ಸಿಸಿಬಿ ಮೆಗಾ ದಾಳಿ: ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ಬೆಂಗಳೂರು: ನಗರದಲ್ಲಿ ಡ್ರಗ್ಸ್ ದಂಧೆಕೋರರಿಗೆ ಭಾರೀ ಹೊಡೆತ ಬಿದ್ದಿದೆ. ಬೆಂಗಳೂರು ಸಿಸಿಬಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಒಂದರಲ್ಲಿ ಅಡಗಿಸಿಕೊಂಡಿದ್ದ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರನ್ನು ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ LSD ಸ್ಟ್ರಿಪ್ಸ್, ಹೈಡ್ರೋ ಗಾಂಜಾ ಹಾಗೂ ಚರಸ್ ಸೀಜ್ ಮಾಡಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ LSD ಸ್ಟ್ರಿಪ್ಸ್ ವಶಕ್ಕೆ ಪಡೆದಿರುವುದು ಮಹತ್ವದ ಬೆಳವಣಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಮಾರಾಟಕ್ಕಾಗಿ ಆರೋಪಿಗಳು ಖತರ್ನಾಕ್ ಪ್ಲ್ಯಾನ್ ರೂಪಿಸಿದ್ದರು ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ. ದೇವರ ಚಿತ್ರಗಳು ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಟ್ರಿಪ್ಸ್‌ಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಸಂಗತಿ ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗದ ದಾಳಿಯಲ್ಲಿ ಬೆಳಕಿಗೆ ಬಂದಿದೆ.
ಇಬ್ಬರೂ ಡ್ರಗ್ಸ್ ಪೆಡ್ಲಿಂಗ್‌ನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ವಿನ್ಸೆಂಟ್ ಎಂಬಾತ ಥಾಯ್ಲ್ಯಾಂಡ್‌ನಿಂದ ವಿಮಾನದ ಮೂಲಕ ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಕಳುಹಿಸುತ್ತಿದ್ದ. ಬಳಿಕ ಸೂಚಿಸಿದ ಸ್ಥಳಗಳಲ್ಲಿ ಅಶ್ವಿನ್ ಮತ್ತು ಮೊಬಿನಾ ಮಾದಕ ವಸ್ತುಗಳನ್ನು ಸಂಗ್ರಹಿಸಿ ನಗರದಲ್ಲಿ ವಿತರಣೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣದಲ್ಲಿ ಫ್ಲ್ಯಾಟ್ ಮಾಲೀಕರ ಪಾತ್ರದ ಕುರಿತೂ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸ್ಯಾಂಡಲ್‌ವುಡ್‌ಗೆ ಶಾಕ್: ಸಿನಿಮಾ ನಟಿ ಕೊಲೆ ಪ್ರಕರಣದಲ್ಲಿ ಅರೆಸ್ಟ್
ಬೆಂಗಳೂರು: ಬೆಳ್ಳಿತೆರೆಯಲ್ಲಿ ಮಿಂಚುವ ಕನಸು ಕಂಡಿದ್ದ ನಟಿ ಈಗ ಭೀ... ಓದನ್ನು ಮುಂದುವರಿಸಿ
ರೇಣುಕಾ ಸ್ವಾಮಿ ಪ್ರಕರಣ: ಸಾಕ್ಷ್ಯ ತಿದ್ದುಪಡಿ ಆರೋಪಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ತಿರುಗೇಟು
ಬೆಂಗಳೂರು: ರೆಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿ ತ... ಓದನ್ನು ಮುಂದುವರಿಸಿ
ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ; ನ್ಯಾಯಾಲಯ ಆವರಣ ತೆರವು, ಬಿಗಿ ಪೊಲೀಸ್ ಬಂದೋಬಸ್ತ್
ಕಲಬುರಗಿ: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದ... ಓದನ್ನು ಮುಂದುವರಿಸಿ
‘ಆಪ್ಕಿ ಇವಿ’ ಶೋರೂಂ ವಂಚನೆ: 3,250 ಗ್ರಾಹಕರಿಗೆ ಲೋನ್ ಜಾಲದಲ್ಲಿ ಸೆರೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬೈಕ್ ವಿತರಣೆ ನೆ... ಓದನ್ನು ಮುಂದುವರಿಸಿ
ಹೊಳೆನರಸೀಪುರ
ಕ್ರೂರ ಚಾಲಕನ ದೌರ್ಜನ್ಯ :ನಿಧಾನವಾಗಿ ಕಾರ್ ಓಡಿಸು ಎಂದದ್ದಕ್ಕೆ: ಹಾಸನದಲ್ಲಿ ಯುವಕನ ಬರ್ಬರ ಹತ್ಯೆ
ಹಾಸನ: ಹೊಳೆನರಸೀಪುರ ತಾಲೂಕು ಸೂರನಹಳ್ಳಿ ಗ್ರಾಮ ನಲ್ಲಿ ರಸ್ತೆ ಪಕ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಕಾರಲ್ಲಿದ್ದ ನವ ದಂಪತಿಗೆ ಬೆದರಿಕೆ: ಸುಲಿಗೆ ಮಾಡಿದವರನ್ನು ಬೆನ್ನುಹತ್ತಿ ಬಂಧಿಸಿದ ಗ್ರಾಮೀಣ ಪೊಲೀಸ್
ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ರೇವಡಿಹಾಳ ಗ್ರಾಮ ಬಳಿ ಖಾಲಿ... ಓದನ್ನು ಮುಂದುವರಿಸಿ
ರಾತ್ರಿ ಊಟವೇ ಅಂತಿಮವಾಯ್ತು: ನಡು ರಾತ್ರಿ ದಾಳಿ: ಊಟಕ್ಕೆ ಬಂದಿದ್ದ ವ್ಯಕ್ತಿ ಹತ್ಯೆ
ಬೆಂಗಳೂರು: ನಗರದ ಬಸವೇಶ್ವರನಗರದ ಶಿವನಹಳ್ಳಿಯಲ್ಲಿ ವ್ಯಕ್ತಿಯೊಬ್ಬ... ಓದನ್ನು ಮುಂದುವರಿಸಿ
ನಾಲ್ಕು ಅಂತಸ್ತಿನ ಮನೆಯಲ್ಲಿ ಬೆಂಕಿ: ಪತ್ನಿ ಸಾವು, ಕುಟುಂಬದ ಮೂವರು ಪಾರು
ಬೆಂಗಳೂರು: ನಗರದ ಗಾಯತ್ರಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ... ಓದನ್ನು ಮುಂದುವರಿಸಿ
ಕೋರಮಂಗಲ ಪಾಸ್‌ಪೋರ್ಟ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ: ‘ಕಸಬ್’ ಮರಣದಂಡನೆ ಉಲ್ಲೇಖ
ಬೆಂಗಳೂರು: ನಗರದಲ್ಲಿ ಹುಸಿ ಬಾಂಬ್ ಬೆದರಿಕೆಯ ಸರಣಿ ಮುಂದುವರಿದಿರ... ಓದನ್ನು ಮುಂದುವರಿಸಿ
ಮಡಿಕೇರಿ
ಮಾನವ–ಆನೆ ಸಂಘರ್ಷ ಮತ್ತೆ ತೀವ್ರ: 17ರ ಹರೆಯದ ವಿದ್ಯಾರ್ಥಿನಿ ದುರ್ಮರಣ
ಮಡಿಕೇರಿ : ತಾಲೂಕಿನ ಬೆಟ್ಟತೂರು ಗ್ರಾಮದಲ್ಲಿ ಶನಿವಾರ ಸಂಜೆ ಕಾಡಾ... ಓದನ್ನು ಮುಂದುವರಿಸಿ