ಟೀಂ ಇಂಡಿಯಾಗೆ ಮತ್ತೊಂದು ಶಾಕ್: ಗಾಯಗೊಂಡ ಹರ್ಷಿತ್ ರಾಣಾಗೆ ಮೊಣಕಾಲು ಶಸ್ತ್ರಚಿಕಿತ್ಸೆ!
ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಣಕಾಲಿನ ಗಾಯದಿಂದ ಟೀಂ ಇಂಡಿಯಾದ ಯುವ ವೇಗಿ ಹರ್ಷಿತ್ ರಾಣಾ ಮೈದಾನ ತೊರೆದಿದ್ದರು. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಈ ಘಟನೆ ಸಂಭವಿಸಿದ್ದು, ಭಾರತೀಯ ತಂಡಕ್ಕೆ ದೊಡ್ಡ ಆಘಾತವಾಗಿತ್ತು. ಹರ್ಷಿತ್ ರಾಣಾ ಬದಲಿಗೆ ಬಿಸಿಸಿಐ ತಂಡದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಸೇರಿಸಿದ್ದಿತ್ತು.
ಇದೀಗ, ಹರ್ಷಿತ್ ರಾಣಾ ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ರಾಣಾ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಫೋಟೋ ಪೋಸ್ಟ್ ಮಾಡಿರುವ ಅವರು, ಶೀಘ್ರ ಚೇತರಿಸಿಕೊಂಡು ಟೀಂ ಇಂಡಿಯಾಗೆ ಮರಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಅಭ್ಯಾಸ ಪಂದ್ಯದಲ್ಲಿ ರಾಣಾ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿ ಮೈದಾನ ತೊರೆದಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಗಾಯ ಗಂಭೀರ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ, ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಉತ್ತಮ ಫಾರ್ಮ್‌ನಲ್ಲಿದ್ದ ಹರ್ಷಿತ್ ರಾಣಾ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಪ್ರಮುಖ ನೆರವು ನೀಡುತ್ತಿದ್ದರು.
ಈ ಸಂದರ್ಭದಲ್ಲಿ, ವಾಷಿಂಗ್ಟನ್ ಸುಂದರ್ ಕೂಡ ಗಾಯದಿಂದ ಬಳಲುತ್ತಿದ್ದರು. ಇದೀಗ ಸುಂದರ್ ಚೇತರಿಸಿಕೊಂಡು ತಂಡಕ್ಕೆ ಸೇರಿದ್ದು, ಫೆಬ್ರವರಿ 12ರಂದು ನಮೀಬಿಯಾ ವಿರುದ್ಧ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಅವರು ಆಡಲು ಸಾಧ್ಯತೆ ಇದೆ. ಇದಕ್ಕೂ ಮಧ್ಯೆ, ಜ್ವರದಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ ಕೂಡ ಚೇತರಿಸಿಕೊಂಡು ತಂಡದಲ್ಲಿ ಸೇರಿದ್ದಾರೆ. ಹೀಗಾಗಿ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಸುಂದರ್ ಮತ್ತು ಬುಮ್ರಾ ಇಬ್ಬರೂ ಕಣಕ್ಕಿಳಿಯುವ ಸಾಧ್ಯತೆ ಇದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
T20 ವಿಶ್ವಕಪ್ ಡ್ರಾಮಾ: ಸೋಲು ಖಚಿತವಾಗುತ್ತಲೇ ಪಾಕ್ ಅಧ್ಯಕ್ಷ ಸ್ಟೇಡಿಯಂ ತೊರೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್!
ಕೊಲಂಬೊ: Colomboನಲ್ಲಿ ನಡೆದ ಹೈವೋಲ್ಟೇಜ್ ಟಿ20 ವಿಶ್ವಕಪ್ ಮುಖಾ... ಓದನ್ನು ಮುಂದುವರಿಸಿ
IND vs PAK: ಭಾರತಕ್ಕೆ 61 ರನ್‌ಗಳ ಭರ್ಜರಿ ಜಯ; ಕೊಲಂಬೊದಲ್ಲಿ ಪಾಕ್ ಕಕ್ಕಾಬಿಕ್ಕಿ
ಕೊಲೊಂಬೊ : ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು 2026ರ ಐ... ಓದನ್ನು ಮುಂದುವರಿಸಿ
8 ವಿಕೆಟ್‌ಗಳ ಭರ್ಜರಿ ಗೆಲುವು: ಭಾರತ ಮಹಿಳಾ ತಂಡದ ಮೇಲುಗೈ
ಬ್ಯಾಂಕಾಕ್‌ನಲ್ಲಿ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್‌ನಲ್ಲಿ ಭಾರತ ಮಹಿಳಾ ತಂಡವು ಪಾ... ಓದನ್ನು ಮುಂದುವರಿಸಿ
ಇಂಗ್ಲೆಂಡ್ ಇತಿಹಾಸ ನಿರ್ಮಿಸಿದ ಜಯ: ಯುರೋಪಿಯನ್ ತಂಡವನ್ನು ಕಚಗಿಸಿದ T20 ವಿಶ್ವಕಪ್ 2026
ಕೊಲ್ಕತ್ತಾ: ಟಿ20 ವಿಶ್ವಕಪ್‌ನಲ್ಲಿ ಯುರೋಪಿಯನ್ ತಂಡಗಳ ವಿರುದ್ಧ... ಓದನ್ನು ಮುಂದುವರಿಸಿ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್‌ಗಾಗಿ ಸಮಿತಿ ರಚನೆ: ಭದ್ರತೆ ಮುಖ್ಯ – ಗೃಹ ಸಚಿವ ಜಿ. ಪರಮೇಶ್ವರ್
ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ (Indian... ಓದನ್ನು ಮುಂದುವರಿಸಿ
ಐಪಿಎಲ್ 2026: RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಆರ್‌ಸಿಬಿ ಮನೆ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಅನುಮತಿ
ಬೆಂಗಳೂರು: ಮುಂದಿನ ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗುವ ಐಪಿಎಲ್... ಓದನ್ನು ಮುಂದುವರಿಸಿ
ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ 10 ವರ್ಷಗಳ ಬಳಿಕ ಭರ್ಜರಿ ಜಯ
ಮುಂಬೈ: 2026 ಟಿ20 ವಿಶ್ವಕಪ್‌ನ 15ನೇ ಪಂದ್ಯದಲ್ಲಿ ವೆಸ್ಟ್ ಇಂಡೀ... ಓದನ್ನು ಮುಂದುವರಿಸಿ
ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ: ಫಿಯರ್‌ಲೆಸ್ ಬ್ಯಾಟರ್ ನಿಲುವಿಗೆ ಪ್ರಶ್ನೆ
ಟೀಮ್ ಇಂಡಿಯಾದ ಫಿಯರ್‌ಲೆಸ್ ಬ್ಯಾಟರ್ ಎಂದು ಖ್ಯಾತಿ ಪಡೆದ ಅಭಿಷೇಕ್ ಶರ್ಮಾ, ಈಗ ತನ್ನ... ಓದನ್ನು ಮುಂದುವರಿಸಿ
ಭಾರತ ವಿರುದ್ಧ ಪಂದ್ಯ ಆಡಬೇಕಾದರೆ ಪಾಕಿಸ್ತಾನ ಹಾಕಿದ ಮೂರು ಷರತ್ತು!
ದೆಹಲಿ: ಟಿ20 ವಿಶ್ವಕಪ್ 2026: ಭಾರತ–ಪಾಕಿಸ್ತಾನ್ ಪಂದ್ಯ ಏನಾಗಲಿ... ಓದನ್ನು ಮುಂದುವರಿಸಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ: ಸರ್ಕಾರದ ಕ್ಲಿಯರೆನ್ಸ್ ಅಗತ್ಯ – ಸಚಿವ ಜಿ. ಪರಮೇಶ್ವರ್
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬ... ಓದನ್ನು ಮುಂದುವರಿಸಿ