ರಿಯಲ್ ಎಸ್ಟೇಟ್ ಏಜೆಂಟ್ ಅಪಹರಣ – ಮೂವರು ವಶಕ್ಕೆ, 7 ವಿಶೇಷ ತಂಡಗಳಿಂದ ಶೋಧ

ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಕರ್ಪೂರು ಗೇಟ್ ಬಳಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಅಲಿಯಾಸ್ ಗೋಪಿ ಅಪಹರಣಗೊಳ್ಳುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

 

ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್ ಅವರು ಮಾರ್ಚ್ 8ರಂದು ಸಂಜೆ ಸುಮಾರು 7.30ರ ವೇಳೆಗೆ ಕಿಡ್ನ್ಯಾಪ್ ಆಗಿರುವುದಾಗಿ ತಿಳಿದುಬಂದಿದೆ. ಗೋಪಾಲ್ ರಿಯಲ್ ಎಸ್ಟೇಟ್ ಹಾಗೂ ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು. ಕುಟುಂಬದ ಆರೋಪದ ಪ್ರಕಾರ, ಕರ್ಪೂರು ಗೇಟ್ ಬಳಿ ಗೋಪಾಲ್ ಮತ್ತು ಸತೀಶ್ ಇದ್ದ ಕಾರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದು, ನಂತರ ಕಿಡಿಗೇಡಿಗಳು ಸ್ಪ್ರೇ ಬಳಸುವ ಮೂಲಕ ದಾಳಿ ನಡೆಸಿ ಗೋಪಾಲ್ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ.

 

ಘಟನೆಗೆ ಸಂಬಂಧಿಸಿದಂತೆ ಜಿಗಣಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೋಹನ್ ಬಾಬು, ಹರೀಶ್ ಹಾಗೂ ಕಿರಣ್ ಅವರನ್ನು ಗೋಪಾಲ್ ಪತ್ನಿಯ ದೂರಿನ ಆಧಾರದ ಮೇಲೆ ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಲಾಗಿದೆ.

 

ಅಪಹರಣ ಪ್ರಕರಣವನ್ನು ತೀವ್ರವಾಗಿ ಪರಿಶೀಲಿಸಲು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ 7 ವಿಶೇಷ ಶೋಧ ತಂಡಗಳನ್ನು ರಚಿಸಿ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ಚಂದ್ರಕಾಂತ್ ಹಾಗೂ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

 

ಅಪಹರಣಗೊಂಡ ಗೋಪಾಲ್ ಅವರನ್ನು ಶೀಘ್ರ ಪತ್ತೆಹಚ್ಚಲು ಪೊಲೀಸರು ಎಲ್ಲಾ ದಿಕ್ಕುಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ನಂತರ ಸಾರ್ವಜನಿಕರಿಗೆ ತಿಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 hours ago

   
Image 1
Image 1
ಚಿಕ್ಕಬಳ್ಳಾಪುರ

ಫೋನ್ ಕರೆ ಹಿನ್ನೆಲೆ ಗಂಡ-ಹೆಂಡತಿ ಜಗಳ ದುರಂತ ಅಂತ್ಯ – 25 ವರ್ಷದ ವರಲಕ್ಷ್ಮಿ ಸಾವು

ಚಿಕ್ಕಬಳ್ಳಾಪುರ: ಸ್ನೇಹಿತೆಯ ಪ್ರಿಯಕರ ಮಾಡಿದ ಫೋನ್ ಕರೆ ಹಿನ್ನೆಲ... ಓದನ್ನು ಮುಂದುವರಿಸಿ


Edited by: ಬಾನು

58 minutes ago

   
Image 1
ಮಂಡ್ಯ

ಕೌಟುಂಬಿಕ ಕಲಹಕ್ಕೆ ದಂಪತಿ ಆತ್ಮಹತ್ಯೆ – ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ಮಗು ಪಾರು

ಮಂಡ್ಯ: ಕೌಟುಂಬಿಕ ಕಲಹದಿಂದ ಮನನೊಂದ ದಂಪತಿ ತಮ್ಮ ಎರಡು ವರ್ಷದ ಮಗ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ನಗರ

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಶವ ಪತ್ತೆ – ಪೊಲೀಸ್ ತನಿಖೆ

ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪ... ಓದನ್ನು ಮುಂದುವರಿಸಿ


Edited by: ಬಾನು

1 hour ago

   
Image 1
ಬೆಂಗಳೂರು ನಗರ

“ನನಗೆ ಜೀವನ ಸಾಕಾಗಿದೆ”: ಚನ್ನಗಿರಿ ಶಾಸಕರ ಪಿಎ ಆತ್ಮಹತ್ಯೆ

ಬೆಂಗಳೂರು: ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ಶಿವಗಂಗಾ ಅವರ ವೈ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬಳ್ಳಾರಿ

ಬಳ್ಳಾರಿ ಖಾಸಗಿ ಶಾಲೆ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ: ವಿದ್ಯಾರ್ಥಿ ಕೊಲೆ, ಆರೋಪಿ ನಾಪತ್ತೆ

.ಬಳ್ಳಾರಿ : ನಗರದಖಾಸ್ತಿ ಶಾಲೆಯ ಹಾಸ್ಟೆಲ್‌ನಲ್ಲಿ ಭಯಂಕರ ಘಟನೆ ಸ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಳಗಾವಿ

ರಾಯಬಾಗ

ವರದಕ್ಷಿಣೆ ಕಿರುಕುಳ: 7 ತಿಂಗಳ ಗರ್ಭಿಣಿ ಕೊಲೆ, ಗಂಡನ ಮೇಲೆ ಗಂಭೀರ ಆರೋಪ

ಬೆಳಗಾವಿ: ರಾಯಬಾಗ್ ತಾಲ್ಲೂಕಿನ ಅಲಖನೂರ ಗ್ರಾಮದಲ್ಲಿ ಭೀಕರ ಘಟನೆ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಹೆಬ್ಬಾಳ ರೈಲ್ವೇ ಟ್ರ್ಯಾಕ್ ಬಳಿ ವ್ಯಕ್ತಿ ಮೃತಶರೀರ ಪತ್ತೆ, ಆತ್ಮಹತ್ಯೆ ಸಾಧ್ಯತೆ

ಬೆಂಗಳೂರು: ಹೆಬ್ಬಾಳ ರೈಲ್ವೇ ಟ್ರ್ಯಾಕ್ ಬಳಿಯಲ್ಲಿ ಮುಂಜಾನೆ ವ್ಯಕ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1
ಬೆಂಗಳೂರು ನಗರ

ತಲೆಮರೆಸಿಕೊಂಡ ಹೋಲಿ ಲ್ಯಾಂಡ್ ವಂಚಕ ಕೊನೆಗೂ ಅರೆಸ್ಟ್

ಬೆಂಗಳೂರು: ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ನಗರದಲ್ಲಿ ವಂಚನೆ ಪ್ರ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1
ಬೆಂಗಳೂರು ನಗರ

ನಕಲಿ ಸಬ್ ಇನ್ಸ್‌ಪೆಕ್ಟರ್ ಮೂಲಕ ದರೋಡೆ ನಡೆಸಲು ಪ್ರೇರೇಪಿಸಿದ ಸ್ಟ್ಯಾಂಪ್ ವೆಂಡರ್ ಬೆಟ್ಟೇಗೌಡ ಬಂಧನ

ಬೆಂಗಳೂರು: ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್ ನಲ್ಲಿ ಹೊಂಬೇಗೌಡರ ಮನೆ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1
ಚಿಕ್ಕಬಳ್ಳಾಪುರ

ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಪರಾರಿಯಾದ ಕಳ್ಳರು ಸ್ಥಳೀಯರ ನೆರವಿನಿಂದ ಸಿಕ್ಕಿಬಿದ್ದರು

ಚಿಕ್ಕಬಳ್ಳಾಪುರ: ನಗರ ಹೊರವಲಯದ ಕೆ.ವಿ ಕ್ಯಾಂ... ಓದನ್ನು ಮುಂದುವರಿಸಿ


Edited by: ಬಾನು

21 hours ago

   
Image 1