ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ: ಲಕ್ಷಾಂತರ ಭಕ್ತರ ಹಾಜರಿ, ಭದ್ರತೆಯಲ್ಲಿ ಆಭರಣಗಳ ರವಾನೆ
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವವು ಇಂದು ಭಕ್ತಿ ಭಾವದೊಂದಿಗೆ ನಡೆಯಲಿದೆ. ಲಕ್ಷಾಂತರ ಭಕ್ತರು ಈ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಆಗಮಿಸುತ್ತಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಕೈಗೊಂಡಿವೆ.
ಬೆಳಿಗ್ಗೆ, ಜಿಲ್ಲಾ ಖಜಾನೆಯಿಂದ ವೈರಮುಡಿ ಮತ್ತು ಚಿನ್ನಾಭರಣಗಳನ್ನು ಭದ್ರತೆಯೊಂದಿಗೆ ಹೊರತೆಗೆದು ರವಾನೆ ಮಾಡುವ ಕಾರ್ಯಾರಂಭವಾಯಿತು. ಜಿಲ್ಲಾಡಳಿತದ ಪೂಜೆ ನಂತರ ಭಕ್ತರು ಸಹ ಪೂಜೆ ಸಲ್ಲಿಸಿ ದರ್ಶನ ಪಡೆದರು. ಸಾವಿರಾರು ಭಕ್ತರು ಖಜಾನೆ ಮುಂದೆ ಜಮಾಯಿದ್ದು, ಆಭರಣಗಳು ಪರಕಾಲ ಮಠದ ಸಾಂಪ್ರದಾಯಿಕ ವಾಹನದಲ್ಲಿ ಮೇಲುಕೋಟೆಗೆ ರವಾನಿಸಲಾಯಿತು.
ಮಾರ್ಗ ಮಧ್ಯೆ ಮಂಡ್ಯದ ಪೇಟೆ ಬೀದಿಯಲ್ಲಿರುವ ಲಕ್ಷ್ಮೀಜನಾರ್ಧನ ಮತ್ತು ಶ್ರೀನಿವಾಸ ಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು, ಗ್ರಾಮಗಳ ಭಕ್ತರು ದಾರಿಯಲ್ಲಿ ಸ್ವಾಗತಿಸಿ ಪೂಜೆ ಸಲ್ಲಿಸಿದರು. ಸಂಜೆ ವೇಳೆಗೆ ವೈರಮುಡಿ ಮತ್ತು ಚಿನ್ನಾಭರಣಗಳು ಮೇಲುಕೋಟೆ ತಲುಪಲಿವೆ. ರಾತ್ರಿ 8 ಗಂಟೆಗೆ ವೈರಮುಡಿ ಕಿರೀಟ ಧಾರಣೆ ನಡೆಯುತ್ತಿದ್ದು, ಮುಂಜಾನೆವರೆಗೂ ಉತ್ಸವ ಪ್ರಗತಿಸಲಿದೆ. ಭಕ್ತರ ಅನುಕೂಲಕ್ಕಾಗಿ 150 ಸಾರಿಗೆ ಬಸ್‌ಗಳ ವ್ಯವಸ್ಥೆ, ವಾಹನ ಪಾರ್ಕಿಂಗ್, ಅನ್ನದಾಸೋಹ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಭದ್ರತೆ ದೃಷ್ಟಿಯಿಂದ ASP 2, DYSP 6, PSI 29, ASI 47, HC/PC 158 ಹಾಗೂ 946 ಹೋಮ್ ಗಾರ್ಡ್‌ಗಳನ್ನು ಒಳಗೊಂಡು ಒಟ್ಟು 1210 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಜೊತೆಗೆ 40ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇವಸ್ಥಾನವನ್ನು ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರಗಳಿಂದ ಅಲಂಕೃತಗೊಳಿಸಲಾಗಿದೆ. ಒಟ್ಟಿನಲ್ಲಿ, ಈ ಮಹೋತ್ಸವ ಭಕ್ತಿ, ಪರಂಪರೆ ಮತ್ತು ಸಂಪ್ರದಾಯಗಳ ಸಾಂಪ್ರದಾಯಿಕ ಸಂಭ್ರಮವನ್ನು ಮೆರೆದಂತೆ, ಮೇಲುಕೋಟೆ ಭಕ್ತಸಾಗರದಿಂದ ಕಂಗೊಳಿಸುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವಿದ್ಯುತ್ ಶಾಕ್‌ಗೆ ಲೈನ್‌ಮನ್ ಬಲಿ – ಕಂಬದ ಮೇಲೆಯೇ ನೇತಾಡಿದ ಮೃತದೇಹ ವಿದ್ಯುತ್ ಕಂಬ
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ... ಓದನ್ನು ಮುಂದುವರಿಸಿ
ತಿಕೋಟಾ
ಮದ್ಯನಶೆಯಲ್ಲಿ ವ್ಯಕ್ತಿ ಮೊಬೈಲ್ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿ “ಒಂದು ಬಾಟಲ್ ಕೊಟ್ಟರೆ ಇಳ್ತಿನಿ!” – ಟವರ್ ಹತ್ತಿದ ಕುಡುಕನ ಡ್ರಾಮಾ
ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್... ಓದನ್ನು ಮುಂದುವರಿಸಿ
ಸಕಲೇಶಪುರ
ಸಕಲೇಶಪುರದಲ್ಲಿ ಬಿರುಗಾಳಿ ಮತ್ತು ಸಿಡಿಲು: ಐವರು ಮಹಿಳೆಯರು ಪ್ರಜ್ಞೆ ತಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೀನಹಳ್ಳಿ ಗ್ರಾ... ಓದನ್ನು ಮುಂದುವರಿಸಿ
ಮಡಿಕೇರಿ
ಮಡಿಕೇರಿಯಲ್ಲಿ ಭಾರಿ ಗುಡುಗು-ಸಿಡಿಲು: ತೆಂಗಿನ ಮರ ಹೊತ್ತಿ ಉರಿದಿದ್ದರಿಂದ ಬೆಚ್ಚಿಬಿದ್ದ ಸ್ಥಳೀಯರು
ಮಡಿಕೇರಿ: ಕೊಡಗು ಜಿಲ್ಲೆಯ ಹಲವಾರು ಭಾಗಗಳಲ್ಲಿ ಗುಡುಗು-ಸಿಡಿಲು ಸ... ಓದನ್ನು ಮುಂದುವರಿಸಿ
ಆಲಿಕಲ್ಲು ಮಳೆ ಅಬ್ಬರ: ಧಾರಾವಾಡದಲ್ಲಿ ಮಾವು ಬೆಳೆ ಸಂಪೂರ್ಣ ಹಾನಿ, ರೈತರು ಸಂಕಷ್ಟದಲ್ಲಿ
ಧಾರಾವಾಡ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲೇ... ಓದನ್ನು ಮುಂದುವರಿಸಿ
“ಇನ್ನೆರಡು ವರ್ಷದಲ್ಲಿ ಕಾಂಗ್ರೆಸ್ ಧೂಳಿಪಟ” – ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬಾಗಲಕೋಟೆ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಮುಂದಿನ ಎರಡು ವರ... ಓದನ್ನು ಮುಂದುವರಿಸಿ
ಸಿಎಂ ಸಂಧಾನ ಸಕ್ಸಸ್! ಪೈಲ್ವಾನ್ ನಿರ್ಧಾರದಿಂದ ಕಾಂಗ್ರೆಸ್‌ಗೆ ಬಲವರ್ಧನೆ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಕಾವು... ಓದನ್ನು ಮುಂದುವರಿಸಿ
ಮುಸ್ಲಿಂ ವಿದ್ಯಾರ್ಥಿಗೆ “ಭಯೋತ್ಪಾದಕ” ಎಂದು ಪ್ರೊಫೆಸರ್ ಅವಮಾನ: Video ವೈರಲ್
ಬೆಂಗಳೂರು: ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್... ಓದನ್ನು ಮುಂದುವರಿಸಿ
ಮೋದಿ ಇಸ್ರೇಲ್ ಭೇಟಿ ಬಳಿಕ ಮರುದಿನವೇ ಯುದ್ಧ: ಎಂ.ಬಿ. ಪಾಟೀಲ್ ಟೀಕೆ
ಬೆಂಗಳೂರು: ಮಧ್ಯಪ್ರಾಚ್ಯದ ಬಿಕ್ಕಟ್ಟು ಹಿನ್ನೆಲೆ ತೈಲ ಕೊರತೆ ಉಂಟ... ಓದನ್ನು ಮುಂದುವರಿಸಿ
ಕರಗದ ದೇವಿ ಸಾಂಗ್‌ಗೆ ಮಾರಕಾಸ್ತ್ರ ಹಿಡಿದು ಫುಲ್ ಸ್ಟೆಪ್ಸ್: ರೌಡಿಶೀಟರ್ ವೈರಲ್ ಡ್ಯಾನ್ಸ್
ಬೆಂಗಳೂರು, ಮಾರ್ಚ್ 28: ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ... ಓದನ್ನು ಮುಂದುವರಿಸಿ