ಮಂಡ್ಯದಲ್ಲಿ ARAI ಯೋಜನೆಗೆ ರೈತರ ಆಕ್ರೋಶ: ಭೂಮಿ ಕೊಡೋದಿಲ್ಲ ಎಂದ ಜನ
ಮಂಡ್ಯದಲ್ಲಿ ಬೃಹತ್ ಕೈಗಾರಿಕಾ ಯೋಜನೆಗೆ ಆರಂಭದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವ ಹೆಚ್‌ಡಿಕೆ ಅವರ ಕನಸಿನ ಯೋಜನೆಯಾದ ARAI ಘಟಕ ಇದೀಗ ರೈತರ ಆಕ್ರೋಶಕ್ಕೆ ಗುರಿಯಾಗಿದೆ. ಮಂಡ್ಯ ತಾಲೂಕಿನ ಹೆಗ್ಗಡತಹಳ್ಳಿ–ಮುದ್ದನಘಟ್ಟ ಗ್ರಾಮಗಳ ವ್ಯಾಪ್ತಿಯಲ್ಲಿ ARAI ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಸುಮಾರು 105 ಎಕರೆ ಭೂಮಿಯನ್ನು ಗುರುತಿಸಿದೆ. ಇತ್ತೀಚೆಗೆ ARAI ತಂಡ ಸ್ಥಳ ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ಕೂಡ ನಡೆಸಿದೆ. ಆದರೆ ಈ ಬೆಳವಣಿಗೆಗಳ ನಡುವೆ ಸ್ಥಳೀಯ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೃಷಿ ಮಾಡುತ್ತಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕಾ ಉದ್ದೇಶಕ್ಕೆ ನೀಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.
“ನಮ್ಮ ಜಮೀನು ನಮ್ಮ ಜೀವನಾಧಾರ. ನಾವು ಕೃಷಿ ಮಾಡುತ್ತಿರುವ ಭೂಮಿಯನ್ನು ಬಿಡುವುದಿಲ್ಲ. ಬೇಕಿದ್ದರೆ ಬೇರೆ ಜಾಗ ಹುಡುಕಿಕೊಳ್ಳಲಿ. ಬಲವಂತ ಮಾಡಿದರೆ ಹೋರಾಟ ಮಾಡುತ್ತೇವೆ” ಎಂದು ರೈತರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ರೈತರು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ರೈತರ ವಿರೋಧದ ನಡುವೆ ARAI ಘಟಕ ಸ್ಥಾಪನೆ ಸಾಧ್ಯವಾಗುತ್ತದೆಯೇ? ಹೆಚ್‌ಡಿಕೆ ಹಾಗೂ ಸರ್ಕಾರದ ಮುಂದಿನ ಹೆಜ್ಜೆ ಏನು ಎನ್ನುವುದು ಕಾದು ನೋಡಬೇಕಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ತೀರ್ಥಹಳ್ಳಿ
ತೋಟದ ನಾಡಬಾಂಬ್ ಮನೆ ಅಂಗಳದಲ್ಲಿ ಸ್ಫೋಟ: ವೃದ್ಧೆ ಗಾಯ
ಶಿವಮೊಗ್ಗ: ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ವೃದ್ಧೆಯೊಬ್ಬರು ಗಂಭೀರ... ಓದನ್ನು ಮುಂದುವರಿಸಿ
ಬಿಜೆಪಿಗೆ ತಿರುಗೇಟು: ‘ತಪ್ಪೊಪ್ಪಿಕೊಂಡು ಕ್ಷಮೆ ಕೇಳಲಿ’ – ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್... ಓದನ್ನು ಮುಂದುವರಿಸಿ
SSLC ನೀತಿ ವಿವಾದ: ರಾಜ್ಯಪಾಲ-ಕರವೇ ನಡುವೆ ವಾಕ್ಸಮರ-‘ನಮ್ಮ ನೆಲದಲ್ಲಿ ಸೌಲಭ್ಯ ಕೊಟ್ಟಿದ್ದೇವೆ’: ನಾರಾಯಣಗೌಡ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ತೃತೀಯ ಭಾಷ... ಓದನ್ನು ಮುಂದುವರಿಸಿ
70 ಸಾವಿರ ಬಾಡಿಗೆ! ಬೆಂಗಳೂರಿನಲ್ಲಿ ವಾಸ ದುಬಾರಿ ಕನಸು
ಬೆಂಗಳೂರು: “70 ಸಾವಿರ ಬಾಡಿಗೆ!” – ಸಿಲಿಕಾನ್ ಸಿಟಿಯಲ್ಲಿ ವಾಸಿಸ... ಓದನ್ನು ಮುಂದುವರಿಸಿ
ಜನತೆಗೆ ಸ್ಪಷ್ಟ ಲೆಕ್ಕ ನೀಡಿ- ₹5,700 ಕೋಟಿ ಹಣ ಎಲ್ಲಿ? ರಾಜ್ಯ ಸರ್ಕಾರಕ್ಕೆ ಲೆಕ್ಕ ಕೇಳಿದ ಆರ್.ಅಶೋಕ್
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ... ಓದನ್ನು ಮುಂದುವರಿಸಿ
LPG ಕೊರತೆ: ಗ್ಯಾಸ್ ಇಲ್ಲದೇ ಆಟೋ ನಿಲ್ಲಿಸಿದ ಚಾಲಕರು, ಪರದಾಟ ತೀವ್ರ
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾಗಿರುವ ಇಸ್ರೇಲ್–ಅಮೆ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ನಂ.1, ದೇಶದಲ್ಲಿ 3ನೇ ಸ್ಥಾನ: ಕೋರಮಂಗಲ RTO ಭರ್ಜರಿ ದಾಖಲೆ
ಬೆಂಗಳೂರು: ಸಾಮಾನ್ಯವಾಗಿ ನೆಗೆಟಿವ್ ಸುದ್ದಿಗಳಿಂದಲೇ ಗುರುತಿಸಿಕೊ... ಓದನ್ನು ಮುಂದುವರಿಸಿ
ಕಾರವಾರ
ಕೆಎಸ್ಆರ್‌ಟಿಸಿ–ಖಾಸಗಿ ಭೀಕರ ಅಪಘಾತ : ಹಲವರಿಗೆ ಗಾಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಬಯಲಾಯ್ತು ಜಿಮ್ ಟ್ರೈನರ್ ಸಮೀರ್ ಕೃತ್ಯ- ಜ್ಯೂಸ್‌ನಲ್ಲಿ ಮದ್ದು ಬೆರೆಸಿ ಅತ್ಯಾಚಾರ?
ಹುಬ್ಬಳ್ಳಿ: ನಗರದಲ್ಲಿ ಸಂಚಲನ ಸೃಷ್ಟಿಸಿದ ಘಟನೆ ಒಂದರಲ್ಲಿ, ಹಳೆ... ಓದನ್ನು ಮುಂದುವರಿಸಿ
ಕಾರವಾರ
ಡಾಂಬರ್ ಪೂರೈಕೆ ಸ್ಥಗಿತ – ಕಾರವಾರ ಬಂದರು ಚಟುವಟಿಕೆಗಳಿಗೆ ಬ್ರೇಕ್ - ಮಧ್ಯಪ್ರಾಚ್ಯ ಸಂಘರ್ಷದ ನೇರ ಪರಿಣಾಮ
ಕಾರವಾರ: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಸಂಘರ್ಷದ ನೇರ ಪ... ಓದನ್ನು ಮುಂದುವರಿಸಿ