ಮೂಲಗಳನ್ನು ಮರೆಯಬೇಡಿ, ವಿದ್ಯೆಯೇ ನಿಜವಾದ ಸಂಪತ್ತು: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ‌:“ಬೇರನ್ನು ಮರೆತರೆ ಮರ ಬಾಳುವುದಿಲ್ಲ. ಅದೇ ರೀತಿ ನಿಮ್ಮ ಮೂಲವನ್ನು ಮರೆತರೆ ಫಲ ದೊರೆಯುವುದಿಲ್ಲ. ಗುರು–ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಯಶಸ್ಸು ಖಂಡಿತ” ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು. ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಜೆ. ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ದೊರೆಯುತ್ತದೆ. ನೀವೆಲ್ಲರೂ ದೇಶಕ್ಕೆ ಹಾಗೂ ರಾಜ್ಯಕ್ಕೆ ದೊಡ್ಡ ಆಸ್ತಿಯಾಗಿ ಬೆಳೆಯಬೇಕು” ಎಂದು ಹೇಳಿದರು.

 

ಇಪ್ಪತ್ತೈದು ವರ್ಷಗಳ ಹಿಂದೆ ಸಮ್ಮೇಳನದಲ್ಲಿ ಭಾಗವಹಿಸಲು Parisಗೆ ತೆರಳಿದ್ದ ಅನುಭವವನ್ನು ಹಂಚಿಕೊಂಡ ಅವರು, “ಆ ದಿನ ನನ್ನ ಹುಟ್ಟುಹಬ್ಬ ಎಂಬುದು ಅಲ್ಲಿ ಇದ್ದವರಿಗೆ ತಿಳಿದು ವೇದಿಕೆಗೆ ಕರೆಯಲಾಯಿತು. ಹಳ್ಳಿಗಾಡಿನಿಂದ ಬಂದ ನಾನು ಹುಟ್ಟುಹಬ್ಬ ಆಚರಿಸುವ ಸಂಸ್ಕೃತಿಗೆ ಪರಿಚಿತನಲ್ಲ. ಕೇಕ್ ಮೇಲೆ ಮೇಣದಬತ್ತಿ ಹಚ್ಚಿ ಅದನ್ನು ಆರಿಸುವಂತೆ ಹೇಳಿದರು. ಆಗ ಅಲ್ಲಿದ್ದ ಒಬ್ಬರು ಓಡಿಬಂದು ‘ಇವರು ಭಾರತದಿಂದ ಬಂದವರು. ಇವರದು ದೀಪ ಬೆಳಗಿಸುವ ಸಂಸ್ಕೃತಿ, ದೀಪ ಆರಿಸುವ ಸಂಸ್ಕೃತಿ ಅಲ್ಲ’ ಎಂದು ತಿಳಿಸಿದರು” ಎಂದು ಹೇಳಿದರು.

 

“ಮಕ್ಕಳು ಮುಂದಿನ ಬಾರಿ ಹುಟ್ಟುಹಬ್ಬ ಆಚರಿಸುವಾಗ ಮೇಣದಬತ್ತಿ ಆರಿಸದೇ ಹಚ್ಚಿ ಬೆಳಗಿಸಬೇಕು. ನಿಮ್ಮ ಗುರಿ ಹೊಸ ವಿಚಾರಗಳನ್ನು ಕಲಿಯುವತ್ತ ಇರಲಿ. ರೂಪರಪಹರಿಸದ, ದಾಯಾದಿ ದಕ್ಕಿಸದ, ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ. ನೀವು ಕಲಿಯುವ ವಿದ್ಯೆಯನ್ನು ಯಾರೂ ಕಸಿಯಲು ಸಾಧ್ಯವಿಲ್ಲ” ಎಂದು ಹೇಳಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 hours ago

   
Image 1
Image 1
ಬೆಂಗಳೂರು ನಗರ

90ನೇ ವಾರ್ಷಿಕೋತ್ಸವ: ಮಲಬಾರ್ ಮುಸ್ಲಿಂ ಅಸೋಸಿಯೇಷನ್‍ಗೆ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರ ಸನ್ಮಾನ

ಬೆಂಗಳೂರು: ಸಿದ್ದರಾಮಯ್ಯ ಅವರು ಮಲಬಾರ್ ಮುಸ್ಲಿಂ ಅಸೋಸಿಯೇಷನ್ 90... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಕೋಮುವಾದ ಪರಿಸ್ಥಿತಿ ಕಾರಣವಾಗಿ ಐಟಿ-ಬಿಟಿ ಹೂಡಿಕೆ ತಡೆ — ಖರ್ಗೆ ಎಚ್ಚರಿಕೆ

ಬೆಂಗಳೂರು: ಕೋಮುವಾದದ ವಾತಾವರಣ ಕರಾವಳಿ ಭಾಗದ ಅಭಿವೃದ್ಧಿಗೆ ಅಡ್ಡ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಸ್ಥಳೀಯ ಚುನಾವಣೆಗೆ ಮೈತ್ರಿ ಸಂಕಟ: ಜೆಡಿಎಸ್ ಪ್ಲ್ಯಾನ್–ಬಿ ಸಿದ್ಧ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

ಬಿಕ್ಲು ಶಿವ ಹತ್ಯೆ ಪ್ರಕರಣ ತೀವ್ರತೆ: ಬೈರತಿ ಬಸವರಾಜ್ ಸಿಐಡಿ ಕಸ್ಟಡಿಗೆ

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಚಾಮರಾಜನಗರ

ಜಲಾಶಯದಲ್ಲಿ ತೇಲುತ್ತಿದ್ದ ಹುಲಿ ಶವ: ಅರಣ್ಯ ಇಲಾಖೆ ತೀವ್ರ ತನಿಖೆ

ಚಾಮರಾಜನಗರ, ಫೆ.15: ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಕೋಲಾರ

ಮಹಾಶಿವರಾತ್ರಿ ಸಂಭ್ರಮದಲ್ಲಿ ಕೋಲಾರ ಮಿಂದೆದ್ದಿತು; ಭಾರತ ಜಯಕ್ಕಾಗಿ ವಿಶೇಷ ಪೂಜೆ

ಕೋಲಾರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕೋಲಾರ ನಗರ ಭಕ್ತಿಭಾವದಿಂ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ

ಗುಡಿಬಂಡೆ: ತಾಲೂಕಿನ ವಿವಿಧ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಯ ಕರ್ನಾಟಕ, ಗ್ರೀನ್ ವಾರಿಯರ್ಸ್, ರಾಜಭೀದಿಯಲ್ಲಿ ಗಿಡ ನೆಟ್ಟು ಮಹಾಶಿವರಾತ್ರಿ ಹಬ್ಬ ಆಚರಣೆ

ಗುಡಿಬಂಡೆ : ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಗುಡಿಬಂಡೆಯ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ 'ಸಮಾಜ ದಿನ' ಆಚರಣೆ: ವಿದ್ಯಾರ್ಥಿಗಳಿಂದ ಐತಿಹಾಸಿಕ ಮಾದರಿಗಳ ಪ್ರದರ್ಶನ

 

ಗುಡಿಬಂಡೆ: ಪಟ್ಟಣದ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ದಾಖಲೆ ಬಜೆಟ್‌ ಮಧ್ಯೆ ಆದಾಯ ಒತ್ತಡ: ಸರ್ಕಾರಕ್ಕೆ 15,000 ಕೋಟಿ ರೂ. ಕೊರತೆ ಭೀತಿ

ಬೆಂಗಳೂರು, ಫೆಬ್ರವರಿ 15: ಪ್ರಸಕ್ತ 2025-26ನೇ ಆರ್ಥಿಕ ವರ್ಷಕ್ಕ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1