"ಶ್ರೀನಿವಾಸಪುರದಲ್ಲಿ ಭೀಕರ ರಸ್ತೆ ಅಪಘಾತ: 3 ಕಾರ್ಮಿಕರು ಮೃತ, 15ಕ್ಕೂ ಹೆಚ್ಚು ಗಾಯ"

ಶ್ರೀನಿವಾಸಪುರ : ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿ; 15ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ ಕೋಲಾರ ಜಿಲ್ಲೆಯ ಶ್ರೀನಿವಾಸಪುರ  ತಾಲ್ಲೂಕಿನ ಕಾಲೂನಿ ಗೇಟ್ ಬಳಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

 

ಶ್ರೀನಿವಾಸಪುರ ಸಮೀಪ ಹುಣಸೆಹಣ್ಣು ಕೊಯ್ಯುವ ಕೆಲಸ ಮುಗಿಸಿಕೊಂಡು ಮರಳಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ ಪಿಕಪ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ಸಾವು-ನೋವು ಸಂಭವಿಸಿದೆ.ಸೀನು (27) ಮುನಿಯಮ್ಮ (50),ವೆಂಕಟಪ್ಪ (53) ಮೃತರು ಮತ್ತು ಗಾಯಾಳುಗಳು ಮೂಲತಃ ಆಂಧ್ರಪ್ರದೇಶದ ಮದನಪಲ್ಲಿ ವಿಧಾನಸಭಾ ಕ್ಷೇತ್ರದ ಚೆಂಬಕೂರು ಪಂಚಾಯತ್‌ನ ಪಾತೂರು ಮತ್ತು ಪೂಲಕುಂಟ್ಲಪಲ್ಲಿ ಗ್ರಾಮದ ನಿವಾಸಿಗಳೆಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ.

 

 ಗಾಯಗೊಂಡ 15ಕ್ಕೂ ಹೆಚ್ಚು ಕಾರ್ಮಿಕರನ್ನು ಶ್ರೀನಿವಾಸಪುರ ಹಾಗೂ ಮದನಪಲ್ಲಿಯ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಹಾಗೂ ಮುಳಬಾಗಿಲು ಡಿವೈಎಸ್ಪಿ ಮನಿಷಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ ಅಧಿಕಾರಿಗಳು, ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

20 hours ago

   
Image 1
Image 1
ಬೆಂಗಳೂರು ನಗರ

ದೇವನಹಳ್ಳಿ

ಗಾಂಜಾ ಹಾವಳಿ ಮಿತಿ ಮೀರಿ: ನಡುರಸ್ತೆಯಲ್ಲಿ ಮೂವರು ಯುವಕರು ಅಸ್ವಸ್ಥ

ದೇವನಹಳ್ಳಿ: ದೇವನಹಳ್ಳಿ ಪಟ್ಟಣದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಮಿ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1
ಬೆಂಗಳೂರು ಗ್ರಾಮಾಂತರ

ನೆಲಮಂಗಲ

ನೆಲಮಂಗಲ ಮೂಲ ಕನ್ನಡಿಗನಿಗೆ ಕೆನಡಾದಲ್ಲಿ ಬರ್ಬರ ಹತ್ಯೆ; ಕುಟುಂಬ ನೊಂದು ಕಂಗಾಲು

ನೆಲಮಂಗಲ : (ಬೆಂಗಳೂರು ಗ್ರಾಮಾಂತರ) ನಿವಾಸಿ ಚಂದನ್ ಕುಮಾರ್ (37)... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೆಂಗಳೂರು ನಗರ

ಕೊರೋನಾ ನಷ್ಟದ ಕಾರಣ ಕಳ್ಳತನ; ರಾಜಾ ಬೈಯಪ್ಪನಹಳ್ಳಿ ಪೊಲೀಸರ ಬಲೆಗೆ

ಬೆಂಗಳೂರು:  ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಟ್ರಾವೆಲ್ಸ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಮಂಡ್ಯ

ಮಳವಳ್ಳಿ

ಪಕ್ಕದ ಮನೆಯವನ ಕಿರುಕುಳಕ್ಕೆ ತಾಯಿ–ಮಗಳು ಆತ್ಮಹತ್ಯೆ! ಹೃದಯವಿದ್ರಾವಕ ಘಟನೆ

ಮಂಡ್ಯ: ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಪಕ್ಕದ ವ್... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದ ಕಳ್ಳರು ಪರಾರಿ: ಮಹಿಳೆ ಸ್ಥಳದಲ್ಲೇ ಸಾವು

ಬೆಂಗಳೂರು: ನೆಲಮಂಗಲ ಸಮೀಪದ ಹುಸ್ಕೂರು ಗ್ರಾಮದಲ್ಲಿ ಸ್ಪ್ರೇ ಸಿಂಪ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬೆಂಗಳೂರು ನಗರ

ತಾಯಿ–ಸಂಬಂಧಿಕರ ಖಾಸಗಿ ಫೋಟೋಗಳನ್ನು ಪ್ರಿಯಕರನಿಗೆ ಕಳಿಸಿದಳೇ ಮಗಳು? ಠಾಣೆ ಮೆಟ್ಟಿಲೇರಿದ ತಾಯಿ

ಬೆಂಗಳೂರು:  ತಾಯಿ ಹಾಗೂ ಸಂಬಂಧಿಕರ ಖಾಸಗಿ ಫೋಟೋಗಳನ್ನು ತನ್... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ದಕ್ಷಿಣಕನ್ನಡ

ಮಂಗಳೂರು

ಸೌಜನ್ಯಾ ಕೊಲೆ ಪ್ರಕರಣ – ಸಿಬಿಐಗೆ ಹೈಕೋರ್ಟ್ ನೋಟಿಸ್

ಮಂಗಳೂರು:  ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ದೋಷಪೂ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ಗ್ರಾಮಾಂತರ

ನೆಲಮಂಗಲ

ಹೃದಯ ವಿದ್ರಾವಕ ಘಟನೆ: ಗಂಡನ ಅಕಾಲಿಕ ಸಾವಿನ ಶೋಕದಲ್ಲಿ ಪತ್ನಿ ಆತ್ಮಹತ್ಯೆ

ನೆಲಮಂಗಲ:  ನೆಲಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಉತ್ತರಕನ್ನಡ

ಕಾರವಾರ

ಪೋಕ್ಸೋ ಸಂತ್ರಸ್ತ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಕಾರವಾರ: ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ 8ನೇ ತರಗತಿ ವಿದ್ಯಾರ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೀದರ್

ಬಸವಕಲ್ಯಾಣ

ಅತ್ತೆಯ ಮಾನಸಿಕ ಕಿರುಕುಳದಿಂದ 22 ವರ್ಷದ ಗೃಹಿಣಿ ಆತ್ಮಹತ್ಯೆ

ಬೀದರ್:  ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1