ಕೊಪ್ಪಳದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ ಮನೆ ಶೋಧ
ಕೊಪ್ಪಳ : ಕೊಪ್ಪಳ ತಾಲೂಕು ಭಾಗ್ಯನಗರ ಪಟ್ಟಣದಲ್ಲಿನ ನವಚೇತನ ಶಾಲೆ ಮತ್ತು ನವಚೇತನ ವಿಜ್ಞಾನ ಕಾಲೇಜು, ಅಲ್ಲೇ ಇರುವ ಕಲ್ಲೇಶ ಮನೆ ಮತ್ತು ಅವರ ಅತ್ತೆ ಮನೆ ಹಾಗೂ ಕಲ್ಲೇಶ ತವರು ಗ್ರಾಮ ಯಲಬುರ್ಗಾ ತಾಲೂಕಿನ ಚಿಕ್ಕ ಮನ್ನಾಪೂರ ಗ್ರಾಮದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಕೊಪ್ಪಳ ಮೆಡಿಕಲ್ ಕಾಲೇಜು ಸೇರಿ ಒಟ್ಟು 9 ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಲೋಕಾಯುಕ್ತದ ರಾಯಚೂರು ಎಸ್ಪಿ ಮಾರ್ಗದರ್ಶನದಲ್ಲಿ ಲೋಕಾ ಡಿವೈಎಸ್ಪಿ ರಾಯಚೂರು ಎಸಿ ಮೊ ಲೋಕೇಶ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಸುತ್ತಲಿನ ವಿಜಯನಗರ, ಗದಗ, ಧಾರವಾಡ, ರಾಯಚೂರು, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆ ಸೇರಿ ಒಟ್ಟು 30ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಿರಂತರವಾಗಿ 12 ಗಂಟೆ ತನಿಖೆ ನಡೆದಿದೆ. ದಾಳಿ ವೇಳೆ ಅಪಾರ ಪ್ರಮಾಣದ ಹಣ, ಆಸ್ತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ವಾಲ್ಮೀಕಿ ನಿಗಮದ ಅಧಿಕಾರಿ ಆಗಿದ್ದ ಬಿ. ಕಲ್ಲೇಶ ಈ ಹಿಂದೆ ವಾಲ್ಮೀಕಿ ನಿಗಮದ ಹಗರಣದಲ್ಲಿ ಸುದ್ದಿ ಆಗಿದ್ದ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಇಡಿ ಅಧಿಕಾರಿಗಳ ವರದಿ ಆಧರಿಸಿ ಬಿ.ಕಲ್ಲೇಶ ಅಮಾನತು ಮಾಡಲಾಗಿತ್ತು. ನಂತರ ಬಿ.ಕಲ್ಲೇಶ, ಇಡಿ ಅಧಿಕಾರಿಗಳ ಮೇಲೆಯೇ ಆರೋಪ ಮಾಡಿದ್ದರು. ಇಡಿ ಅಧಿಕಾರಿಗಳು, ಸಿಎಂ ಹೆಸರು ಹೇಳುವಂತೆ ನನಗೆ ಟಾರ್ಚರ್ ನೀಡಿದ್ದರು ಎಂದು ಬಿ. ಕಲ್ಲೇಶ ದೂರು ನೀಡಿದ್ದ. ಬಿ.ಕಲ್ಲೇಶ ಕೊಪ್ಪಳ ರ ಕೊಪ್ಪಳ ಜಿಲ್ಲೆಯಲ್ಲಿ ಎಸ್ಟಿ, ಒಬಿಸಿ ಹಾಗೂ ಸಮಾಜ ಕಲ್ಯಾಣ ೧ ಇಲಾಖೆಯ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ವೇಳೆಯೂ ಕಲ್ಲೇಶ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.
ಹಣ, ಆಭರಣ ಪತ್ತೆ
ಒಟ್ಟು 9 ಕಡೆ ದಾಳಿ ಮಾಡಿರುವ ಅಧಿಕಾರಿಗಳು ಸುಮಾರು 28.24 ಲಕ್ಷ ಮೌಲ್ಯದ ಏಳು ನಿವೇಶ, ಕನಿಷ್ಠ 10 ಕೋಟಿ ರೂ. ಬೆಲೆಯ ಮನೆ, ಶಾಲೆ ಮತ್ತು ಹಾಸ್ಟೆಲ್ ಕಟ್ಟಡ, ಸುಮಾರು 3.23 ಕೋಟಿ ಮೌಲ್ಯದ 31.25 ಎಕರೆ ಕೃಷಿ ಭೂಮಿ, ಮನೆಯಲ್ಲಿ 37 ಲಕ್ಷ ರೂ. ನಗದು, ಒಟ್ಟು 1104 ಗ್ರಾಂ ಚಿನ್ನಾಭರಣ, ಮೂರೂವರೆ ಕೆಜಿ ಬೆಳ್ಳಿ ಪತ್ತೆಯಾಗಿದೆ. ಬೆಳ್ಳಿ ಹಾಗೂ ಬಂಗಾರದ ಮೌಲ್ಯವೇ ಅಂದಾಜು 1.13 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜೊತೆಗೆ 38.60 ಲಕ್ಷ ರೂ. ಬೆಲೆಯ ಕಾರು, ಒಂದು ಬೈಕ್, ಬ್ಯಾಂಕ್ ಖಾತೆಯಲ್ಲಿ 61 ಲಕ್ಷ ರೂ. ನಗದು ಎಲ್ಲವೂ ಸೇರಿ ಸುಮಾರು 10.46 ಕೋಟಿ ಆಸ್ತಿಯ ಮಾಹಿತಿ ಲಭ್ಯವಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ತಪಾಸಣಾ ಕಾರ್ಯ ಮುಗಿಸಿದ ಬಳಿಕ ಇಲ್ಲಿನ ಲೋಕಾಯಕ್ತ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಮ್ಮ ಸಂಬಂಧಿಕರ ಹೆಸರಲ್ಲಿ ಜಿಲ್ಲೆಯ ವಿವಿಧ ಕಡೆ ಜಮೀನು ಹೊಂದಿದ್ದಾರೆ. ಇನ್ನು ನವ ಚೇತನ ಕಾಲೇಜು ಕೂಡ ಪತ್ನಿ ಮತ್ತು ಸಂಬಂಧಿಕರ ಹೆಸರಲ್ಲಿ ಇವೆ. ನವ ಚೇತನ ಕಾಲೇಜು ಒಂದೇ ಸುಮಾರು 10 ಕೋಟಿ ಬೆಲೆ ಬಾಳುವ ಕಟ್ಟಡ ಮತ್ತು ಜಾಗ ಹೊಂದಿದೆ ಎಂದು ತಿಳಿದು ಬಂದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ - ಬೀದರ್ ಸರ್ಕಾರಿ ಶಾಲೆಯಲ್ಲಿ ಆಘಾತಕಾರಿ ಘಟನೆ
ಬೀದರ್ : ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ನೀಡಿದ ಮಧ್ಯಾಹ್ನದ ಬಿಸಿ... ಓದನ್ನು ಮುಂದುವರಿಸಿ
ಕಂಟೇನರ್ ನಲ್ಲಿ ಗೋವುಗಳ ಅಕ್ರಮ ಸಾಗಾಟ - ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಕ್ಕಿಬಿದ್ದ ಕಳ್ಳರು
ಕೋಲಾರ : ಕಂಟೇನರ್‌ನಲ್ಲಿ (Container) ಅಕ್ರಮವಾಗಿ ಸಾಗಿಸುತ್ತಿದ... ಓದನ್ನು ಮುಂದುವರಿಸಿ
ದೊಡ್ಡಬಳ್ಳಾಪುರ ತಾಲೂಕು
ಟೀ ಅಂಗಡಿಗೆ ನುಗ್ಗಿದ ಗೂಡ್ಸ್ ವಾಹನ - ವೃದ್ಧನಿಗೆ ಗಂಭೀರ ಗಾಯ
ದೊಡ್ಡಬಳ್ಳಾಪುರ : ರಸ್ತೆ ಬದಿಯ ಅಂಗಡಿ ಬಳಿ ಕುಳಿತಿದ್ದ ವೃದ್ದನ... ಓದನ್ನು ಮುಂದುವರಿಸಿ
ರನ್ ವೇಗೆ ನುಗ್ಗಿದ ಬೀದಿ ನಾಯಿ - ಸುಸ್ತಾದ ಸಿಬ್ಬಂದಿ.!
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ... ಓದನ್ನು ಮುಂದುವರಿಸಿ
ಸರ್ಕಾರಿ ಶಾಲೆಗೆ 1 ಎಕರೆ ಭೂಮಿ ದಾನ ಮಾಡಿದ ಸಚಿವ ತಂಗಡಗಿ ತಾಯಿ ಹುಲಿಗೆಮ್ಮ
ಕೊಪ್ಪಳ : ಸಚಿವ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ ತನ್ನ ಸಮಾಜಮುಖ... ಓದನ್ನು ಮುಂದುವರಿಸಿ
ಆಸ್ತಿ ಮಾಲೀಕರೇ ಎಚ್ಚರ..! ನಕಲಿ ದಾಖಲೆ ಸೃಷ್ಟಿಸಿ 158 ಎಕರೆ ಭೂಮಿ, 9 ನಿವೇಶನ ಮಾರಾಟ - ಖತರ್ನಾಕ್ ಭೂಗಳ್ಳರ ಬಂಧನ
ವಿಜಯಪುರ : ಇತ್ತೀಚೆಗೆ ನಕಲಿ ದಾಖಲೆಗಳ ಮೂಲಕ ಮೂಲ ವಾರಸುದಾರರ ಬದಲ... ಓದನ್ನು ಮುಂದುವರಿಸಿ
ಗುಡಿಬಂಡಾ
ಆದಿನಾರಾಯಣರೆಡ್ಡಿಗೆ ಭರ್ಜರಿ ಜಯ; ಕಾಂಗ್ರೆಸ್ ಮುಖಂಡರಿಂದ ಪಟಾಕಿ, ಸಿಹಿ ಹಂಚಿಕೆ
ಗುಡಿಬಂಡೆ: ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ... ಓದನ್ನು ಮುಂದುವರಿಸಿ
ಗುಡಿಬಂಡಾ
ಕೆ.ಜಿ.ಎಫ್–ಕದಿರಿ ಬೆನ್ನಲ್ಲೇ ಗುಡಿಬಂಡೆಗೂ ಚಿನ್ನದ ಹುಡುಕಾಟ...ಬಂಗಾರಕ್ಕಾಗಿ ಹೆಲಿ ಸರ್ವೆ: ಗುಡಿಬಂಡೆ ಸುತ್ತಮುತ್ತ ಜಮೀನು ಧರ ಏರಿಕೆ ನಿರೀಕ್ಷೆ
ಗುಡಿಬಂಡೆ: ಕೆ.ಜಿ.ಎಫ್ ಮತ್ತು ಅಂಧ್ರಪ್ರದೇಶದ ಕದಿರಿ ಯ ಸುತ್ತ ಮು... ಓದನ್ನು ಮುಂದುವರಿಸಿ
ವಿರಾಜಪೇಟೆ
ಮಣ್ಣು ಗುಡ್ಡೆ ಕುಸಿದು ಟಿಪ್ಪರ್ ಚಾಲಕ ಸ್ಥಳದಲ್ಲೇ ಸಾವು..!!!
ಕೊಡಗು : ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಕದನೂರಿನಲ್ಲಿ ಮಣ್ಣು ಗು... ಓದನ್ನು ಮುಂದುವರಿಸಿ
74.80 ಕೋಟಿ ಮೌಲ್ಯದ ಸರ್ಕಾರಿ ಜಮೀನು ಅಕ್ರಮ ಒತ್ತುವರಿ ತೆರವು
ಬೆಂಗಳೂರು : ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 74.... ಓದನ್ನು ಮುಂದುವರಿಸಿ