ಖಾಸಗಿ ಬಸ್‌ಗಳಲ್ಲಿ ಸುರಕ್ಷತಾ ಕ್ರಮ ಕಡ್ಡಾಯ: ಫೆಬ್ರವರಿ 28ರೊಳಗೆ ಎಲ್ಲಾ ನಿಯಮ ಪಾಲನೆ ಅಗತ್ಯ
ಬೆಂಗಳೂರು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸೂಚನೆಗಳ ಹಿನ್ನೆಲೆ ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರಿಗೆ ಖಡಕ್ ನಿರ್ದೇಶನ ನೀಡಿದ್ದು, ಎಲ್ಲಾ ಸ್ಲೀಪರ್ ಕೋಚ್ ಹಾಗೂ ಅಖಿಲ ಭಾರತ ಪ್ರವಾಸಿ ಬಸ್‌ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ಫೆಬ್ರವರಿ 28ರವರೆಗೆ ಗಡುವು ನಿಗದಿಪಡಿಸಲಾಗಿದೆ. ಚಿತ್ರದುರ್ಗದ ಖಾಸಗಿ ಬಸ್ ಅಗ್ನಿದುರಂತದ ಬಳಿಕ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಳೆದ ತಿಂಗಳ 21ರಂದು ಖಾಸಗಿ ಬಸ್ ಮಾಲೀಕರು, ಕೋಚ್ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು ಮತ್ತು ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಸ್ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿಸಲು ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಒಟ್ಟು 11 ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.
ಪ್ರಮುಖ ಸೂಚನೆಗಳು
ಸ್ಲೀಪರ್ ಬಸ್‌ಗಳಲ್ಲಿ ಚಾಲಕರ ಹಿಂಭಾಗದ ಡೋರ್ ತೆರೆಯುವ ವ್ಯವಸ್ಥೆ
ಸ್ಲೀಪರ್ ಬರ್ತ್‌ಗಳಲ್ಲಿ ಸ್ಲೈಡರ್ ವ್ಯವಸ್ಥೆ
ಫೈರ್ ಡಿಟೆಕ್ಷನ್ ವ್ಯವಸ್ಥೆ ಅಳವಡಿಕೆ (ಒಂದು ತಿಂಗಳೊಳಗೆ ಕಡ್ಡಾಯ)
10 ಕೆಜಿ ತೂಕದ ಅಗ್ನಿಶಾಮಕ ಸಾಧನ ಕಡ್ಡಾಯ
ಚಾಸಿಸ್ ಅನಧಿಕೃತ ವಿಸ್ತರಣೆ ನಿರ್ಬಂಧ
ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣಪತ್ರ ಕಡ್ಡಾಯ
ಪ್ರಯಾಣಿಕರ ಸುರಕ್ಷತಾ ಮಾನದಂಡ ಪಾಲಿಸಿದ ನಂತರ ಮಾತ್ರ ಫಿಟ್ನೆಸ್ ಸರ್ಟಿಫಿಕೆಟ್ (FC) ನೀಡುವುದು
ಪ್ರತಿ ಬಸ್ಸಿನಲ್ಲಿ ಚಾವಣಿ ಹ್ಯಾಚ್‌ಗಳೊಂದಿಗೆ ರೇಖಾಚಿತ್ರ ಪ್ರದರ್ಶನ
12 ಮೀಟರ್ ಉದ್ದದ ಬಸ್ಸಿನಲ್ಲಿ ಕನಿಷ್ಠ 4 ತುರ್ತು ನಿರ್ಗಮನ ದ್ವಾರಗಳು
12 ಮೀಟರ್‌ಗಿಂತ ಉದ್ದ ಹೆಚ್ಚು ಬಸ್ಸಿನಲ್ಲಿ ಕನಿಷ್ಠ 5 ತುರ್ತು ನಿರ್ಗಮನ ದ್ವಾರಗಳು
ಸಾರಿಗೆ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಹೆಚ್ಚಿನ ಸೂಚನೆಗಳನ್ನು ಈಗಾಗಲೇ ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಫೆಬ್ರವರಿ 28ರೊಳಗೆ ಎಲ್ಲಾ ಬಸ್‌ಗಳಲ್ಲಿ ನಿಯಮಗಳು ಸಂಪೂರ್ಣ ಜಾರಿಯಾಗುತ್ತವೆಯೇ ಎಂಬುದು ಕಾದು ನೋಡಬೇಕಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಹಿಳೆಯರ ಉಚಿತ ಬಸ್ ಪ್ರಯಾಣ: ಹಳೆಯ ಆಧಾರ್ ಬಿಟ್ಟು ಇನ್ಮುಂದೆ ಶಕ್ತಿ ಸ್ಮಾರ್ಟ್ ಕಾರ್ಡ್!
ಬೆಂಗಳೂರು : ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ... ಓದನ್ನು ಮುಂದುವರಿಸಿ
“ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಮಹಿಳೆಯರಿಗೆ ಉಚಿತ LPG ಸ್ಟೌವ್ & ಸಿಲಿಂಡರ್! ಹೀಗೆ ಅರ್ಜಿ ಸಲ್ಲಿಸಿ.”
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) – ಸಂಕ್ಷಿಪ್ತ ಮಾಹಿತಿ
... ಓದನ್ನು ಮುಂದುವರಿಸಿ
ಮೈಸೂರು–ಅರಸೀಕೆರೆ ರೈಲುಗಳಲ್ಲಿ ಕಾಲುವೆ ಕಾಮಗಾರಿಯ ಕಾರಣ ವಿಲಂಬ, ಕೆಲವು ರೈಲುಗಳು ರದ್ದು
ಮೈಸೂರು: ಫೆಬ್ರವರಿ 16ರ ಸೋಮವಾರ, ಹಬ್ಬನಘಟ್ಟ ಮತ್ತು ಅರಸೀಕೆರೆ ನ... ಓದನ್ನು ಮುಂದುವರಿಸಿ
ಸರ್ಜಾಪುರ–ಹೆಬ್ಬಾಳ ರೆಡ್ ಲೈನ್‌ಗೆ ಕೇಂದ್ರದ ಆಕ್ಷೇಪ: ಡಬಲ್ ಡೆಕ್ಕರ್ ಮಾದರಿಗೆ ವಿರೋಧ
ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ರಾಜ್ಯ–ಕ... ಓದನ್ನು ಮುಂದುವರಿಸಿ
ಹೆಬ್ಬಾಳ–ಸರ್ಜಾಪುರ ಮೆಟ್ರೋ ಕಾರಿಡಾರ್‌ಗೆ ತಡೆ: ಡಬಲ್ ಡೆಕ್ಕರ್ ಯೋಜನೆ ಮರುಪರಿಶೀಲನೆಗೆ ಕೇಂದ್ರ ಸೂಚನೆ
ಬೆಂಗಳೂರು: ಹೆಬ್ಬಾಳ–ಸರ್ಜಾಪುರ ಮೆಟ್ರೋ ಕಾರಿಡಾರ್ ಯೋಜನೆಗೆ ಕೇಂದ... ಓದನ್ನು ಮುಂದುವರಿಸಿ
ಬೆಂಗಳೂರಿಗರಿಗೆ ಸಿಕ್ತು ಸಿಹಿಸುದ್ದಿ! ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ತೊಂದರೆಗೆ ತೆರೆ: ಬೆಂಗಳೂರಿಗೆ 1750 ಹೊಸ ಎಲೆಕ್ಟ್ರಿಕ್ ಬಸ್‌ಗಳು!
ಬೆಂಗಳೂರು: ಶಕ್ತಿ ಯೋಜನೆ ಆರಂಭವಾದ ಬಳಿಕ ಬಿಎಂಟಿಸಿ ಬಸ್‌ಗಳಲ್ಲಿ... ಓದನ್ನು ಮುಂದುವರಿಸಿ
ಯಲಹಂಕ
ಫೇಕ್ ಆ್ಯಪ್ ಸ್ಕ್ಯಾಮ್: ಸ್ಕ್ಯಾನ್ ಮಾಡಿದ್ರೂ ಹಣ ಖಾತೆಗೆ ಬರಲ್ಲ! ವ್ಯಾಪಾರಸ್ಥರೇ ಎಚ್ಚರ
ಬೆಂಗಳೂರು : ಯಲಹಂಕ ನ್ಯೂಟೌನ್ ಪ್ರದೇಶದಲ್ಲಿ ಅಂಗಡಿ ಮಾಲೀಕರನ್ನು... ಓದನ್ನು ಮುಂದುವರಿಸಿ
ವ್ಯಾಲೆಂಟೈನ್ಸ್ ಡೇಗೆ ಮಹಿಳೆಯರಿಗೆ ಗುಡ್ ನ್ಯೂಸ್ ..! ಬೆಂಗಳೂರಿನಲ್ಲಿ ಮಹಿಳೆಯರಿಗೆ ವಿಶೇಷ ‘ಸಖಿ ಆಟೋ’ ಸೇವೆ ಪ್ರಾರಂಭ
ಬೆಂಗಳೂರು: ಪ್ರೇಮಿಗಳ ದಿನದಂದು ಬೆಂಗಳೂರಿನಲ್ಲಿ ಮಹಿಳೆಯರಿಗೆ ವಿಶ... ಓದನ್ನು ಮುಂದುವರಿಸಿ
ಕೇಂದ್ರ ಸರ್ಕಾರ ಪಡಿತರಕ್ಕೆ ನಗದು ವರ್ಗಾವಣೆ ವ್ಯವಸ್ಥೆ: ಫಲಾನುಭವಿಗಳಿಗೆ ನೇರ ಲಾಭ
ಇಲ್ಲಿಯವರೆಗೆ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಪಡಿತರ ಅಂಗಡಿಗಳ ಮೂಲಕ ವಿತರಿಸಲಾ... ಓದನ್ನು ಮುಂದುವರಿಸಿ
ಎಲಾನ್ ಮಸ್ಕ್ ಘೋಷಣೆ: ಮುಂದಿನ 10 ವರ್ಷಗಳಲ್ಲಿ ಚಂದ್ರನ ಮೇಲೆ ಸ್ವಾಯತ್ತ ನಗರ ನಿರ್ಮಾಣ
ಜಗತ್ತಿನಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭೂಮಿಯ ಮೇಲೆ ವಾಸಕ... ಓದನ್ನು ಮುಂದುವರಿಸಿ