ರೇಣುಕಾ ಸ್ವಾಮಿ ಪ್ರಕರಣ: ಸಾಕ್ಷ್ಯ ತಿದ್ದುಪಡಿ ಆರೋಪಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ತಿರುಗೇಟು
ಬೆಂಗಳೂರು: ರೆಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿ ತನಿಖಾಧಿಕಾರಿಗಳು ಸಾಕ್ಷ್ಯ ತಿದ್ದುಪಡಿಸಿಕೊಂಡಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರಸನ್ನ ಕುಮಾರ್ ಪ್ರತಿವಾದ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಆರೋಪಗಳು ಅಪರಾಧಿ ಪರ ವಕೀಲರಿಂದ ಉದ್ದೇಶಪೂರ್ವಕವಾಗಿ ಪ್ರಚಾರಕ್ಕಾಗಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನಗರದ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಾದಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಎ3 ಆರೋಪಿ ಪವನ್ ಪರ ವಕೀಲರು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ಹಾಗೂ ಮೆಮೊ ಸಲ್ಲಿಸಿರುವುದು ಪ್ರಚಾರಾತ್ಮಕ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಪವನ್ ಪರ ವಕೀಲರು ಸಲ್ಲಿಸಿರುವ ಅರ್ಜಿ ಕಾನೂನಿಗೆ ಅನ್ವಯಿಸದ ಹಾಸ್ಯಾಸ್ಪದ ಅರ್ಜಿ ಎಂದು ಅವರು ಅಭಿಪ್ರಾಯಪಟ್ಟರು.
ಮೊಬೈಲ್ ಸಂಖ್ಯೆ ಮತ್ತು ಐಎಂಇಐ ಸಂಖ್ಯೆಗಳ ಕುರಿತಾಗಿ ಪವನ್ ಪರ ವಕೀಲರು ನ್ಯಾಯಾಲಯದಲ್ಲಿ ಯಾವುದೇ ತಕರಾರು ಎತ್ತಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ಕೇಳಿಬರುವ ಪ್ರಶ್ನೆಗಳಿಗೆ ತನಿಖಾಧಿಕಾರಿಗಳೇ ಸಮರ್ಪಕ ಉತ್ತರ ನೀಡಲಿದ್ದಾರೆ ಎಂದು ಎಸ್‌ಪಿಪಿ ಸ್ಪಷ್ಟಪಡಿಸಿದರು.
ಇನ್ನು, ಪ್ರತಿದಿನ ವಿಚಾರಣೆ ನಡೆಸಲು ನಟ ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ಕೋರ್ಟ್ ಪ್ರತಿದಿನ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದು ಈಗಾಗಲೇ ತಿಳಿಸಿರುವುದಾಗಿ ಹೇಳಿದರು.
ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ, “ಜೈಲು ಅಧಿಕಾರಿಯ ಮನವಿ ಇಲ್ಲದೆ ನೇರವಾಗಿ ಅರ್ಜಿ ಸಲ್ಲಿಸಿರುವುದು ನಿಯಮಕ್ಕೆ ವಿರುದ್ಧ. ಜೈಲು ಕೈಪಿಡಿಯ ಪ್ರಕಾರ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಇದರಿಂದ ದರ್ಶನ್ ಭದ್ರತೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ,” ಎಂದು ಪ್ರಸನ್ನ ಕುಮಾರ್ ವಾದಿಸಿದರು.
ಇದೇ ವೇಳೆ, ಪವನ್ ಪರ ವಕೀಲರು ಸಲ್ಲಿಸಿದ ಮತ್ತೊಂದು ಅರ್ಜಿಯಲ್ಲಿ ತನಿಖಾಧಿಕಾರಿಯೇ ಸಾಕ್ಷ್ಯಗಳನ್ನು ತಿರುಗಿಸಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದಾರೆ ಎಂಬ ಆರೋಪ ಮಾಡಿದ್ದು, ಅವರನ್ನು 18ನೇ ಆರೋಪಿಯಾಗಿ ಪ್ರಕರಣದಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಸ್ಥಳಗಳು ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ನ್ಯಾಯಾಲಯ ಅನುಮತಿ ನೀಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ. ಈ ಕುರಿತು ಪೋಲೀಸರು ತಮ್ಮ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅರ್ಜಿಗಳ ಕುರಿತು ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸ್ಯಾಂಡಲ್‌ವುಡ್‌ಗೆ ಶಾಕ್: ಸಿನಿಮಾ ನಟಿ ಕೊಲೆ ಪ್ರಕರಣದಲ್ಲಿ ಅರೆಸ್ಟ್
ಬೆಂಗಳೂರು: ಬೆಳ್ಳಿತೆರೆಯಲ್ಲಿ ಮಿಂಚುವ ಕನಸು ಕಂಡಿದ್ದ ನಟಿ ಈಗ ಭೀ... ಓದನ್ನು ಮುಂದುವರಿಸಿ
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ; ನ್ಯಾಯಾಲಯ ಆವರಣ ತೆರವು, ಬಿಗಿ ಪೊಲೀಸ್ ಬಂದೋಬಸ್ತ್
ಕಲಬುರಗಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದ... ಓದನ್ನು ಮುಂದುವರಿಸಿ
‘ಆಪ್ಕಿ ಇವಿ’ ಶೋರೂಂ ವಂಚನೆ: 3,250 ಗ್ರಾಹಕರಿಗೆ ಲೋನ್ ಜಾಲದಲ್ಲಿ ಸೆರೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬೈಕ್ ವಿತರಣೆ ನೆ... ಓದನ್ನು ಮುಂದುವರಿಸಿ
ಸಿಸಿಬಿ ಮೆಗಾ ದಾಳಿ: ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು: ನಗರದಲ್ಲಿ ಡ್ರಗ್ಸ್ ದಂಧೆಕೋರರಿಗೆ ಭಾರೀ ಹೊಡೆತ ಬಿದ್ದ... ಓದನ್ನು ಮುಂದುವರಿಸಿ
ಹೊಳೆನರಸೀಪುರ
ಕ್ರೂರ ಚಾಲಕನ ದೌರ್ಜನ್ಯ :ನಿಧಾನವಾಗಿ ಕಾರ್ ಓಡಿಸು ಎಂದದ್ದಕ್ಕೆ: ಹಾಸನದಲ್ಲಿ ಯುವಕನ ಬರ್ಬರ ಹತ್ಯೆ
ಹಾಸನ: ಹೊಳೆನರಸೀಪುರ ತಾಲೂಕು ಸೂರನಹಳ್ಳಿ ಗ್ರಾಮ ನಲ್ಲಿ ರಸ್ತೆ ಪಕ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಾರಲ್ಲಿದ್ದ ನವ ದಂಪತಿಗೆ ಬೆದರಿಕೆ: ಸುಲಿಗೆ ಮಾಡಿದವರನ್ನು ಬೆನ್ನುಹತ್ತಿ ಬಂಧಿಸಿದ ಗ್ರಾಮೀಣ ಪೊಲೀಸ್
ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ರೇವಡಿಹಾಳ ಗ್ರಾಮ ಬಳಿ ಖಾಲಿ... ಓದನ್ನು ಮುಂದುವರಿಸಿ
ರಾತ್ರಿ ಊಟವೇ ಅಂತಿಮವಾಯ್ತು: ನಡು ರಾತ್ರಿ ದಾಳಿ: ಊಟಕ್ಕೆ ಬಂದಿದ್ದ ವ್ಯಕ್ತಿ ಹತ್ಯೆ
ಬೆಂಗಳೂರು: ನಗರದ ಬಸವೇಶ್ವರನಗರದ ಶಿವನಹಳ್ಳಿಯಲ್ಲಿ ವ್ಯಕ್ತಿಯೊಬ್ಬ... ಓದನ್ನು ಮುಂದುವರಿಸಿ
ನಾಲ್ಕು ಅಂತಸ್ತಿನ ಮನೆಯಲ್ಲಿ ಬೆಂಕಿ: ಪತ್ನಿ ಸಾವು, ಕುಟುಂಬದ ಮೂವರು ಪಾರು
ಬೆಂಗಳೂರು: ನಗರದ ಗಾಯತ್ರಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ... ಓದನ್ನು ಮುಂದುವರಿಸಿ
ಕೋರಮಂಗಲ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ: ‘ಕಸಬ್’ ಮರಣದಂಡನೆ ಉಲ್ಲೇಖ
ಬೆಂಗಳೂರು: ನಗರದಲ್ಲಿ ಹುಸಿ ಬಾಂಬ್ ಬೆದರಿಕೆಯ ಸರಣಿ ಮುಂದುವರಿದಿರ... ಓದನ್ನು ಮುಂದುವರಿಸಿ
ಮಡಿಕೇರಿ
ಮಾನವ–ಆನೆ ಸಂಘರ್ಷ ಮತ್ತೆ ತೀವ್ರ: 17ರ ಹರೆಯದ ವಿದ್ಯಾರ್ಥಿನಿ ದುರ್ಮರಣ
ಮಡಿಕೇರಿ : ತಾಲೂಕಿನ ಬೆಟ್ಟತೂರು ಗ್ರಾಮದಲ್ಲಿ ಶನಿವಾರ ಸಂಜೆ ಕಾಡಾ... ಓದನ್ನು ಮುಂದುವರಿಸಿ