ರೇಷನ್ ಕಾರ್ಡ್‌ಗೆ ಹೊಸ ರೂಲ್ಸ್ – ಇ-ಕೆವೈಸಿ ಕಡ್ಡಾಯ
ನವದೆಹಲಿ: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಹೊಸ ತಂತ್ರಜ್ಞಾನ ಆಧಾರಿತ ಮಾರ್ಗಸೂಚಿಗಳನ್ನು ಜಾರಿಗೆ ತರುವ ಸಿದ್ಧತೆಯಲ್ಲಿದೆ. ಅನರ್ಹ ಫಲಾನುಭವಿಗಳನ್ನು ಹೊರಗುಳಿಸಿ ನಿಜವಾದ ಲಾಭಾರ್ಥಿಗಳಿಗೆ ಸೌಲಭ್ಯ ತಲುಪಿಸುವುದು ಇದರ ಉದ್ದೇಶ. ಹೊಸ ನಿಯಮದಂತೆ, ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಇ-ಕೆವೈಸಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಕುಟುಂಬದ ಎಲ್ಲ ಸದಸ್ಯರ ಬಯೋಮೆಟ್ರಿಕ್ ದೃಢೀಕರಣ ಅಗತ್ಯವಾಗಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ‘ಮೇರಾ ರೇಷನ್’ ಆ್ಯಪ್ ಮೂಲಕ ಮುಖ ಗುರುತು ಬಳಸಿ ಕೆವೈಸಿ ಮಾಡಬಹುದು. ನಿಗದಿತ ಅವಧಿಯಲ್ಲಿ ಕೆವೈಸಿ ಪೂರ್ಣಗೊಳಿಸದವರ ಹೆಸರು ಪಟ್ಟಿಯಿಂದ ಕೈಬಿಡಲಾಗುತ್ತದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಆದಾಯ ಮಿತಿಯನ್ನು ಹೆಚ್ಚಿಸಿದ್ದು, ಮೆಟ್ರೋ ನಗರಗಳಲ್ಲಿ 1 ಲಕ್ಷದಿಂದ 1.20 ಲಕ್ಷಕ್ಕೆ ಏರಿಸಲಾಗಿದೆ. ಜೊತೆಗೆ, ಕುಟುಂಬದ ಮುಖ್ಯಸ್ಥರಾಗಿ 18 ವರ್ಷ ಮೇಲ್ಪಟ್ಟ ಮಹಿಳೆಯನ್ನು ಗುರುತಿಸುವ ನಿಯಮವೂ ಜಾರಿಗೆ ಬರಲಿದೆ. ಈಗ ಪಡಿತರ ಚೀಟಿಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ ಮತ್ತು ವಿದ್ಯುತ್ ಬಿಲ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. ಬಳಿಕ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಡ್ ಮಂಜೂರು ಮಾಡುತ್ತಾರೆ.
ಕೆಲವು ಸಂದರ್ಭಗಳಲ್ಲಿ ಪಡಿತರ ಚೀಟಿ ಸ್ವಯಂಚಾಲಿತವಾಗಿ ರದ್ದಾಗುವ ಸಾಧ್ಯತೆ ಇದೆ. ಆದಾಯ ತೆರಿಗೆ ಪಾವತಿಸುವವರು, ನಾಲ್ಕು ಚಕ್ರದ ವಾಹನ ಹೊಂದಿರುವವರು (ಟ್ರಾಕ್ಟರ್ ಹೊರತುಪಡಿಸಿ) ಅಥವಾ ಮೂರು ತಿಂಗಳು ಪಡಿತರ ಪಡೆಯದವರು ಪಟ್ಟಿಯಿಂದ ಹೊರಗಾಗಬಹುದು. ಕುಟುಂಬದ ಮರಣ ಅಥವಾ ಮದುವೆಂತಹ ಬದಲಾವಣೆಗಳನ್ನು ಸಮಯಕ್ಕೆ ನವೀಕರಿಸದಿದ್ದರೂ ಸಮಸ್ಯೆಗಳು ಎದುರಾಗಬಹುದು. ಸರ್ಕಾರದ ಈ ಹೊಸ ಕ್ರಮಗಳು ಪಡಿತರ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಸಹಕಾರಿಯಾಗಲಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಗೋಲ್ಡ್-ಸಿಲ್ವರ್ ರೇಟ್ ಶಾಂತ: ಇಂದಿನ ದರಗಳ ವಿವರ
ಭಾರತ: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನ ಮತ್ತು ಬೆಳ್... ಓದನ್ನು ಮುಂದುವರಿಸಿ
ಹಳೆಯ ವಾಹನಗಳಿಗೆ HSRP ಕಡ್ಡಾಯ: ರಾಜ್ಯ ಸಾರಿಗೆ ಇಲಾಖೆಯ ಸ್ಪಷ್ಟನೆ
ಬೆಂಗಳೂರು: 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಾಯಿತವಾಗಿರುವ ಎಲ್... ಓದನ್ನು ಮುಂದುವರಿಸಿ
ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ – ಇಂದು ₹200ರವರೆಗೆ ಜಿಗಿತ!
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ನಿನ್ನ... ಓದನ್ನು ಮುಂದುವರಿಸಿ
ಐಪಿಎಲ್ ಪಂದ್ಯಕ್ಕೆ ಮೆಟ್ರೋ ಸೌಲಭ್ಯ ವಿಸ್ತರಣೆ: ಮಧ್ಯರಾತ್ರಿ 2ರವರೆಗೆ ಸೇವೆ!
ಬೆಂಗಳೂರು: ಐಪಿಎಲ್–2026 ಪಂದ್ಯಗಳ ಹಿನ್ನೆಲೆ, ಬಿಎಂಆರ್‌ಸಿಎಲ್ ನ... ಓದನ್ನು ಮುಂದುವರಿಸಿ
ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಮತ್ತೊಂದು ಹೊಡೆತ
ದೆಹಲಿ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ
ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!
ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಏರಿಕೆ ಜಾರಿ
ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವ... ಓದನ್ನು ಮುಂದುವರಿಸಿ
KSRTC ಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಧ್ವನಿ ಸ್ಪಂದನ ಮತ್ತು AWATAR 4.0ಗೆ ಜಯ
ಬೆಂಗಳೂರು: KSRTC ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ... ಓದನ್ನು ಮುಂದುವರಿಸಿ
“ಜೀರೋ ಕಾಸ್ಟ್” ಕ್ರೆಡಿಟ್ ಕಾರ್ಡ್ ಇಎಂಐ: ತಿಂಗಳ ಕಂತು ಕಡಿಮೆ, ಆದರೆ ಒಟ್ಟು ಪಾವತಿಸಬೇಕಾದ ಮೊತ್ತ ಹೆಚ್ಚಾಗಬಹುದು
ಇಂದಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಹೆಚ್ಚುತ್ತಿರುವುದು ಸಾಮಾನ್ಯವಾಗ... ಓದನ್ನು ಮುಂದುವರಿಸಿ
ಪ್ರಯಾಣಿಕರಿಗೆ ಸಿಹಿ ಸುದ್ದಿ: ಯಶವಂತಪುರ–ತಾಳಗುಪ್ಪ ರೈಲು ಸೇರಿ 19 ಸೇವೆಗಳು ಖಾಯಂ
ಬೆಂಗಳೂರು: ರಾಜ್ಯದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಲಭಿಸಿದೆ... ಓದನ್ನು ಮುಂದುವರಿಸಿ