ಉದ್ಯೋಗಕ್ಕಾಗಿ ಇರಾನ್‌ಗೆ ಹೋದ ಯುವಕ ಸಂಪರ್ಕವಿಲ್ಲ: ಪೋಷಕರಲ್ಲಿ ಆತಂಕ
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ಗ್ರಾಮದ ಯುವಕ ಮನೋಜ್ (25) ಇರಾನ್–ಇಸ್ರೇಲ್ ಯುದ್ಧ ಪರಿಸ್ಥಿತಿಯ ನಡುವೆ ಅಲ್ಲಿಯೇ ಸಿಲುಕಿರುವ ಘಟನೆ ಕುಟುಂಬದವರಲ್ಲಿ ತೀವ್ರ ಆತಂಕ ಉಂಟುಮಾಡಿದೆ. ಉದ್ಯೋಗ ಅರಸಿ ಇರಾನ್‌ಗೆ ತೆರಳಿದ್ದ ಮನೋಜ್ ಇದೀಗ ಸಂಪರ್ಕವಿಲ್ಲದೆ ಇರುವುದರಿಂದ ಪೋಷಕರು ಕಳವಳಗೊಂಡಿದ್ದಾರೆ.
ಮನೋಜ್ ರೈತ ಶಿವಕುಮಾರ್ ಹಾಗೂ ಲೀಲಾವತಿ ದಂಪತಿಯ ಪುತ್ರ. ತುಮಕೂರಿನ ಸಿಐಟಿ ಕಾಲೇಜಿನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ಬಳಿಕ ಆನ್‌ಲೈನ್ ಮೂಲಕ ಇರಾನ್‌ನ ಮರ್ಚೆಂಟ್ ನೇವಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ. ಉತ್ತರ ಪ್ರದೇಶದಲ್ಲಿ ತರಬೇತಿ ಪಡೆದು ಸುಮಾರು ಎಂಟು ತಿಂಗಳ ಹಿಂದೆ ಇರಾನ್‌ಗೆ ತೆರಳಿದ್ದಾನೆ.
ಅಲ್ಲಿ ಬಂದರು ಪ್ರದೇಶದಿಂದ ಕಾರ್ಮಿಕರನ್ನು ತೈಲ ರಿಗ್ ಪ್ರದೇಶಗಳಿಗೆ ಕರೆದೊಯ್ಯುವ ಹಾಗೂ ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದನು. ರಜೆ ಪಡೆದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದ ವೇಳೆ ಇರಾನ್–ಇಸ್ರೇಲ್ ಯುದ್ಧ ಪ್ರಾರಂಭವಾಗಿದೆ. ಯುದ್ಧ ಆರಂಭವಾದ ಬಳಿಕ ಮನೋಜ್ ಒಮ್ಮೆ ಮಾತ್ರ ಕರೆ ಮಾಡಿ “ನಾನು ಸೇಫ್ ಆಗಿದ್ದೇನೆ, ನಾನು ಇರುವ ಸ್ಥಳದಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದು ತಾಯಿಗೆ ಧೈರ್ಯ ತುಂಬಿದ್ದಾನೆ. ಆದರೆ ಅದರ ಬಳಿಕ ಸಂಪರ್ಕ ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮನೋಜ್ ತಾಯಿ ಲೀಲಾವತಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. “ನಮ್ಮ ಮಗ ಕ್ಷೇಮವಾಗಿ ಮನೆಗೆ ಬರಬೇಕು” ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಸರ್ಕಾರಿ ಅಧಿಕಾರಿಗಳು ಕುಟುಂಬವನ್ನು ಸಂಪರ್ಕಿಸಿ ಮನೋಜ್ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ನಭೋಮಂಡಲದಲ್ಲಿ ಚಂದ್ರಗ್ರಹಣದ ಅಚ್ಚರಿ ದೃಶ್ಯ: 21 ನಿಮಿಷಗಳ ವಿಶೇಷ ತೇಜಸ್ಸು
ಚಿಕ್ಕಬಳ್ಳಾಪುರ: ಇಂದು ಕೇತುಗ್ರಸ್ತ ಚಂದ್ರಗ್ರಹಣ ಆರಂಭವಾಗಿದ್ದು,... ಓದನ್ನು ಮುಂದುವರಿಸಿ
ಕಾಲೇಜು ಬಳಿ KSRTC ಬಸ್ ಇಂಜಿನ್ ಭಾಗದಲ್ಲಿ ಬೆಂಕಿ: ಪ್ರಯಾಣಿಕರು ಸುರಕ್ಷಿತ
ಚಿಕ್ಕಮಗಳೂರು: ಕಾಫಿನಾಡಿನ ಹೃದಯಭಾಗ, ಜೂನಿಯರ್ ಕಾಲೇಜು ಬಳಿ ಇಂದು... ಓದನ್ನು ಮುಂದುವರಿಸಿ
ಕುತೂಹಲ ಮೂಡಿಸಿದ ಮುತ್ಯಾ ನಡೆ: ಪೋಕ್ಸೋ ಅರ್ಜಿ ವಿಚಾರಣೆ ಮುಂದೂಡಿಕೆ
ಕಲಬುರಗಿ/ಯಾದಗಿರಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿದ್ದ... ಓದನ್ನು ಮುಂದುವರಿಸಿ
ಟ್ರಂಪ್ ಭಯ ಏಕೆ? ಮೋದಿ ವಿದೇಶಾಂಗ ನೀತಿ ಅಡವಿಟ್ಟಿದ್ದಾರೆ: ಪ್ರಿಯಾಂಕ್ ಖರ್ಗೆ ಕಿಡಿ
ಕಲಬುರಗಿ: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ಸ... ಓದನ್ನು ಮುಂದುವರಿಸಿ
ಡಿಕೆಶಿ ಜೊತೆ ಹಾಲು-ಜೇನು ಸಂಬಂಧ: ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗಿನ ಸಂಬಂಧದ... ಓದನ್ನು ಮುಂದುವರಿಸಿ
‘ಪ್ರಜ್ವಲ್ ಬಂಧನಕ್ಕೆ ರಾಜಕೀಯ ಕೈ’- ಕದಲೂರು ಉದಯ್ ಸ್ಫೋಟಕ ಆರೋಪ
ಮಂಡ್ಯ: ಜಿಲ್ಲೆಯಲ್ಲಿ ರಾಜಕೀಯ ವಲಯದಲ್ಲಿ ಹೊಸ ವಿವಾದ ಸ್ಫೋಟಗೊಂಡಿ... ಓದನ್ನು ಮುಂದುವರಿಸಿ
ಕೊಲ್ಲಿ ದೇಶಗಳಲ್ಲಿ ಕನ್ನಡಿಗರ ಆತಂಕ: ತಕ್ಷಣ ಕ್ರಮಕ್ಕೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ
ಬೆಂಗಳೂರು: ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಕೊಲ್ಲಿ ರಾಷ್ಟ್... ಓದನ್ನು ಮುಂದುವರಿಸಿ
ಉದ್ಯಮಿ ದಂಪತಿ ಮತ್ತು ಯುವ ಭಕ್ತರು ಸನ್ಯಾಸ ದೀಕ್ಷೆ: ದಾವಣಗೆರೆಯಲ್ಲಿ ಆಧ್ಯಾತ್ಮಿಕ ಜಾತ್ರೆ
ದಾವಣಗೆರೆ: ದಾವಣಗೆರೆ ನಗರದಲ್ಲಿ ಜೈನ್ ಸಮುದಾಯದ ಅಪರೂಪದ ಆಧ್ಯಾತ್... ಓದನ್ನು ಮುಂದುವರಿಸಿ
ಹಿರಿಯೂರು
ಕೋಟೆನಾಡಿನಲ್ಲಿ ಬದುಕಿರುವ ಬುಡಕಟ್ಟು ಸಂಪ್ರದಾಯ : ಅತ್ತಿಗೆ–ನಾದಿನಿಯರು ಡಿಕ್ಕಿ ಹೊಡೆಯುವ ವಿಶೇಷ ಹಬ್ಬ
ಚಿತ್ರದುರ್ಗ: ಕೋಟೆನಾಡು ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಿ.ಎನ್.... ಓದನ್ನು ಮುಂದುವರಿಸಿ
ದೇವನಹಳ್ಳಿ
ಇಸ್ರೇಲ್–ಇರಾನ್ ಯುದ್ಧ ಪರಿಣಾಮ: ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆ ವ್ಯತ್ಯಯ
ದೇವನಹಳ್ಳಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ... ಓದನ್ನು ಮುಂದುವರಿಸಿ