ರಾಜ್ಯಪಾಲರಿಗೆ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ KUWJ ಆಹ್ವಾನ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಮಾರ್ಚ್ ಅಂತ್ಯದಲ್ಲಿ ಬೀದರನಲ್ಲಿ ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಆಹ್ವಾನಿಸಿದೆ. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಕೆಯುಡಬ್ಲ್ಯೂಜೆ ನಿಯೋಗವು ಈ ಆಹ್ವಾನವನ್ನು ಲೋಕಭವನದಲ್ಲಿ ಸಲ್ಲಿಸಿತು. ಆಹ್ವಾನಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದರು. ಅವರು ಸಂಘದ ಇತಿಹಾಸವನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಡಿವಿಜಿ ಸಂಸ್ಥಾಪನೆಯಾದ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಣಿಗೆ ನೀಡಿದ ಸಂಘವು 95 ವಸಂತಗಳನ್ನು ಮುಟ್ಟುತ್ತಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಈ ಸಂದರ್ಭ, ರಾಜ್ಯಪಾಲರಿಗೆ ಕೆಯುಡಬ್ಲ್ಯೂಜೆ ನೆನಪಿನ ಸಂಚಿಕೆ, “ಕೊವಿಡ್ ಕಥೆಗಳು” ಮತ್ತು “ಅಮೃತ ಬೀಜ” ಪುಸ್ತಕವನ್ನು ನೀಡಿ ಗೌರವಿಸಲಾಯಿತು. ಜೊತೆಗೆ ಕೆಯುಡಬ್ಲ್ಯೂಜೆ ಲೋಗೋ ಮತ್ತು ಅವರ ಭಾವಚಿತ್ರದಿರುವ ಕಾಫಿ ಕಪ್ ಹಾಗೂ ಕೆಯುಡಬ್ಲ್ಯೂಜೆ ಕ್ಯಾಲೆಂಡರ್ ಅನ್ನು ಹಂಚಿ ಸ್ಮರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ.ಮದನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾರ್ಯದರ್ಶಿ ಸೋಮಶೇಖರ ಕೆರಗೋಡು ಮತ್ತು ಖಜಾಂಚಿ ವಾಸುದೇವ ಹೊಳ್ಳ ಉಪಸ್ಥಿತರಿದ್ದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಿಕ್ಲು ಶಿವ ಪ್ರಕರಣ: ವೈರಲ್ ವಿಡಿಯೋ ಕಾರಣದಿಂದ ಜಗ್ಗ-ಬಿಕ್ಲು ವೈಮನಸ್ಸು ಇದೇನಾ ಕೊಲೆಗೆ ಕಾರಣ..?
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿ... ಓದನ್ನು ಮುಂದುವರಿಸಿ
ಬಿಜೆಪಿ ವಿರುದ್ಧ ಪತ್ರಿಕೆ ಜಾಹೀರಾತು: ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ದೂರು ಹೈಕೋರ್ಟ್‌ನಲ್ಲಿ ವಜಾ
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಪತ್ರ... ಓದನ್ನು ಮುಂದುವರಿಸಿ
ಬಜೆಟ್ ಮಂಡನೆಯೇ ಸರ್ಕಾರದ ಸ್ಥಿರತೆಗೆ ಸಾಕ್ಷಿ: ರಾಜಕೀಯ ಬದಲಾವಣೆ ಊಹೆ ತಪ್ಪು – ಕೆ.ಎನ್. ರಾಜಣ್ಣ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ನಡ... ಓದನ್ನು ಮುಂದುವರಿಸಿ
ಕಾನೂನು ಉಲ್ಲಂಘಿಸಿ 31 ನಿವೇಶನ ಪಡೆದಿದ್ದೇನೆಂದ ಕಾಂಗ್ರೆಸ್ ಮೇಲೆ ಛಲವಾದಿ ನಾರಾಯಣಸ್ವಾಮಿ ಆರೋಪ
ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮ... ಓದನ್ನು ಮುಂದುವರಿಸಿ
“ನನ್ನ ಮತ್ತು ಸಿದ್ದರಾಮಯ್ಯ ನಡುವೆ ಕದ್ದುಮುಚ್ಚಿ ವ್ಯವಹಾರವಿಲ್ಲ: ಡಿ.ಕೆ. ಶಿವಕುಮಾರ್”
ಬೆಂಗಳೂರು: “ಸಚಿವ ಹೆಚ್.ಸಿ. ಮಹದೇವಪ್ಪ ಬಹಳ ದೊಡ್ಡವರು. ಈಗ ಅವರು... ಓದನ್ನು ಮುಂದುವರಿಸಿ
“ಕಟ್ಟಾ ಕಾಂಗ್ರೆಸಿಗರು ‘ನಿಯತ್ತಿನ ನಾಯಿಗಳು’: ಯಜಮಾನನ ಋಣ ತೀರಿಸಲು ಸದಾ ಸಿದ್ಧ” – ಡಿ.ಕೆ. ಸುರೇಶ್
ಬೆಂಗಳೂರು: “ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸಿಗ... ಓದನ್ನು ಮುಂದುವರಿಸಿ
ಗುಂಡಾಲ್ ಡ್ಯಾಂ: ಸ್ಕೂಟರ್ ಕ್ಲಚ್ ವೈರ್ ಉರುಳಿಗೆ ಹುಲಿ ಬಲಿ; ತಪ್ಪಿತಸ್ಥರ ಪತ್ತೆಗೆ ಮುಂದಾಗಿದೆ ಅರಣ್ಯ ಇಲಾಖೆ
ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಅ... ಓದನ್ನು ಮುಂದುವರಿಸಿ
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆ ಖಾಕಿ ಕನಸು ನನಸು: ಪುಟ್ಟ ಬಾಲಕ ‘ಒಂದು ದಿನದ ಎಸ್‌ಪಿ’
ದಾವಣಗೆರೆ, ಫೆಬ್ರವರಿ 17: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ... ಓದನ್ನು ಮುಂದುವರಿಸಿ
ಉಡುಪಿಯಲ್ಲಿ ಏರ್ ಕ್ವಾಲಿಟಿ ತೀವ್ರ ಹಾನಿಕಾರಕ – N95 ಮಾಸ್ಕ್ ಅಗತ್ಯ
ಬೆಂಗಳೂರು, ಫೆಬ್ರವರಿ 17 : ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗು... ಓದನ್ನು ಮುಂದುವರಿಸಿ
‘ಸಿದ್ದರಾಮಯ್ಯ ಮಗ ವಿಜಯೇಂದ್ರನಂತೆ ವಸೂಲಿಗೆ ನಿಂತಿದ್ದಾರೆ’– ಯತ್ನಾಳ್ ಖಂಡನೆ
ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಮತ್ತ... ಓದನ್ನು ಮುಂದುವರಿಸಿ