ಮಧ್ಯಪ್ರಾಚ್ಯ ಉದ್ವಿಗ್ನತೆ: ದುಬೈನಲ್ಲಿ ಸಿಲುಕಿದ ನಟಿ ಸೋನಲ್ ಚೌಹಾಣ್ – ಪ್ರಧಾನಿ ಮೋದಿ ಅವರಿಗೆ ಮನವಿ

ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸುತ್ತಿದ್ದು, ಇರಾನ್ ಸಹ ಪ್ರತಿದಾಳಿ ನಡೆಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಯುಎಇ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವಿಮಾನ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

 

ದುಬೈ, ಅಬುದಾಭಿ ಸೇರಿದಂತೆ ಅನೇಕ ನಗರಗಳಲ್ಲಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಈ ನಡುವೆ ಬಾಲಿವುಡ್ ನಟಿ ಸೋನಲ್ ಚೌಹಾಣ್ ಕೂಡ ದುಬೈನಲ್ಲಿ ಸಿಲುಕಿಕೊಂಡಿದ್ದು, ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.

 

“ನಾನು ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಸಿಲುಕಿಕೊಂಡಿದ್ದೇನೆ. ವಿಮಾನಗಳು ರದ್ದಾಗಿವೆ. ಭಾರತಕ್ಕೆ ಮರಳಲು ಸ್ಪಷ್ಟ ಮಾರ್ಗವಿಲ್ಲ. ಸುರಕ್ಷಿತ ವಾಪಸ್ಸಿಗಾಗಿ ಸರ್ಕಾರದ ಮಾರ್ಗದರ್ಶನ ಮತ್ತು ಬೆಂಬಲ ಬೇಕಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ತಮ್ಮ ಮನವಿಯನ್ನು ಪ್ರಧಾನಿ ಕಚೇರಿ ಮತ್ತು ವಿದೇಶಾಂಗ ಸಚಿವಾಲಯಕ್ಕೂ ಟ್ಯಾಗ್ ಮಾಡಿದ್ದಾರೆ.

 

ಸೋನಲ್ ಚೌಹಾಣ್ 2008ರಲ್ಲಿ ಜನ್ನತ್ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ‘ಜರಾ ಸಾ’ ಹಾಡಿನ ಮೂಲಕ ಜನಪ್ರಿಯತೆ ಪಡೆದ ಅವರು, ಕನ್ನಡದಲ್ಲಿ ಶಿವಲಿಂಗ ಚಿತ್ರದ ಮೂಲಕ ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿ ಲೆಜೆಂಡ್, ಡಿಕ್ಟೇಟರ್ ಚಿತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಆದಿಪುರುಷ್ ಚಿತ್ರದಲ್ಲೂ ಪಾತ್ರ ನಿರ್ವಹಿಸಿದ್ದಾರೆ.

 

ಯುದ್ಧ ಭೀತಿ ಹಿನ್ನೆಲೆ ದುಬೈ ಸೇರಿದಂತೆ ಹಲವು ಅರಬ್ ರಾಷ್ಟ್ರಗಳ ವೈಮಾನಿಕ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆಕಾಶದಲ್ಲಿ ಕ್ಷಿಪಣಿಗಳು ಸಂಚರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರವಾಸಿಗರಲ್ಲಿ ಆತಂಕ ಹೆಚ್ಚಿಸಿದೆ. ಸೋನಲ್ ಅವರಂತೆ ಸಾವಿರಾರು ಭಾರತೀಯರು ಸುರಕ್ಷಿತ ವಾಪಸ್ಸಿಗಾಗಿ ಕಾಯುತ್ತಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 days ago

   
Image 1
Image 1

ರಾಷ್ಟ್ರಪತಿಯಿಂದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ-ವರ್ಗಾವಣೆ ಅನುಮೋದನೆ

ದೆಹಲಿ: ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಭಾರತಕ್ಕೆ ಅಮೆರಿಕದಿಂದ 30 ದಿನಗಳ ರಷ್ಯಾ ತೈಲ ತಾತ್ಕಾಲಿಕ ಅನುಮತಿ

ನವದೆಹಲಿ: ಇರಾನ್ ಯುದ್ಧದ ಹಿನ್ನೆಲೆಯಲ್ಲಿ, ಅಮೆರಿಕ ಸರ್ಕಾರವು ಭಾ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಅಸ್ಸಾಂ: Su-30 MKI ಯುದ್ಧವಿಮಾನ ಪತನ – 2 ಭಾರತೀಯ ಪೈಲಟ್‌ಗಳು ಹುತಾತ್ಮ

ದಿಸ್ಪುರ: ಅಸ್ಸಾಂ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಕಾರ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಭಾರತದ ಇಂಧನ ಭದ್ರತೆಗೆ ಅಮೆರಿಕದ ಮಹತ್ವದ ನಿರ್ಧಾರ – 30 ದಿನಗಳ ರಷ್ಯಾ ತೈಲ ವಿನಾಯಿತಿ

ದೆಹಲಿ: ಇರಾನ್-ಮಧ್ಯಪ್ರಾಚ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಅಮೆರ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಶಬರಿಮಲೆ: 10–50 ವರ್ಷದ ಮಹಿಳೆಯರಿಗೆ ಪ್ರವೇಶ ನಿಷೇಧ ಮುಂದುವರಿಕೆ

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಗರ್ಭಧಾರಣೆಯ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಹೋಳಿ ಹಬ್ಬದ ಸಂಭ್ರಮ ಮಧ್ಯೆ ಗೋಮಾತೆಗೆ ಬಲವಂತ ಮದ್ಯಪಾನ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಹರಿಯಾಣ: ಹೋಳಿ ಹಬ್ಬದ ಆಚರಣೆ ವೇಳೆ ಹರಿಯಾಣದಲ್ಲಿ ನಡೆದ ಅಮಾನುಷ ಕ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ತಯಾರಿ

ನವದೆಹಲಿ: ಇತ್ತೀಚಿನ ಇರಾನ್–ಇಸ್ರೇಲ್ ಯುದ್ಧ ಸನ್ನಿವೇಶದ ಹಿನ್ನೆಲ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಮಧ್ಯಪ್ರಾಚ್ಯ ಉದ್ವಿಗ್ನತೆ: ಕೇಂದ್ರ ಗೃಹಸಚಿವಾಲಯ ರಾಜ್ಯಗಳಿಗೆ ಅಶಾಂತಿ ಎಚ್ಚರಿಕೆ ಸುತ್ತೋಲೆ

ದೆಹಲಿ: ಇರಾನ್–ಅಮೆರಿಕ–ಇಸ್ರೇಲ್ ನಡುವಿನ ದಾಳಿ–ಪ್ರತಿದಾಳಿಗಳ ಹಿನ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಮಧ್ಯಪ್ರಾಚ್ಯ ವಾಯುಪ್ರದೇಶ ತಡೆ: ಏರ್ ಇಂಡಿಯಾ ಯುರೋಪ್ ಹಾರಾಟದಲ್ಲಿ ಪರ್ಯಾಯ ಮಾರ್ಗ ಬಳಕೆ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶಗಳ ನಿರ್ಬಂಧದ ಹಿನ್ನೆಲ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಮಧ್ಯಪ್ರಾಚ್ಯ ಉದ್ವಿಗ್ನತೆ: ಪ್ರಧಾನಿ ಮೋದಿ–ನೆತ್ಯಾನಹು ದೂರವಾಣಿ ಚರ್ಚೆ, ಯುದ್ಧ ನಿಲ್ಲಿಸಲು ಮನವಿ

ನೈರ್ದಿಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1