ಸಿನಿಮೀಯ ದರೋಡೆ: ಬೈಕ್ ಅಡ್ಡಗಟ್ಟಿ ₹31 ಲಕ್ಷ ಲೂಟಿ, 5 ಆರೋಪಿಗಳು ಬಂಧನ
ಬೆಂಗಳೂರು: ಬೈಕ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸಿದ್ದ ಗ್ಯಾಂಗ್‌ನ ಐವರು ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಿಖಿಲ್, ಪ್ರಶಾಂತ್ ಅಲಿಯಾಸ್ ಪಿಂಕಿ, ಅರುಣ್ ಕುಮಾರ್, ಹರೀಶ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು ₹10 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ಶ್ರೀ ಕೈಲಾಸ್ ಎಂಬಾತನನ್ನು ಗುರಿಯಾಗಿಸಿಕೊಂಡು ಈ ದರೋಡೆ ನಡೆದಿದ್ದು, ಅವರು ಉಡಾನ್ ಕಂಪನಿಗೆ ಸೇರಿದ ಹಣವನ್ನು ಕಲೆಕ್ಷನ್ ಮಾಡುತ್ತಿದ್ದರು. ಫೆಬ್ರವರಿ 1ರಂದು ಸಂಗ್ರಹಿಸಿದ ಹಣವನ್ನು ಬೈಕ್‌ನಲ್ಲಿ ಸಾಗಿಸುತ್ತಿದ್ದ ವೇಳೆ, ಎರಡು ಬೈಕ್‌ಗಳಲ್ಲಿ ಬಂದ ಗ್ಯಾಂಗ್ ಹಿಂಬಾಲಿಸಿ ದಾಳಿ ನಡೆಸಿದೆ. ಲಾಂಗ್‌ನಿಂದ ಹಲ್ಲೆ ನಡೆಸಿ ₹31,38,625 ನಗದು ಹಾಗೂ ಬೈಕ್ ಕಸಿದುಕೊಂಡು ಆರೋಪಿಗಳು ಪರಾರಿಯಾಗಿದ್ದರು.
ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದರು. ತನಿಖೆ ವೇಳೆ ಪರಿಚಿತರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ.
ಉಡಾನ್ ಕಂಪನಿಯ ಸಿಬ್ಬಂದಿಯಾಗಿದ್ದ ರಕ್ಷಿತ್ ಈ ದರೋಡೆಗೆ ಮಾಸ್ಟರ್ ಮೈಂಡ್ ಆಗಿದ್ದು, ಕೈಲಾಸ್ ಪ್ರತಿದಿನ ಹಣ ಕಲೆಕ್ಷನ್ ಮಾಡುವ ಮಾಹಿತಿ ಆತನಿಗೆ ತಿಳಿದಿತ್ತು. ಈ ಮಾಹಿತಿಯನ್ನು ಆಧಾರ ಮಾಡಿಕೊಂಡು ತನ್ನ ಸ್ನೇಹಿತರೊಂದಿಗೆ ದರೋಡೆ ಪ್ಲ್ಯಾನ್ ಮಾಡಿ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಡಿವೈಎಸ್ಪಿ ಮೋಹನ್ ಹಾಗೂ ಇನ್‌ಸ್ಪೆಕ್ಟರ್‌ಗಳಾದ ಕೃಷ್ಣಕುಮಾರ್ ಮತ್ತು ಮಂಜುನಾಥ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆಯಿಂದ ಯುವಕ ಹತ್ಯೆ – ಇಬ್ಬರು ಆರೋಪಿಗಳು ಬಂಧನ
ರಾಯಚೂರು: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆಂಬ ಅನುಮಾನದ... ಓದನ್ನು ಮುಂದುವರಿಸಿ
ಬೆಂಗಳೂರು ಸಿಸಿಬಿ ದಾಳಿ: ಅಕ್ರಮ ಗನ್ ಜಾಲ ಭೇದ – ಮಾಸ್ಟರ್ ಮೈಂಡ್ ಬಂಧನ
ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ನಡೆಸು... ಓದನ್ನು ಮುಂದುವರಿಸಿ
‘ರಕ್ಷಕನೇ ಭಕ್ಷಕ?’: ಮೂಡಿಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಲೈಂಗಿಕ ಆರೋಪಗಳ ನಡುವೆ ಅಮಾನತು – ನ್ಯಾಯದ ಪ್ರಶ್ನೆ
ದಕ್ಷಿಣ ಕನ್ನಡ: ಮೂಡಿಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದ... ಓದನ್ನು ಮುಂದುವರಿಸಿ
ಪೊಲೀಸ್ ವಲಯದಲ್ಲಿ ಶೋಕ : ಹೃದಯಾಘಾತದಿಂದ ಮುಖ್ಯಪೇದೆ ವೆಂಕಟರಮಣಪ್ಪ ಅಕಾಲಿಕ ನಿಧನ
ಕೋಲಾರ: ಕೋಲಾರದಲ್ಲಿ ಹೃದಯಾಘಾತದಿಂದ ಪೊಲೀಸ್ ಮುಖ್ಯಪೇದೆ ವೆಂಕಟರಮ... ಓದನ್ನು ಮುಂದುವರಿಸಿ
ನೊಂದ ಮಹಿಳೆ ಪರ ವಕಾಲತ್ತು ವಹಿಸಿರುವ ವಕೀಲರ ಮೇಲೆ BDA ಅಧಿಕಾರಿಯ ಜೀವ ಬೆದರಿಕೆ!
ಬೆಂಗಳೂರು: ನಗರದಲ್ಲಿ ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರ (ಬಿಡಿಎ... ಓದನ್ನು ಮುಂದುವರಿಸಿ
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ 39 ಆರೋಪಿಗಳು ಸಾಬೀತು: ಪ್ರಜ್ವಲ್ ರೇವಣ್ಣ ಹೆಸರು ಚಾರ್ಜ್‌ಶೀಟ್‌ನಲ್ಲಿ ಇಲ್ಲ
ಹಾಸನ: ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಪ್ರಜ್ವಲ್ ರ... ಓದನ್ನು ಮುಂದುವರಿಸಿ
ಮಂಗಳೂರು
ಗಂಡನನ್ನು ಬಂಧಿಸಿ ಹೆಂಡ್ತಿಯನ್ನು ಮಂಚಕ್ಕೆ ಕರೆದಿದ್ದ ಪ್ರಕರಣ - ಇನ್ಸ್‌ಪೆಕ್ಟರ್ ಸಸ್ಪೆಂಡ್
ಮಂಗಳೂರು: ಪತಿಯನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿ, ಬಿಡುಗಡೆ ಮಾ... ಓದನ್ನು ಮುಂದುವರಿಸಿ
15 ದಿನದ ಮಗು ಸಾವು: ತಂದೆ ಮೇಲೆ ಗಂಭೀರ ಅನುಮಾನ
ಬೆಳಗಾವಿ: ಕೇವಲ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸ... ಓದನ್ನು ಮುಂದುವರಿಸಿ
ಯುಗಾದಿ ಹಬ್ಬಕ್ಕೆ ಜೂಜಾಟಕ್ಕೆ ಬ್ರೇಕ್ – ಮಂಡ್ಯ ಎಸ್ಪಿ ಕಠಿಣ ಎಚ್ಚರಿಕೆ
ಮಂಡ್ಯ: ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜೂಜಾಟವನ್ನು... ಓದನ್ನು ಮುಂದುವರಿಸಿ
ಸುತ್ತಿಗೆಯಿಂದ ಹೊಡೆದು ಸ್ನೇಹಿತನ ಹತ್ಯೆ: ಬೆಂಗಳೂರಿನಲ್ಲಿ ಭೀಕರ ಘಟನೆ
ಬೆಂಗಳೂರು: ಅತ್ತಿಮರ ಗೊರವಿನಗೆರೆಯಲ್ಲಿ ಸಂಭವಿಸಿದ ಭೀಕರ ಘಟನೆতে... ಓದನ್ನು ಮುಂದುವರಿಸಿ