಸ್ ವೇ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಟ್ರಂಪ್ ಹೆಸರು ಉಲ್ಲೇಖಿಸಿ ಮೋದಿ ಸರ್ಕಾರದ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ!

ಅಸ್ಸಾಂ ಚುನಾವಣಾ ರಂಗದಲ್ಲಿ ರಾಜಕೀಯ ವಾಗ್ವಾದ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷರ ಹೆಸರ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಬಿಜೆಪಿ ಕಚೇರಿ ಬಳಿ ಸ್ಫೋಟ ಪ್ರಕರಣ: ಐವರು ಅರೆಸ್ಟ್ – ಐಎಸ್‌ಐ ಸಂಪರ್ಕ ಶಂಕೆ!

ಚಂಡೀಗಢದಲ್ಲಿ ಬಿಜೆಪಿ ಪ್ರಧಾನ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಪ್ರೇಮ ವಿವಾಹದ ಬಳಿಕ ಯುವತಿಯ ಹತ್ಯೆ – ಪೋಸ್ಟ್‌ಮಾರ್ಟಂನಲ್ಲಿ ಬಯಲು, ಸಿಐ ಅಮಾನತು!

ಹೈದರಾಬಾದ್: ಆಂಧ್ರಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ನಡೆದ ಗಂಭೀರ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1