ಟ್ರಂಪ್ ಭಯ ಏಕೆ? ಮೋದಿ ವಿದೇಶಾಂಗ ನೀತಿ ಅಡವಿಟ್ಟಿದ್ದಾರೆ: ಪ್ರಿಯಾಂಕ್ ಖರ್ಗೆ ಕಿಡಿ
ಕಲಬುರಗಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಭಾರತ ವಿದೇಶಾಂಗ ನೀತಿ ಅಡವಿಟ್ಟಂತಾಗಿದೆ ಎಂದು ಆರೋಪಿಸಿದರು.
ಕಲಬುರಗಿಯಲ್ಲಿ ಮಾತನಾಡಿದ ಖರ್ಗೆ, “ಟ್ರಂಪ್‌ಗೆ ಯಾಕೆ ಭಯಪಡುವ ಪರಿಸ್ಥಿತಿ ಬಂದಿದೆ ಗೊತ್ತಿಲ್ಲ” ಎಂದು ಪ್ರಶ್ನಿಸಿದರು. “ಮೋದಿ ಒಳ್ಳೆಯ ಸ್ನೇಹಿತ; ಅವರ ರಾಜಕೀಯ ಭವಿಷ್ಯ ಹಾಳಾಗಬಾರದು ಎಂಬ ಕಾರಣಕ್ಕೆ ಮಾತಾಡುತ್ತಿದ್ದೇನೆ” ಎಂಬ ಟ್ರಂಪ್ ಹೇಳಿಕೆಯನ್ನು ಉಲ್ಲೇಖಿಸಿ ಸಚಿವರು ವ್ಯಂಗ್ಯವಾಡಿದರು. ಅಸ್ತಿತ್ವದಲ್ಲೇ ಇಲ್ಲದ ಪ್ರಶಸ್ತಿಗಳನ್ನು ಸ್ವೀಕರಿಸುವ ರಾಜಕೀಯ ನಡೆಗಳನ್ನು ಕೂಡ ಅವರು ಟೀಕಿಸಿದರು.
ಇನ್ನೂ, ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಗಲ್ಫ್ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು. ದುಬೈನಲ್ಲಿ ಸುಮಾರು 28 ಕನ್ನಡಿಗರು ಸಿಲುಕಿರುವ ಮಾಹಿತಿ ಲಭ್ಯವಿದ್ದು, ಕೇಂದ್ರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಖರ್ಗೆ ಸ್ಪಷ್ಟಪಡಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನಭೋಮಂಡಲದಲ್ಲಿ ಚಂದ್ರಗ್ರಹಣದ ಅಚ್ಚರಿ ದೃಶ್ಯ: 21 ನಿಮಿಷಗಳ ವಿಶೇಷ ತೇಜಸ್ಸು
ಚಿಕ್ಕಬಳ್ಳಾಪುರ: ಇಂದು ಕೇತುಗ್ರಸ್ತ ಚಂದ್ರಗ್ರಹಣ ಆರಂಭವಾಗಿದ್ದು,... ಓದನ್ನು ಮುಂದುವರಿಸಿ
ಕಾಲೇಜು ಬಳಿ KSRTC ಬಸ್ ಇಂಜಿನ್ ಭಾಗದಲ್ಲಿ ಬೆಂಕಿ: ಪ್ರಯಾಣಿಕರು ಸುರಕ್ಷಿತ
ಚಿಕ್ಕಮಗಳೂರು: ಕಾಫಿನಾಡಿನ ಹೃದಯಭಾಗ, ಜೂನಿಯರ್ ಕಾಲೇಜು ಬಳಿ ಇಂದು... ಓದನ್ನು ಮುಂದುವರಿಸಿ
ಕುತೂಹಲ ಮೂಡಿಸಿದ ಮುತ್ಯಾ ನಡೆ: ಪೋಕ್ಸೋ ಅರ್ಜಿ ವಿಚಾರಣೆ ಮುಂದೂಡಿಕೆ
ಕಲಬುರಗಿ/ಯಾದಗಿರಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿದ್ದ... ಓದನ್ನು ಮುಂದುವರಿಸಿ
ಡಿಕೆಶಿ ಜೊತೆ ಹಾಲು-ಜೇನು ಸಂಬಂಧ: ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗಿನ ಸಂಬಂಧದ... ಓದನ್ನು ಮುಂದುವರಿಸಿ
ಗುಬ್ಬಿ
ಉದ್ಯೋಗಕ್ಕಾಗಿ ಇರಾನ್‌ಗೆ ಹೋದ ಯುವಕ ಸಂಪರ್ಕವಿಲ್ಲ: ಪೋಷಕರಲ್ಲಿ ಆತಂಕ
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ಗ್ರಾಮದ ಯುವ... ಓದನ್ನು ಮುಂದುವರಿಸಿ
‘ಪ್ರಜ್ವಲ್ ಬಂಧನಕ್ಕೆ ರಾಜಕೀಯ ಕೈ’- ಕದಲೂರು ಉದಯ್ ಸ್ಫೋಟಕ ಆರೋಪ
ಮಂಡ್ಯ: ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ಹೊಸ ವಿವಾದ ಸ್ಫೋಟಗೊಂಡಿ... ಓದನ್ನು ಮುಂದುವರಿಸಿ
ಕೊಲ್ಲಿ ದೇಶಗಳಲ್ಲಿ ಕನ್ನಡಿಗರ ಆತಂಕ: ತಕ್ಷಣ ಕ್ರಮಕ್ಕೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ
ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಕೊಲ್ಲಿ ರಾಷ್ಟ್... ಓದನ್ನು ಮುಂದುವರಿಸಿ
ಉದ್ಯಮಿ ದಂಪತಿ ಮತ್ತು ಯುವ ಭಕ್ತರು ಸನ್ಯಾಸ ದೀಕ್ಷೆ: ದಾವಣಗೆರೆಯಲ್ಲಿ ಆಧ್ಯಾತ್ಮಿಕ ಜಾತ್ರೆ
ದಾವಣಗೆರೆ: ದಾವಣಗೆರೆ ನಗರದಲ್ಲಿ ಜೈನ್ ಸಮುದಾಯದ ಅಪರೂಪದ ಆಧ್ಯಾತ್... ಓದನ್ನು ಮುಂದುವರಿಸಿ
ಹಿರಿಯೂರು
ಕೋಟೆನಾಡಿನಲ್ಲಿ ಬದುಕಿರುವ ಬುಡಕಟ್ಟು ಸಂಪ್ರದಾಯ : ಅತ್ತಿಗೆ–ನಾದಿನಿಯರು ಡಿಕ್ಕಿ ಹೊಡೆಯುವ ವಿಶೇಷ ಹಬ್ಬ
ಚಿತ್ರದುರ್ಗ: ಕೋಟೆನಾಡು ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಿ.ಎನ್.... ಓದನ್ನು ಮುಂದುವರಿಸಿ
ದೇವನಹಳ್ಳಿ
ಇಸ್ರೇಲ್–ಇರಾನ್ ಯುದ್ಧ ಪರಿಣಾಮ: ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆ ವ್ಯತ್ಯಯ
ದೇವನಹಳ್ಳಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ... ಓದನ್ನು ಮುಂದುವರಿಸಿ