SSLC ನೀತಿ ವಿವಾದ: ರಾಜ್ಯಪಾಲ-ಕರವೇ ನಡುವೆ ವಾಕ್ಸಮರ-‘ನಮ್ಮ ನೆಲದಲ್ಲಿ ಸೌಲಭ್ಯ ಕೊಟ್ಟಿದ್ದೇವೆ’: ನಾರಾಯಣಗೌಡ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಮರುಪರಿಶೀಲಿಸಲು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದು ರಾಜಕೀಯ ಹಾಗೂ ಭಾಷಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡ, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಿಡಿಕಾರಿದ್ದಾರೆ. “ನೀವು ಹಿಂದಿ ಸಾಮ್ರಾಜ್ಯಶಾಹಿಯ ಪರವಾಗಿ ಕೆಲಸ ಮಾಡುತ್ತಿರುವುದು ನಮಗೆ ತಿಳಿದಿದೆ. ಕನ್ನಡಿಗರು ಔದಾರ್ಯವಂತರಾಗಿದ್ದು, ನಿಮ್ಮಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ. ಆದರೆ ತಿಂದ ಮನೆಗೆ ಕನ್ನ ಹಾಕುವುದು ಸರಿಯಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, “ರಾಜಭವನ ಕನ್ನಡಿಗರ ತೆರಿಗೆ ಹಣದಿಂದ ನಡೆಯುತ್ತಿದೆ. ಈ ರೀತಿಯ ಹಸ್ತಕ್ಷೇಪವು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಇದೇ ರೀತಿ ಮುಂದುವರಿದರೆ, ರಾಜ್ಯಪಾಲರು ತಮ್ಮ ರಾಜ್ಯಕ್ಕೆ ಹಿಂತಿರುಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ಮರೆತಿದ್ದಾರೆ ಎಂದು ಟೀಕಿಸಿದ ನಾರಾಯಣಗೌಡ, “ಜನರಿಂದ ನೇರವಾಗಿ ಆಯ್ಕೆಯಾಗದ ವ್ಯಕ್ತಿಯಾಗಿ, ಬಹುಮತದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ನೈತಿಕ ಅಥವಾ ಸಂವಿಧಾನಾತ್ಮಕ ಹಕ್ಕು ನಿಮಗೆ ಇಲ್ಲ” ಎಂದು ವಾಗ್ದಾಳಿ ನಡೆಸಿದರು. ಒಟ್ಟಿನಲ್ಲಿ, ಎಸ್‌ಎಸ್‌ಎಲ್‌ಸಿ ಗ್ರೇಡಿಂಗ್ ವಿಚಾರ ರಾಜ್ಯದಲ್ಲಿ ರಾಜಕೀಯ ಮತ್ತು ಭಾಷಾ ಚರ್ಚೆಗೆ ಹೊಸ ತಿರುವು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಒಳ್ಳೆಯ ಕಾರಣಕ್ಕೆ ಸುದ್ದಿಯೇ ಇಲ್ಲ” — ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಟೀಕೆ
ವಿಜಯಪುರ: ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದ... ಓದನ್ನು ಮುಂದುವರಿಸಿ
ಐಪಿಎಲ್ ನಿಲ್ಲಿಸಬೇಕು: ರಾಮನಗರದಲ್ಲಿ ವಾಟಾಳ್ ಆಕ್ರೋಶ
ರಾಮನಗರ: ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ರಾಮನ... ಓದನ್ನು ಮುಂದುವರಿಸಿ
“ಭಯದಿಂದ ಬದುಕುತ್ತಿದ್ದಾರೆ ಮಹಿಳೆಯರು” - ಸಿದ್ದರಾಮಯ್ಯ ಸರ್ಕಾರ ವಿರುದ್ಧ ಬೊಮ್ಮಾಯಿ ಆರೋಪ
ಬಾಗಲಕೋಟೆ: ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಥಕವಾಗಿದೆ... ಓದನ್ನು ಮುಂದುವರಿಸಿ
ಅಭಿವೃದ್ಧಿಗಿಂತ ಗ್ಯಾರಂಟಿ? ಸರ್ಕಾರ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ
ದಾವಣಗೆರೆ: ಎಲ್‌ಪಿಜಿ (LPG) ಅಭಾವದ ಹಿನ್ನೆಲೆ ಆಟೋ ಚಾಲಕರಿಗೆ ಸಣ... ಓದನ್ನು ಮುಂದುವರಿಸಿ
ಬಿಜೆಪಿ ಗೆಲ್ಲಬಾರದು: ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಮನವಿ
ಬಾಗಲಕೋಟೆ : ರೈತ-ಕಾರ್ಮಿಕ ವರ್ಗ ಹಾಗೂ ಶೋಷಿತ ಸಮುದಾಯಗಳನ್ನು ಒಟ್... ಓದನ್ನು ಮುಂದುವರಿಸಿ
“ಬಡವರ ಪರ ಕಾಂಗ್ರೆಸ್” — ಉಪ ಚುನಾವಣೆಗೆ ಸಿದ್ದರಾಮಯ್ಯ ಕರೆ
ಬಾಗಲಕೋಟೆ: ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒ... ಓದನ್ನು ಮುಂದುವರಿಸಿ
ಮಡಿಕೇರಿ
ತಡಿಯಂಡಮೋಳ್ ಟ್ರೆಕ್ಕಿಂಗ್ ದುರಂತ: 4ನೇ ದಿನವೂ ಮಹಿಳೆ ನಾಪತ್ತೆ
ಮಡಿಕೇರಿ: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಕ... ಓದನ್ನು ಮುಂದುವರಿಸಿ
ಆಧಾರಿತ RF ಟೆಕ್ : ಬೆಂಗಳೂರಿನ ಸ್ಟಾರ್ಟ್‌ಅಪ್‌ನಿಂದ ‘ಡಾರ್ಕ್ ಶಿಪ್ಪಿಂಗ್’ ಪತ್ತೆ ಮಾಡುವ ಹೊಸ ತಂತ್ರಜ್ಞಾನ
ಬೆಂಗಳೂರು: ಪಶ್ಚಿಮ ಏಷ್ಯಾ ಸಂಕಷ್ಟದ ನಡುವೆ ಕಳ್ಳ ಸಾಗಣೆ, ಅಕ್ರಮ... ಓದನ್ನು ಮುಂದುವರಿಸಿ
IndiGo ವಿಮಾನದಲ್ಲಿ ‘ಬಾಂಬ್’ ಸಂದೇಶ: 183 ಪ್ರಯಾಣಿಕರ ತುರ್ತು ಇಳಿಕೆ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು... ಓದನ್ನು ಮುಂದುವರಿಸಿ
ತೀರ್ಥಹಳ್ಳಿ
ತೋಟದ ನಾಡಬಾಂಬ್ ಮನೆ ಅಂಗಳದಲ್ಲಿ ಸ್ಫೋಟ: ವೃದ್ಧೆ ಗಾಯ
ಶಿವಮೊಗ್ಗ: ನಾಡಬಾಂಬ್ ಸ್ಫೋಟಗೊಂಡ ಪರಿಣಾಮ ವೃದ್ಧೆಯೊಬ್ಬರು ಗಂಭೀರ... ಓದನ್ನು ಮುಂದುವರಿಸಿ