ಮಧ್ಯಪ್ರಾಚ್ಯ ಉದ್ವಿಗ್ನತೆ: ಪ್ರಧಾನಿ ಮೋದಿ–ನೆತ್ಯಾನಹು ದೂರವಾಣಿ ಚರ್ಚೆ, ಯುದ್ಧ ನಿಲ್ಲಿಸಲು ಮನವಿ

ನೈರ್ದಿಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಜಮಿನ್ ನೆತ್ಯಾನಹು ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಭಾರತ ಯುದ್ಧವನ್ನು ತಕ್ಷಣ ನಿಲ್ಲಿಸುವ ಅಗತ್ಯವಿದೆ ಎಂದು ಪುನರುಚ್ಚರಿಸಿದೆ.

 

ಪ್ರಧಾನಮಂತ್ರಿ ತಮ್ಮ X ಖಾತೆ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳಗಳನ್ನು ನೆತ್ಯಾನಹುಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ. ನಾಗರಿಕರ ಸುರಕ್ಷತೆ ಮೊದಲ ಆದ್ಯತೆಯಾಗಬೇಕು ಎಂದು ಒತ್ತಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಸಂವಾದವೇ ಏಕೈಕ ಮಾರ್ಗ ಎಂದು ಹೇಳಿದ್ದಾರೆ.

 

ಇದಕ್ಕೂ ಮುನ್ನ ಇರಾನ್ ಇಸ್ರೇಲ್ ಹಾಗೂ ಅಮೆರಿಕ ದಾಳಿಗೆ ಪ್ರತಿಯಾಗಿ ಕ್ಷಿಪಣಿ ದಾಳಿಗಳನ್ನು ಮುಂದುವರಿಸಿದೆ. ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ನಡೆದ ದಾಳಿಯಿಂದ ಉದ್ವಿಗ್ನತೆ ಹೆಚ್ಚಿದ್ದು, ಜೆರುಸಲೇಂನಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

 

ಮತ್ತೊಂದೆಡೆ, ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೂ ಇರಾನ್ ದಾಳಿ ನಡೆಸಿರುವುದನ್ನು ಯುಎಇ ತೀವ್ರವಾಗಿ ಖಂಡಿಸಿದೆ. ಭದ್ರತಾ ಕಾರಣಗಳಿಂದ ಟೆಹ್ರಾನ್ದಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಯುಎಇ ವಿದೇಶಾಂಗ ಸಚಿವಾಲಯ ಘೋಷಿಸಿದೆ. ಅಲ್ಲಿನ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ.

 

ಇಲ್ಲದೆ, ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ದುಬೈ ಹಾಗೂ ಅಬುಧಾಬಿ ಷೇರು ಮಾರುಕಟ್ಟೆಗಳನ್ನು ಎರಡು ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ.

 

ಕಳೆದ ವಾರ ಮಾತ್ರ ಪ್ರಧಾನಿ ಮೋದಿ ಎರಡು ದಿನಗಳ ಕಾಲ ಇಸ್ರೇಲ್ ಭೇಟಿನೀಡಿ, ಭಾರತ–ಇಸ್ರೇಲ್ ನಡುವೆ ಹಲವು ಮಹತ್ವದ ಒಪ್ಪಂದಗಳು ಸಹಿ ಆಗಿದ್ದವು. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

4 days ago

   
Image 1
Image 1

ರಾಷ್ಟ್ರಪತಿಯಿಂದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕಾತಿ-ವರ್ಗಾವಣೆ ಅನುಮೋದನೆ

ದೆಹಲಿ: ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಭಾರತಕ್ಕೆ ಅಮೆರಿಕದಿಂದ 30 ದಿನಗಳ ರಷ್ಯಾ ತೈಲ ತಾತ್ಕಾಲಿಕ ಅನುಮತಿ

ನವದೆಹಲಿ: ಇರಾನ್ ಯುದ್ಧದ ಹಿನ್ನೆಲೆಯಲ್ಲಿ, ಅಮೆರಿಕ ಸರ್ಕಾರವು ಭಾ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಅಸ್ಸಾಂ: Su-30 MKI ಯುದ್ಧವಿಮಾನ ಪತನ – 2 ಭಾರತೀಯ ಪೈಲಟ್‌ಗಳು ಹುತಾತ್ಮ

ದಿಸ್ಪುರ: ಅಸ್ಸಾಂ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಕಾರ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಭಾರತದ ಇಂಧನ ಭದ್ರತೆಗೆ ಅಮೆರಿಕದ ಮಹತ್ವದ ನಿರ್ಧಾರ – 30 ದಿನಗಳ ರಷ್ಯಾ ತೈಲ ವಿನಾಯಿತಿ

ದೆಹಲಿ: ಇರಾನ್-ಮಧ್ಯಪ್ರಾಚ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಅಮೆರ... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1

ಶಬರಿಮಲೆ: 10–50 ವರ್ಷದ ಮಹಿಳೆಯರಿಗೆ ಪ್ರವೇಶ ನಿಷೇಧ ಮುಂದುವರಿಕೆ

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಗರ್ಭಧಾರಣೆಯ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಹೋಳಿ ಹಬ್ಬದ ಸಂಭ್ರಮ ಮಧ್ಯೆ ಗೋಮಾತೆಗೆ ಬಲವಂತ ಮದ್ಯಪಾನ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಹರಿಯಾಣ: ಹೋಳಿ ಹಬ್ಬದ ಆಚರಣೆ ವೇಳೆ ಹರಿಯಾಣದಲ್ಲಿ ನಡೆದ ಅಮಾನುಷ ಕ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ತಯಾರಿ

ನವದೆಹಲಿ: ಇತ್ತೀಚಿನ ಇರಾನ್–ಇಸ್ರೇಲ್ ಯುದ್ಧ ಸನ್ನಿವೇಶದ ಹಿನ್ನೆಲ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಮಧ್ಯಪ್ರಾಚ್ಯ ಉದ್ವಿಗ್ನತೆ: ಕೇಂದ್ರ ಗೃಹಸಚಿವಾಲಯ ರಾಜ್ಯಗಳಿಗೆ ಅಶಾಂತಿ ಎಚ್ಚರಿಕೆ ಸುತ್ತೋಲೆ

ದೆಹಲಿ: ಇರಾನ್–ಅಮೆರಿಕ–ಇಸ್ರೇಲ್ ನಡುವಿನ ದಾಳಿ–ಪ್ರತಿದಾಳಿಗಳ ಹಿನ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಮಧ್ಯಪ್ರಾಚ್ಯ ವಾಯುಪ್ರದೇಶ ತಡೆ: ಏರ್ ಇಂಡಿಯಾ ಯುರೋಪ್ ಹಾರಾಟದಲ್ಲಿ ಪರ್ಯಾಯ ಮಾರ್ಗ ಬಳಕೆ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶಗಳ ನಿರ್ಬಂಧದ ಹಿನ್ನೆಲ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಮಧ್ಯಪ್ರಾಚ್ಯ ಉದ್ವಿಗ್ನತೆ: ದುಬೈನಲ್ಲಿ ಸಿಲುಕಿದ ನಟಿ ಸೋನಲ್ ಚೌಹಾಣ್ – ಪ್ರಧಾನಿ ಮೋದಿ ಅವರಿಗೆ ಮನವಿ

ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಇರಾನ್ ಮೇಲೆ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1